‘ಭೀಮಾ ಕೋರೆಗಾಂವ್ ವಿಜಯೋತ್ಸವ’ ದಿನಾಚರಣೆ: ಬಿವಿಎಫ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

‘ಭೀಮಾ ಕೋರೆಗಾಂವ್ ವಿಜಯೋತ್ಸವ’ ದಿನಾಚರಣೆ: ಬಿವಿಎಫ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

Share

ಬಂದಾರು‌ : ತಾಲೂಕಿನ ಕಣಿಯೂರು, ಬಂದಾರು, ಮೊಗ್ರು ಹಾಗೂ ಕೊಯ್ಯೂರು ಗ್ರಾಮ ವ್ಯಾಪ್ತಿಯ ಬಿವಿಎಫ್ ನೇತೃತ್ವದಲ್ಲಿ
ಬಂದಾರು ಗ್ರಾಮದ ಪುನರಡ್ಕ ಸಿದ್ಧಾರ್ಥ ಕಾಲೋನಿಯಲ್ಲಿ
208ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ದಿನಾಚರಣೆ
ಹಾಗೂ ಬಿವಿಎಫ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಜ.1ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ‌ ಮಾತನಾಡಿದ ಸಂಪ್ಯ ಠಾಣಾ ಹೆಚ್. ಸಿ. ವೆಂಕಪ್ಪ ಪಿ.ಎಸ್. ಕೋರೆಗಾಂವ್ ಕದನದ ಸ್ವಾಭಿಮಾನ ದಿಗ್ವಿಜಯದ ಪರಿಣಾಮ ಭಾರತದಲ್ಲಿ ಸಾರ್ವತ್ರಿಕ ಶಿಕ್ಷಣಕ್ಕೆ ನಾಂದಿಯಾಯಿತು. ಶಿಕ್ಷಣದ ಅವಕಾಶ ಪಡೆದಂತಹ ಅಂಬೇಡ್ಕರ್ ರವರು ದೇಶದ ಸಂವಿಧಾನ ರಚಿಸಿ ಸರ್ವರಿಗೂ ಸಮತೆ, ಸೋದರತೆ, ಸ್ವತಂತ್ರ ಜೀವನ ಕಾನೂನುಬದ್ಧಗೊಳಿಸಿದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಳುವಳಿಯ ಹಿರಿಯ ಮುಖಂಡ ಅಣ್ಣು ಸಾಧನ,
ಎಂ ಬಾಬು , ಸಂಜೀವ ನೀರಾಡಿ, ಹಾಗೂ ಕರಿಯಪ್ಪ ಬೆಳಾಲು ಅತಿಥಿಗಳಾಗಿ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.
ಕಾಲೋನಿಯ ಹಿರಿಯರಾದ ಗೋಪಾಲ ಅತಿಥಿಯಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ದೇಶಕ್ಕೆ ಪರಿಚಯಿಸಿದ 1818 ಜನವರಿ 1ರ ಕೋರೆಗಾಂವ್ ಕದನದ ಇತಿಹಾಸವನ್ನು ವಿವರಿಸಲಾಯಿತು. ಕಣಿಯೂರು ಬಿವಿಎಫ್ ಘಟಕದ ನೂತನ ಪದಾಧಿಕಾರಿಗಳನ್ನು ಪರಿಚಯಿಸಿ ಅಭಿನಂದಿಸಲಾಯಿತು.

ಜಿಲ್ಲಾ ಬಿವಿಎಫ್ ಸಂಯೋಜಕ ಲೋಕೇಶ್ ನೀರಾಡಿ ‘ಸಂವಿಧಾನ ಪೀಠಿಕೆ’ ಬೋಧಿಸಿದರು. ರಮೇಶ್ ಬಿ.ಎಲ್. ಕಾರ್ಯಕ್ರಮ ನಿರೂಪಿಸಿ ದಿನೇಶ್ ಪಿ ಸ್ವಾಗತಿಸಿದರು. ಪ್ರವೀಣ್ ಪುನರಡ್ಕ ಧನ್ಯವಾದವಿತ್ತರು.
ಕಾರ್ಯಕ್ರಮದಲ್ಲಿ ಪಿ.ಎಸ್. ಶ್ರೀನಿವಾಸ್, ಕೃಷ್ಣಪ್ಪ.ಪಿ., ಪೂವಪ್ಪ ಬೆಳಾಲು, ಪ್ರವೀಣ್ ಉಮಿಯ, ಲೋಹಿತ್ ಉಮಿಯ, ಅನಂತ್ ಪಿ, ರಮೇಶ್ ಉಮಿಯ, ಕೆ.ವೀರಪ್ಪ, ಕೃಷ್ಣ, ರಘು ಪುನರಡ್ಕ
ಬಿ.ಕೆ. ಸಂಜೀವ, ಸುರೇಶ್ ನೀರಾಡಿ , ಸತೀಶ್, ಸುರೇಂದ್ರ, ಪ್ರಕಾಶ್, ವಸಂತ್, ನವೀನ್, ಗಣೇಶ್ ಕೆ, ಪ್ರಶಾಂತ್ ಮತ್ತಿತರರು ಇದ್ದರು.

Post Comment

ಟ್ರೆಂಡಿಂಗ್‌

error: Content is protected !!