ನಿಡ್ಲೆ ಆಯುಷ್ಮಾನ್ ಉಪ ಆರೋಗ್ಯ ಕೇಂದ್ರ ರಾಷ್ಟ್ರಮಟ್ಟದಲ್ಲಿ ಆಯ್ಕೆ : ಶಾಸಕರಿಂದ ಅಭಿನಂದನೆ

ಬೆಳ್ತಂಗಡಿ : ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದ ನಿಡ್ಲೆ ಉಪ ಆರೋಗ್ಯ ಕೇಂದ್ರವು ತನ್ನ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ನಿಡ್ಲೆ ಗ್ರಾಮಪಂಚಾಯತ್ ವ್ಯಾಪ್ತಿಯ ನಿಡ್ಲೆ ಆಯುಷ್ಮಾನ್ ಆರೋಗ್ಯ ಕೇಂದ್ರವು ವೈದ್ಯರು ಮತ್ತು ಸಿಬ್ಬಂದಿ ವರ್ಗದ ಉತ್ತಮ ಗುಣಮಟ್ಟದ ಸೇವಾ ಸಾಧನೆಗಾಗಿ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗುವ ಮೂಲಕ
ಇಲಾಖಾ ಮಟ್ಟದಲ್ಲಿ ವ್ಯಾಪಕ ಅಭಿನಂದನೆಗೆ ಪಾತ್ರವಾಗಿದೆ. ಗುಣಮಟ್ಟದ ಮತ್ತು ಸುರಕ್ಷತೆಯ ಸೇವೆಗಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನಿಡ್ಲೆ ಆಯುಷ್ಮಾನ್ ಉಪ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗವನ್ನು ಶಾಸಕ ಹರೀಶ್ ಪೂಂಜ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ನಿಡ್ಲೆ ಆಯುಷ್ಮಾನ್ ಆರೋಗ್ಯ ಕೇಂದ್ರವು 2001ರಲ್ಲಿ ಪ್ರಾರಂಭಗೊಂಡಿದ್ದು 2021ರಲ್ಲಿ ಮೇಲ್ದರ್ಜೆಗೇರಿ ಸಮುದಾಯ ಆರೋಗ್ಯಾಧಿಕಾರಿ ಹುದ್ದೆ ನೇಮಕಗೊಂಡಿತ್ತು.
ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ತುಷಾರ ಕುಮಾರಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ನಿಡ್ಲೆ ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಯಾಗಿ ವಿನುತಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಯಾಗಿ ಸುಜಾತ, ಆಶಾ ಕಾರ್ಯಕರ್ತೆಯರಾದ ಯುಮುನಾ, ಸುನೀತಾ, ಚಂದ್ರಾವತಿ ಇವರು ವೈದ್ಯಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಈ ಭಾಗದ ಜನರು ಎಲ್ಲಾ ಪ್ರಾಥಮಿಕ ಸೇವೆಗಳನ್ನು ಪಡೆಯುತ್ತಿದ್ದಾರೆ.















Post Comment