ಬೆಳ್ತಂಗಡಿ ಯುವ ವಕೀಲರ ವೇದಿಕೆ ನೂತನ ಪದಾಧಿಕಾರಿಗಳ ಆಯ್ಕೆ

ಬೆಳ್ತಂಗಡಿ ಯುವ ವಕೀಲರ ವೇದಿಕೆ ನೂತನ ಪದಾಧಿಕಾರಿಗಳ ಆಯ್ಕೆ

Share


ಬೆಳ್ತಂಗಡಿ : ವಕೀಲರ ಸಂಘದ ಅಡಿಯಲ್ಲಿ ಕಾರ್ಯಾಚರಿಸುವ ಯುವ ವಕೀಲರ ವೇದಿಕೆಯನ್ನು ರಚಿಸಲಾಗಿದ್ದು ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ಯುವ ನ್ಯಾಯವಾದಿ ಉದಯ ಕುಮಾರ್ ಬಿ.ಕೆ. ಬಂದಾರು, ಉಪಾಧ್ಯಕ್ಷರಾಗಿ ಜೋಸ್ನಾ, ವೆಲೋನ ಕೊರೆಯ ಮತ್ತು ಅಭಿನ್ ಪ್ರಾನ್ಸಿಸ್, ಕಾರ್ಯದರ್ಶಿಯಾಗಿ ಯಕ್ಷಿತಾ, ಜೊತೆ ಕಾರ್ಯದರ್ಶಿಯಾಗಿ ಇರ್ಷಾದ್, ಕೋಶಾಧಿಕಾರಿಯಾಗಿ ಜಿತೇಶ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರತೀಕ್ಷಾ ಆಯ್ಕೆಯಾದರು.
ತಾಲೂಕಿನ ಹಲವಾರು ಸಂಘ ಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿರುವ ಯುವ ವಕೀಲ ಉದಯ ಕುಮಾರ್ ಬಿ.ಕೆ. ಸ್ಥಳೀಯ ಗ್ರಾಮಪಂಚಾಯತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಅನುಭವ ಹೊಂದಿದ್ದಾರೆ.
ಉತ್ತಮ ಸಂಘಟನಾ ಚತುರತೆ ಹೊಂದಿರುವ ಇವರು ಇದೀಗ ಯುವ ವಕೀಲರ ವೇದಿಕೆಯ ಸಾರಥ್ಯವಹಿಸಿಕೊಂಡಿದ್ದು ವೇದಿಕೆಯ ಮೂಲಕ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗ್ರಾಮೀಣ ಭಾಗದ ಯುವ ವಕೀಲರನ್ನು‌ ಸಂಘಟಿಸುವ ಗುರಿ ಹೊಂದಿದ್ದಾರೆ.
ಯುವ ಸಂಘಟಕರಾಗಿ ಬಂದಾರು ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷರಾಗಿ ತಮ್ಮ ಅವಧಿಯಲ್ಲಿ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುವ ಮೂಲಕ‌ ಬಂದಾರು ಪಂಚಾಯತ್ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿತ್ತು.

ಸ್ಥಳೀಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷರು, ಬೆಳ್ತಂಗಡಿ ತಾಲೂಕು ಭಾರತೀಯ ಮಾಜ್ದೂರು ಸಂಘದ ಅಧ್ಯಕ್ಷರಾಗಿ ಕಾರ್ಮಿಕಪರ ಹೋರಾಟಗಳಲ್ಲಿ ಗುರುತಿಕೊಂಡಿದ್ದಾರೆ.
ಕಳೆದ 11 ವರ್ಷಗಳಿಂದ ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಶ್ರೀ ವಿಷ್ಣು ಅಸೋಸಿಯೇಟ್ಸ್ ಸಂಸ್ಥೆಯ ಮೂಲಕ ಜನರಿಗೆ ಕಾನೂನು ಸೇವೆ ಹಾಗೂ ಸರಕಾರದ ಅನೇಕ ಯೋಜನೆಗನ್ನು ಜನರಿಗೆ ಸಿಗುವ ಹಾಗೆ ಮಾಹಿತಿ ಕಾರ್ಯಾಗಾರನ್ನು ಮಾಡಿಕೊಂಡು ಬರುತ್ತಿದ್ದು ಇದೀಗ ಯುವ ವಕೀಲರ ವೇದಿಕೆಯ ನೇತೃತ್ವವಹಿಸಿಕೊಂಡು ತಾಲೂಕಿನ ವಕೀಲರ ವಲಯದಲ್ಲಿ ನಿರೀಕ್ಷೆಯನ್ನು ಮೂಡಿಸಿದ್ದಾರೆ.

ವಕೀಲರ ಮಾತೃಸಂಘದ ಅಡಿಯಲ್ಲಿ ಯುವ ವಕೀಲರನ್ನು ಕೇಂದ್ರೀಕರಿಸಿ ಅಸ್ತಿತ್ವಕ್ಕೆ ಬಂದಿರುವ ಯುವ ವಕೀಲರ ವೇದಿಕೆ ತನ್ನ ಅವಧಿಯಲ್ಲಿ ಗ್ರಾಮೀಣ ವಕೀಲರ ಹಿತಕ್ಕಾಗಿ ಯಾವ ಜನಪರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದೆ ಎಂಬುದನ್ನು‌ ಕಾದು ನೋಡಬೇಕಾಗಿದೆ. ಗ್ರಾಮೀಣ ಯುವ ವಕೀಲರ ಹಿತಕ್ಕಾಗಿ ಶ್ರಮಿಸುವ ವೇದಿಕೆಯಾಗಲಿ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.

Post Comment

ಟ್ರೆಂಡಿಂಗ್‌

error: Content is protected !!