ಗುಂಡೂರಿ ಶ್ರೀ ಗುರುಚೈತನ್ಯ ಸೇವಾಶ್ರಮದಲ್ಲಿ ಕೀರ್ತಿಶೇಷ ಯಂ. ವಿಜಯರಾಜ ಅಧಿಕಾರಿ ಅವರ ಹುಟ್ಟುಹಬ್ಬ ಹಾಗು ಪುಣ್ಯಸ್ಮರಣೆ ಕಾರ್ಯಕ್ರಮ

ವೇಣೂರು : ಇಲ್ಲಿನ ಗುಂಡೂರಿ ಗ್ರಾಮದ ಶ್ರೀ ಗುರುಚೈತನ್ಯ ಸೇವಾಶ್ರಮದಲ್ಲಿ ವಿವೇಕಾನಂದ ಸೇವಾ ಟ್ರಸ್ಟ್ ವತಿಯಿಂದ, ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಕೀರ್ತಿ ಶೇಷ ಯಂ ವಿಜಯರಾಜ ಅಧಿಕಾರಿ ಯವರ ಹುಟ್ಟುಹಬ್ಬ ಹಾಗು ಪುಣ್ಯಸ್ಮರಣೆ ಕಾರ್ಯಕ್ರಮವು ಫೆ 5ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಟ್ರಸ್ಟ್ ನ ನೂತನ ಕಾರ್ಯಾಧ್ಯಕ್ಷ ಡಾ. ಧರಣೇಂದ್ರ ಜೈನ್ ನೊಂದವರ ದೀನರ ಕಣ್ಣೀರು ಒರೆಸಿ ಬಾಳಿಗೆ ಬೆಳಕು ತೋರಿದ ವಿವೇಕಾನಂದ ಸೇವಾ ಟ್ರಸ್ಟ್ ನ ಸ್ಥಾಪಕಾಧ್ಯಕ್ಷರಾದ ಕೀರ್ತಿಶೇಷ ಯಂ.ಮಾರಗುತ್ತು ವಿಜಯರಾಜ ಅಧಿಕಾರಿ ಇವರ ಸವಿನೆನಪು ಸದಾ ಉಳಿಯುವಂತೆ ಟ್ರಸ್ಟ್ ನ ಅಡಿಯಲ್ಲಿ ನಿರಂತರ ಸಮಾಜಮುಖಿ ಸೇವೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದದ ಪ್ರಯುಕ್ತ ರಾಜೇಶ್ವರಿ ವಿಜಯರಾಜ ಅಧಿಕಾರಿ ಇವರು ಕೀರ್ತಿಶೇಷ ವಿಜಯರಾಜ ಅಧಿಕಾರಿಯವರಿಗೆ ಪುಣ್ಯ ನಮನ ಸಲ್ಲಿಸಿ ಪುಷ್ಪಾಂಜಲಿ ಸಮರ್ಪಿಸಿದರು.
ಈ ಸಂದರ್ಭ ಸೇವಾಶ್ರಮದ ಆಶ್ರಮವಾಸಿಗಳಿಗೆ ಸಿಹಿಊಟ ಹಂಚಲಾಯಿತು. ಡಾ.ಸಂದ್ಯಾ ಧರಣೇಂದ್ರ ಜೈನ್, ಕೋಶಾಧಿಕಾರಿ ಕೃಷ್ಣಾನಂದ ಭಟ್, ಸದಸ್ಯರಾದ ಭಾಸ್ಕರ ಪೈ, ಭರತ್ ರಾಜ್ ಮುದ್ಯ, ಪಶುವೈದ್ಯ ಸುಕೀರ್ತ್ ಜೈನ್ , ಸಂಜೀವ ಪೂಜಾರಿ ಮೂಡ್ಲ, ರಾಜೇಂದ್ರ. ವಿ., ಜಿನೇಶ್ ಜೈನ್ ಮತ್ತಿತರರು. ಉಪಸ್ಥಿತರಿದ್ದರು .
ಟ್ರಸ್ಟ್ ಕಾರ್ಯದರ್ಶಿ ಎಚ್ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.
ಶ್ರೀಗುರುಚೈತನ್ಯ ಸೇವಾಶ್ರಮದ ಹೊನ್ನಯ್ಯ ಕಾಟಿಪಳ್ಳ ವಂದಿಸಿದರು.












Post Comment