ಸಂಸದ ಬ್ರಿಜೇಶ್ ಚೌಟ ಅವರಿಂದ ನವದೆಹಲಿಯಲ್ಲಿ ರಸ್ತೆ ಸಾರಿಗೆ-ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಭೇಟಿ: ಶಾಸಕ ಹರೀಶ್ ಪೂಂಜ ಸಾಥ್

ಸಂಸದ ಬ್ರಿಜೇಶ್ ಚೌಟ ಅವರಿಂದ ನವದೆಹಲಿಯಲ್ಲಿ ರಸ್ತೆ ಸಾರಿಗೆ-ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಭೇಟಿ: ಶಾಸಕ ಹರೀಶ್ ಪೂಂಜ ಸಾಥ್

Share
InShot_20260207_103252900-1024x1024 ಸಂಸದ ಬ್ರಿಜೇಶ್ ಚೌಟ ಅವರಿಂದ ನವದೆಹಲಿಯಲ್ಲಿ              ರಸ್ತೆ ಸಾರಿಗೆ-ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ  ಭೇಟಿ: ಶಾಸಕ ಹರೀಶ್ ಪೂಂಜ ಸಾಥ್

ಶಿರಾಡಿ ಘಾಟ್ ಸೇರಿದಂತೆ ಜಿಲ್ಲೆಯ ರಾ.ಹೆದ್ದಾರಿ ಯೋಜನೆ ಪ್ರಗತಿ ಪರಿಶೀಲನೆ ಬಗ್ಗೆ ಮಾತುಕತೆ

ಮಂಗಳೂರು : ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MORTH) ಕಾರ್ಯದರ್ಶಿ ಉಮಾಶಂಕರ್ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಜಿಲ್ಲೆಯ ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿ ಪರಿಶೀಲನೆ ಕುರಿತಂತೆ ಮಾತುಕತೆ ನಡೆಸಿದರು.
ಈ ಸಂದರ್ಭ ಪ್ರಮುಖವಾಗಿ ಶಿರಾಡಿ ಘಾಟ್ ಹಾಗೂ ಸುರತ್ಕಲ್ – ಬಿ.ಸಿ ರೋಡ್ ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವರವಾದ ಯೋಜನಾ ವರದಿ(DPR) ಕುರಿತು ಸಮಾಲೋಚನೆ ನಡೆಸಲಾಯಿತು. ಹಾಗೂ ಮಾಣಿ – ಸಂಪಾಜೆ ನಡುವಿನ ರಸ್ತೆಯು ಇದೀಗ NHAI ವ್ಯಾಪ್ತಿಗೆ ಬಂದಿರುವುದರಿಂದ, ಅದರ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮರುಪರಿಶೀಲಿಸುವ ಅಗತ್ಯತೆಯನ್ನು ಈ ಸಂದರ್ಭ ಮನವರಿಕೆ ಮಾಡಿಕೊಡಲಾಯಿತು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಉಪಸ್ಥಿತರಿದ್ದರು.

Post Comment

ಟ್ರೆಂಡಿಂಗ್‌

error: Content is protected !!