ಇತಿಹಾಸ ಪ್ರಸಿದ್ಧ ಕಾಜೂರು ಮಖಾಂ ಉರೂಸ್ ಉದ್ಘಾಟನೆ:

ಇತಿಹಾಸ ಪ್ರಸಿದ್ಧ ಕಾಜೂರು ಮಖಾಂ ಉರೂಸ್ ಉದ್ಘಾಟನೆ:

Share

ಅಲ್ಲಾಹನ ಇಷ್ಟದಾಸ ಔಲಿಯಾಗಳು
ಅಲ್ಲಾಹನೆಡೆಯಲ್ಲಿ ಉನ್ನತ ಸ್ಥಾನ ಪಡೆದುಕೊಂಡವರು :
ವೈ.ಎಂ.ಕೆ ಡಾ. ಅಬ್ದುಲ್ಲಕುಂಞಿ

ಬೆಳ್ತಂಗಡಿ : ಕಾಜೂರು ಮಖಾಂ ಶರೀಫ್ ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಅಲ್ಲಾಹನ ಇಷ್ಟದಾಸರಾದ ಔಲಿಯಾಗಳು ಆಂತರ್ಯದ ಭಕ್ತಿ ಶ್ರದ್ಧೆಯಿಂದ ಅಲ್ಲಾಹನೆಡೆಯಲ್ಲಿ ಉನ್ನತ ಸ್ಥಾನ ಪಡೆದುಕೊಂಡಿದ್ದಾರೆ. ನಮ್ಮ ಜೀವನದಲ್ಲೂ ಇದೇ ಮಾದರಿ ಅನುಸರಿಸಬೇಕಿದೆ. ಅಲ್ಲಾಹನ‌ ನೋಟ ಬಾಹ್ಯ ಚಟುವಟಿಕೆಗಳ ಬದಲು ನಮ್ಮ ಆಂತರ್ಯದ ಭಾವನೆಯನ್ನಾಗಿದೆ ಎಂದು ಯೆನಪೋಯ ಸ್ವಾಯತ್ತ ವಿಶ್ವವಿದ್ಯಾಲಯದ ಕುಲಪತಿ ವೈಎಮ್‌ಕೆ ಡಾ. ಅಬ್ದುಲ್ಲಕುಂಞಿ ಹೇಳಿದರು.
ಅವರು ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿವೆತ್ತಿರುವ ಕಾಜೂರು ಮಖಾಂ ಶರೀಫ್ ನಲ್ಲಿ ಜ.16ರಿಂದ ಆರಂಭಗೊಂಡ ಉರೂಸ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಅಲೈಡ್ & ಹೆಲ್ತ್ ಕೇರ್ ಕೌನ್ಸಿಲ್‌ ಚೇರ್ಮೆನ್ ಡಾ. ಯು.ಟಿ ಇಫ್ತಿಕಾರ್ ಅಲಿ ಅವರು ಮಾತನಾಡಿ, ಕಾಜೂರಿಗೆ ಶಾದಿಮಹಲ್ ನಿರ್ಮಾಣದ ಉದ್ದೇಶಕ್ಕೆ ಸಚಿವ ಝಮೀರ್ ಅಹಮ್ಮದ್ ಬಳಿ ನಿಮ್ಮ ನಿಯೋಗವನ್ನೇ ಕರೆದುಕೊಂಡುಹೋಗಿ ಕ್ರಮವಹಿಸಲಾಗುವುದು. ಈ ಪ್ರದೇಶದಲ್ಲಿ ವೈದ್ಯಕೀಯ ಶಿಕ್ಷಣ, ಪ್ಯಾರಾ ಮೆಡಿಕಲ್ ಇತ್ಯಾದಿ ಅಧ್ಯಯನಾಸಕ್ತ ಅರ್ಹ ವಿದ್ಯಾರ್ಥಿಗಳಿದ್ದರೆ ಅಂತವರಿಗೆ ನಮ್ಮ ಫೌಂಡೇಶನ್ ಮೂಲಕ ಕಲಿಕಾ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಭರವಸೆಯಿತ್ತರು.

ಕಿಲ್ಲೂರುನಿಂದ ಸಂದಲ್ ಮೆರವಣಿಗೆ:
ಉರೂಸ್ ಸಂಪ್ರದಾಯದಂತೆ ಕಿಲ್ಲೂರಿನಿಂದ ಸಂದಲ್ ಮೆರವಣಿಗೆ ಆಗಮಿಸಿ,‌ ಕಾಜೂರು ವತಿಯಿಂದ ಭವ್ಯವಾಗಿ ಸ್ವಾಗತಿಸಲಾಯಿತು.
ಬಳಿಕ ಮೇಲಿನ‌ ದರ್ಗಾ ಪರಿಸರದಲ್ಲಿ ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಧ್ವಜಾರೋಹಣ ನೆರವೇರಿಸಿದರು.
ನಾಡಿನ ಕ್ಷೇಮಕ್ಕಾಗಿ ಮತ್ತು ಕೋಮು ಸೌಹಾರ್ದತೆಗಾಗಿ ಔಲಿಯಾಗಳ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಸಯ್ಯಿದ್‌ ಕಾಜೂರು ತಂಙಳ್ ಉದ್ಘಾಟನೆ ನೆರವೇರಿಸಿದರು. ಸಯ್ಯಿದ್‌ ಕಿಲ್ಲೂರು ತಂಙಳ್ ದರ್ಗಾ ಝಿಯಾರತ್ ಗೆ ನೇತೃತ್ವ ನೀಡಿದರು.
ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ನೂರುದ್ದೀನ್ ಸಾಲ್ಮರ, ಅಕ್ಬರ್ ಬೆಳ್ತಂಗಡಿ, ಸಿರಾಜುದ್ದೀನ್ ಸಖಾಫಿ ಪೀಚಲಾರ್, ಡಿ. ಡಿ ಅಬ್ದುಲ್ ರಝಾಕ್ ಕನ್ನಡಿಕಟ್ಟೆ ಮೊದಲಾದವರು ಶುಭಕೋರಿದರು.
ಸಮಾರಂಭದ ವೇದಿಕೆಯಲ್ಲಿ ಕಿಲ್ಲೂರು‌ ಮುದರ್ರಿಸ್ ಅಬ್ದುಲ್ ರಹಿಮಾನ್ ಬಾಖವಿ ಕಕ್ಕಿಂಜೆ, ಉರೂಸ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ ಕಿಲ್ಲೂರು, ಕೋಶಾಧಿಕಾರಿ ಡಿ ವೈ ಉಮರ್, ಹಿರಿಯ ಸದಸ್ಯ ಬದ್ರುದ್ದೀನ್ ಕಾಜೂರು, ಜೊತೆ ಕಾರ್ಯದರ್ಶಿ ಅಶ್ರಫ್ ಕಿಲ್ಲೂರು, ಪ್ರಮುಖರಾದ ನಝೀರ್ ಮಠ, ಚಾರ್ಮಾಡಿ ಹಸನಬ್ಬ, ಕೆ.ಯು ಉಮರ್ ಸಖಾಫಿ, ಕೆ.‌ಮುಹಮ್ಮದ್ ಪುತ್ತುಮೋನು ಕಿಲ್ಲೂರು, ಹಾಜಿ ಅಬ್ದುಲ್‌ ರಝಾಕ್ ಸಖಾಫಿ ಮಡಂತ್ಯಾರ್, ಸಾದಿಕ್‌ ಮಾಸ್ಟರ್‌ ಮಲೆಬೆಟ್ಟು, ದಾಸಪ್ಪ ಗೌಡ ಕಾಂಜಾನು, ಕೆ.ಯು ಮುಹಮ್ಮದ್‌ ಮಲವಂತಿಗೆ, ಶಾಹುಲ್ ಹಮೀದ್‌ ಮಿತ್ತಬಾಗಿಲು, ಮುಹಮ್ಮದ್ ರಫಿ ಬೆಳ್ತಂಗಡಿ, ಕೆ ಶೇಖಬ್ಬ ಕುಕ್ಕಾವು, ಬಿ.ಎ ಯೂಸುಫ್ ಶರೀಫ್, ಹಾಜಿ ಇಬ್ರಾಹಿಂ ಮದನಿ, ಚಂದ್ರಶೇಖರ ಗೌಡ, ಬಿ.ಹೆಚ್ ಅಬೂಬಕ್ಕರ್ ಹಾಜಿ, ಜೆ.ಹೆಚ್ ಅಬ್ಬಾಸ್, ಕೆ.ಹೆಚ್ ಮುಹಮ್ಮದ್, ಹಾಜಿ ಸಲೀಂ ಪೀಚಲಾರ್,‌ ಅಬ್ದುಲ್ ರಹಿಮಾನ್ ಬಿ.ಆರ್.ಆರ್, ಮುಸ್ತಫ ರೂಬಿ ಕಾಟಿಪಳ್ಳ, ಯು.ಕೆ ಅಬ್ದುಲ್‌ ಶುಕೂರ್, ಅಬ್ದುಲ್‌‌ ಸಮದ್, ಅನ್ಸಾರ್ ತಾಜ್ ಲಾಯಿಲ, ಅಬ್ದುಲ್‌ ಹನೀಫ್ ಲಾಯಿಲ, ಬಿ.ಎಂ ಇಲ್ಯಾಸ್, ಸುಲೈಮಾನ್ ಹಾಜಿ ಚಾರ್ಮಾಡಿ, ಹಾರಿಸ್ ಪುತ್ರಬೈಲು, ಅಬ್ದುಲ್ ಮುತ್ತಲಿಬ್ ಇಂದಬೆಟ್ಟು, ವಝೀರ್ ಮುಹಮ್ಮದ್ ಬಂಗಾಡಿ, ಹಮೀದ್ ಎರ್ಮಾಳ, ಬಿ ಸಲೀಂ ಬೆದ್ರಬೆಟ್ಟು, ಮುಹಮ್ಮದ್ ಪೆರ್ದಾಡಿ, ಮುಹಮ್ಮದ್ ಕೊಲ್ಲಿಬೆಟ್ಟು, ಕೆ.ಪಿ ಮುಹಮ್ಮದ್ ಕಾಜೂರು, ನಝೀರ್ ಪೆರ್ದಾಡಿ, ಶರೀಫ್ ಮುಈನಿ ಪೆರ್ದಾಡಿ, ವಝೀರ್ ಕೋಟೆಹೊಳೆ ಕಳಸ ಮೊದಲಾದವರು ಉಪಸ್ಥಿತರಿದ್ದರು.‌
ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಸ್ವಾಗತಿಸಿ ಪ್ರಸ್ತಾವನೆಗೈದರು. ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿ ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ವಂದಿಸಿದರು.

Post Comment

ಟ್ರೆಂಡಿಂಗ್‌

error: Content is protected !!