ಬೆಳ್ತಂಗಡಿ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲೊಬ್ಬ ನಿರುಪಯೋಗಿ ಸಿಬ್ಬಂದಿ..!!
ಬೆಳ್ತಂಗಡಿ : ಇಲ್ಲಿನ ನೂತನ ಪ್ರವಾಸಿ ಮಂದಿರದ ಸ್ವಚ್ಛತಾ ಸಿಬ್ಬಂದಿಯಾಗಿ ‘ಬಡ್ಡಿ’ಕೋರ ವ್ಯಕ್ತಿಯೊಬ್ಬನನ್ನು (ಪಿಡಬ್ಲ್ಯುಡಿ) ಲೋಕೋಪಯೋಗಿ ಇಲಾಖಾಧಿಕಾರಿಗಳು ಹೊರ ಗುತ್ತಿಗೆ ಆಧಾರದಲ್ಲಿನೇಮಕ ಮಾಡಿಕೊಂಡಿರುವ ಕುತೂಹಲಕರ ಸಂಗತಿಯೊಂದು ಬೆಳಕಿಗೆ ಬಂದಿದ್ದು ಈತ ಐಬಿ ಗುಮಾಸ್ತನೋ…?
ಪಿಡಬ್ಲ್ಯುಡಿ ಕಚೇರಿಯ ಕಂಪ್ಯೂಟರ್ ಸಿಬ್ಬಂದಿಗಳ ಕಾವಲುಗಾರನೋ..? ಎಂಬ ಬಗ್ಗೆ ಇಲಾಖೆಯ ಪಡಸಾಲೆಯಲ್ಲಿ ಗುಸುಗುಸು ಚರ್ಚೆಗೆ ಕಾರಣವಾಗುತ್ತಿದೆ.
ಈತ ಕಾಟಾಚಾರಕ್ಕೆ ಕರ್ತವ್ಯಕ್ಕೆ ಹಾಜರಾಗುತ್ತಾ ಸಂಬಳ ಪಡೆಯುತ್ತಿರುವುದು ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ
ನುಂಗಲಾರದ ತುತ್ತಾಗಿದೆ.
ಬೆಳ್ತಂಗಡಿ ಸರಕಾರಿ ಪ್ರವಾಸಿ ಮಂದಿರದಲ್ಲಿ ಹಗಲು ಪಾಳಿಯಲ್ಲಿ ಒಬ್ಬರು ರಾತ್ರಿ ಪಾಳಿಯಲ್ಲಿ ಇಬ್ಬರು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇನ್ನೊಂದೆಡೆ ಸುಮಾರು 11 ತಿಂಗಳ ಹಿಂದೆ ನೂತನ ಪ್ರವಾಸಿ ಮಂದಿರದ ಸ್ವಚ್ಛತಾ ಕೆಲಸಕ್ಕಾಗಿ ಹೊರ ಗುತ್ತಿಗೆ ಆಧಾರದಲ್ಲಿ ವ್ಯಕ್ತಿಯೊಬ್ಬರನ್ನು ನೇಮಕ ಮಾಡಿಕೊಳ್ಳಲಾಗಿದ್ದು ಆದರೆ ಈ ಸಿಬ್ಬಂದಿ ಐಬಿಯಲ್ಲಿ ಎಲ್ಲರ ಮುಂದೆ ಮುಕ್ತವಾಗಿ ಕೆಲಸ ಮಾಡದೆ ಕದ್ದು ಮುಚ್ಚಿ ಕೆಲಸ ಮಾಡುತ್ತಿರುವುದು ಕೆಲವು ಅನುಮಾನಗಳಿಗೆ ಕಾರಣವಾಗಿದೆ.
ಇದೀಗ ಕದ್ದುಮುಚ್ಚಿ ಐಬಿಯಲ್ಲಿ ಕಾಣಿಸಿಕೊಳ್ಳುವ ಈತನನ್ನು ಟೆಂಡರ್ ಮೂಲಕ ಪಿಡಬ್ಲ್ಯುಡಿ ಗುತ್ತಿಗೆದಾರರೊಬ್ಬರು ನೇಮಕ ಮಾಡಿಕೊಂಡಿರುವ ಸಂಗತಿ ಇದೀಗ ಬಯಲಾಗಿದೆ.
ಬಡ್ಡಿ ವ್ಯವಹಾರದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯನ್ನು ಐಬಿ ಸ್ವಚ್ಛತಾ ಸಿಬ್ಬಂದಿಯಾಗಿ ಯಾವ ಅರ್ಹತೆ ಮತ್ತು ಮಾನದಂಡದ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂಬ ಪ್ರಶ್ನೆ ಒಂದೆಡೆಯಾದರೆ ಕೆಲವು ಪೊಲೀಸರು, ವ್ಯಾಪಾರಿಗಳು ಈತನ ಬಡ್ಡಿ ದಂಧೆಯ ಸಂತ್ರಸ್ತರು ಎಂಬ ವಿಚಾರವೂ ರಹಸ್ಯವಾಗಿ ಉಳಿದಿಲ್ಲ.
ಆದರೆ ಈಗ ಸಂಗತಿ ಇದಲ್ಲ ; ಈ ವ್ಯಕ್ತಿ ಪ್ರವಾಸಿ ಮಂದಿರದ ಸ್ವಚ್ಛತಾ ಸಿಬ್ಬಂದಿಯಾಗಿ ಹೊರಗುತ್ತಿಗೆಯಲ್ಲಿ ನೇಮಕಗೊಂಡಿರುವ ಸಂಗತಿ ಹೊರ ಜಗತ್ತಿಗೆ ಯಾರಿಗೂ ತಿಳಿದಿಲ್ಲ; ಈ ಸ್ವಾರಸ್ಯಕರ ವಿಷಯ ತಿಳಿದರೆ ತಾಲೂಕಿನ ಜನತೆಯೇ ಅಚ್ಚರಿ ಪಡಬಹುದು..!
ಏಕೆಂದರೆ ಇಂಥ ಬಡ್ಡಿ ವ್ಯಾಪಾರಿಗೇಕೆ ಐಬಿ ಗುಡಿಸುವ ಕೆಲಸ ಎಂಬ ಪ್ರಶ್ನೆ ಇದೆ. ಖಾಲಿ ಇರುವ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಬೇರೆ ಅರ್ಹರು ಇರಲಿಲ್ಲವೇ? ಅಥವಾ ಬೇನಾಮಿ ಹುದ್ದೆಯ ಸಂಬಳದಲ್ಲಿ ಪಾಲು ಪಡೆಯಲು ಇದೊಂದು ಡಮ್ಮಿ ನೇಮಕಾತಿಯೇ? ಈತ ಪಡೆಯುವ ಸಂಬಳಕ್ಕೆ ಯಾರೆಲ್ಲ ಪಾಲುದಾರರಿದ್ದಾರೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಉತ್ತರಿಸಬೇಕಾಗಿದೆ.
ಮೊದಲೇ ಪ್ರವಾಸಿ ಮಂದಿರದಲ್ಲಿ ರಾತ್ರಿ ಪಾಳಿಯ ಇಬ್ಬರು ಸಿಬ್ಬಂದಿಗಳು ವಾರದಲ್ಲಿ ಮತ್ತು ತಿಂಗಳಲ್ಲಿ ಎಷ್ಟು ದಿನ ಕರ್ತವ್ಯಕ್ಕೆ ಹಾಜರಾಗುತ್ತಾರೆ ಎನ್ನುವುದೇ ನಿಗೂಢ! ಆದರೆ ಸಂಬಳ ಮಾತ್ರ ಭರ್ಜರಿಯಾಗಿ ಖಾತೆ ಸೇರುತ್ತಿದೆ. ಮೊದಲೇ ಹೀಗಿರುವಾಗ ಹೊರಗೆ ‘ಭವ್ಯ’ ಒಳಗೆ ದಿವ್ಯ ನಿರ್ಲಕ್ಷ್ಯ ಎಂಬಂತಿರುವ ಹೊಸ ಪ್ರವಾಸಿ ಮಂದಿರ ಕಟ್ಟಡವು ಲೋಕಾಯುಕ್ತ ತನಿಖೆ ಎದುರಿಸಿದ್ದು ಬೇನಾಮಿ ಸಿಬ್ಬಂದಿ ನೇಮಕಾತಿ ಮಾಡುವ ಅನಿವಾರ್ಯ ಏನಿತ್ತು ಎಂಬ ಪ್ರಶ್ನೆಗೆ ಆ ‘ನಾರಾಯಣ’ನೇ ಉತ್ತರಿಸಬೇಕು!
ಈತನ ಹೆಸರು ನಾರಾಯಣ ಯಾನೆ ಬಡ್ಡಿ ನಾರಾಯಣ !
ಮೇಲಾಧಿಕಾರಿಗಳು ಕೆಲಸ ಕೊಟ್ಟರೂ ಫೈಲ್ ಗಳನ್ನು ಹಿಡಿದುಕೊಂಡು ಬೇರೆ ಕಚೇರಿಗೆ ಹೋಗುವುದು ಅಥವಾ ಶಾಸಕರನ್ನೊಳಗೊಂಡು ಸ್ಥಳೀಯ ಅಧಿಕಾರಿಗಳು ಗಣ್ಯರು ಐಬಿಗೆ ಬಂದ್ರೆ ಶಿಷ್ಟಾಚಾರದಲ್ಲಿ
ಸತ್ಕರಿಸುವುದು, ಈತ ಐಬಿಯ ಸ್ವಚ್ಛತಾ ಸಿಬ್ಬಂದಿ ಎಂಬ ವಿಚಾರ ಬಂದವರಿಗೆ ಗೊತ್ತಾಗುವುದು ಏನೋ ನಾಚಿಕೆಯಂತೆ!
ಹೊಸ ಐಬಿಗೆ ಅತಿಥಿಗಳು ಬಂದಾಗ ಅಲ್ಲಿದ್ದು ಸೇವೆ ಕೊಡಬೇಕಾದ ಈತ ಬಂದವರಿಗೆ ಯಾರಿಗೂ ಕಾಣಿಸಿಕೊಳ್ಳದೆ ತಾನೇ ಗೆಸ್ಟ್ ಗಳಂತೆ ಹೊಸ ಐಬಿಯ ಕೋಣೆಯಲ್ಲಿ ಮಲಗಿದ್ದರೂ ಯಾರಿಗೂ ಗೊತ್ತಾಗುವುದಿಲ್ಲ, ಮೇಲಾಧಿಕಾರಿ ಹೇಳಿದ ಕೆಲಸಕ್ಕಿಂತ ಹೆಚ್ಚಾಗಿ
ಪಿಡಬ್ಲ್ಯುಡಿ ಕಚೇರಿಯಲ್ಲಿ ಕಂಪ್ಯೂಟರ್ ಕೋಣೆಗೆ ಸಾಂಬಾರ್, ಫಿಶ್ ಫ್ರೈ, ಕಬಾಬ್, ಜ್ಯೂಸ್ ಇತ್ಯಾದಿ ಪಾರ್ಸೆಲ್ ಸಪ್ಲೈ ಇತ್ಯಾದಿ ಸ್ವಯಂಪ್ರೇರಿತ ಪ್ರಾಯೋಜಕತ್ವಕ್ಕೆ ನೇಮಿಸಿರುವಂತೆ ಕಂಪ್ಯೂಟರ್ ವಿಭಾಗದ ಉಸ್ತುವಾರಿಯಲ್ಲಿ ಸಕ್ರೀಯವಾಗಿರುವುದನ್ನು ಕಚೇರಿಗೆ ಬರುವ ಗುತ್ತಿಗೆದಾರರು ಮಾತ್ರವಲ್ಲ ಅಧಿಕಾರಿಗಳೂ ಗಮನಿಸಿಯೂ ನೋಡದಂತೆ ಇರುತ್ತಾರೆ ಎಂಬ ಆರೋಪಗಳಿವೆ.
“ನಿಂಗೆ ಇಲ್ಲೇನಪ್ಪಾ ಕೆಲಸ?” ಎಂದು ಬಕಪ್ಪ ಅವರು ಎಷ್ಟೋ ಸಲ ಕಿವಿ ಹಿಂಡಿದ್ದಾರೆ. ಹೊಸ ಐಬಿಯ ಸ್ವಚ್ಛತಾ ಸಿಬ್ಬಂದಿಯಾಗಿ ನೇಮಕಗೊಂಡಿದ್ದರೂ ಈತನ ಸೋಮಾರಿತನದಿಂದಾಗಿ ಕೆಲವು ಸಮಯಗಳಿಂದ ಐಬಿ ಗುಡಿಸುವ ಕೆಲಸಕ್ಕಾಗಿ ಮಹಿಳೆಯೊಬ್ಬರನ್ನು ಗೊತ್ತುಪಡಿಸಲಾಗಿದ್ದು ಹಾಗಾದರೆ ಈತನಿಗೆ ಐಬಿಯಲ್ಲೇನು ‘ಕಲೆಂಗ್’ ಹೊಡೆಯೋ ಕೆಲಸ? ಎನ್ನುವುದೇ ಪ್ರಶ್ನೆ!
ನಾರಾಯಣ ಎಂಬವರನ್ನು ಗುತ್ತಿಗೆ ಆಧಾರದಲ್ಲಿ ಸೇರಿಸಿಕೊಂಡಿದ್ದು ಬೇರೆಯೇ ಕಥೆ.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ (AEE) ಬಕಪ್ಪ ಸಾಹೇಬ್ರು ಐಬಿ ಸೇವೆಗಾಗಿ ಒಬ್ಬನ ನೇಮಕಾತಿ ಅಗತ್ಯವೆನಿಸಿದಾಗ ತಮ್ಮ ಸಾಕ್ಷಾತ್ ಪುತ್ರ ರತ್ನ ಪ್ರೇಮ್ ಕುಮಾರ್ ಹೊಸಮನಿ ಎಂಬಾತನನ್ನೇ ನೇಮಕಾತಿ ಮಾಡಿಸಿಕೊಂಡಿದ್ದರು. ಇಂಜಿನಿಯರ್ ಬಕಪ್ಪ ಅವರ ಪುತ್ರ ಪ್ರೇಮ್ ಕುಮಾರ್ ಹೊಸಮನಿ ಕಾಟಾಚಾರಕ್ಕೆ ಸಿಬ್ಬಂದಿಯಾಗಿ,
ಯಾವ ಕೆಲಸವನ್ನೂ ಮಾಡದೆ ಐಬಿ ವಠಾರದಲ್ಲಿ ಯಾವತ್ತಾದರೊಮ್ಮೆ ಕಾಣಿಸಿಕೊಂಡು ಸುಮಾರು 10 ತಿಂಗಳಲ್ಲಿ ಸಂಬಳ ಪಡೆದುಕೊಂಡಿದ್ದು ಈ ಬಗ್ಗೆ ಇಲಾಖೆಯೊಳಗೆ ಆರೋಪಗಳು ಕೇಳಿ ಬಂದ ಬೆನ್ನಲ್ಲೇ ಮೊದಲೇ ಇಲಾಖೆಯಲ್ಲಿ ಎಡವಟ್ಟುಗಳನ್ನು ಮಾಡಿಕೊಂಡು ಲೋಕಾಯುಕ್ತ ತನಿಖೆ ಎದುರಿಸುತ್ತಿದ್ದ ಬಕಪ್ಪ ಅವರಿಗೆ ಮಗನನ್ನೇ ಕಾನೂನುಬಾಹಿರವಾಗಿ ನೇಮಕಾತಿ ಮಾಡಿಕೊಂಡ ಆರೋಪದಲ್ಲಿ ಲೋಕಾಯುಕ್ತ ಕಂಟಕ ಎದುರಾಯಿತು.
ಲೋಕಾಯುಕ್ತ ತನಿಖಾ ಹಂತದಲ್ಲಿ ಬಕಪ್ಪ ಪುತ್ರನಾದ ಪ್ರೇಮ್ ಕುಮಾರ್ ಐಬಿ ಸಿಬ್ಬಂದಿಯಾಗಿ ಪಡೆದ ಸಂಬಳವನ್ನು ಸರಕಾರಕ್ಕೆ ಮರುಪಾವತಿ ಮಾಡಿಸಿಕೊಳ್ಳಲಾಗಿದೆ. ಪ್ರೇಮ್ ಕುಮಾರ್ ಹೊಸಮನಿ ಐಬಿ ಸಿಬ್ಬಂದಿ ಹುದ್ದೆಯಿಂದ ತೆರವಾದಾಗ ಗುತ್ತಿಗೆದಾರನ ಮೂಲಕ ನುಸುಳಿಕೊಂಡಿದ್ದೇ ಬಡ್ಡಿ’ಕೋರ ನಾರಾಯಣ.!
ಈತನನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದು ಹೇಗೆಂದರೆ ಪ್ರವಾಸಿ ಮಂದಿರದ ಸೇವೆಗಾಗಿ ಒಬ್ಬನ ನೇಮಕಾತಿ
ಅಗತ್ಯವೆನಿಸಿದಾಗ ಬಕಪ್ಪ ಸಾಹೇಬ್ರು (ಬಡ್ಡಿ ನಾರಾಯಣ ನೇಮಕಗೊಳ್ಳುವುದಕ್ಕೂ ಮೊದಲು ) ತಮ್ಮ ಸಾಕ್ಷಾತ್ ಪುತ್ರರತ್ನ
ಪ್ರೇಮ್ ಕುಮಾರ್ ಹೊಸಮನಿ ಎಂಬಾತನನ್ನು ನೇಮಕ ಮಾಡಿಸಿಕೊಂಡಿದ್ದರು. ಈತನೂ ಅಷ್ಟೆ ಕಾಟಾಚಾರಕ್ಕೆ ಐಬಿ ಸಿಬ್ಬಂದಿಯಾಗಿದ್ದು ಯಾವ ಕೆಲಸವನ್ನೂ ಮಾಡದೆ ಐಬಿ ವಠಾರದಲ್ಲಿ ಯಾವತ್ತಾದರೊಮ್ಮೆ ಪಡ್ಡೆ ಹುಡುಗನಂತೆ ಕಾಣಿಸಿಕೊಂಡು ಸುಮಾರು 10 ತಿಂಗಳಲ್ಲಿ ಸಂಬಳ ಪಡೆದುಕೊಂಡಿದ್ದರು.
ಈ ಬಗ್ಗೆ ಇಲಾಖೆಯೊಳಗೆ ಆರೋಪಗಳು ಕೇಳಿ ಬಂದ ಬೆನ್ನಲ್ಲೇ ಮೊದಲೇ ಇಲಾಖೆಯಲ್ಲಿ ಎಡವಟ್ಟುಗಳನ್ನು ಮಾಡಿಕೊಂಡು
ಲೋಕಾಯುಕ್ತ ತನಿಖೆ ಎದುರಿಸುತ್ತಿದ್ದ ಇಂಜಿನಿಯರ್ಬ ಕಪ್ಪ ಅವರಿಗೆ ಮಗನನ್ನೇ ಕಾನೂನುಬಾಹಿರವಾಗಿ ನೇಮಕಾತಿ ಮಾಡಿಕೊಂಡ ಆರೋಪದಲ್ಲಿ ಕಂಟಕ ಎದುರಾಗಿದ್ದು ತನಿಖಾ ಹಂತದಲ್ಲಿ ಬಕಪ್ಪ ಪುತ್ರನಾದ ಪ್ರೇಮ್ ಕುಮಾರ್ ಪ್ರವಾಸಿ ಮಂದಿರದ ಸಿಬ್ಬಂದಿಯಾಗಿ ಪಡೆದ ಸಂಬಳವನ್ನು ವಾಪಾಸು ವಸೂಲಿ ಮಾಡಿಕೊಳ್ಳಲಾಗಿದೆ.
ಇನ್ನೊಂದೆಡೆ ಪತ್ರಿಕಾ ಗೋಷ್ಠಿ ಅಥವಾ ವಿಶೇಷ ಸಭೆಗಳನ್ನು ನಡೆಸಲು ಶಾಸಕರು ಐಬಿಯಲ್ಲಿದ್ದರೆ, ಅಥವಾ ಪರಿಚಯದ ಸ್ಥಳೀಯ ಗಣ್ಯರು ಐಬಿಗೆ ಬಂದ್ರೆ ಹೊಸ ಐಬಿಯಲ್ಲಿ ಅಥವಾ ಹಳೆ ಐಬಿ ಕಿಚನ್ ನಲ್ಲಿ ಅಡಗಿ ಕೂರೋದು ಈಗಿರುವ ಸಾಕ್ಷಾತ್ ನಾರಾಯಣನ
ಜಾಯಮಾನ!
ನಾರಾಯಣ ಎಂಬಾತನ ನೇಮಕಾತಿಯ ಹಿಂದೆ ಏನೋ ಕಿತಾಪತಿ ನಡೆದಿದೆ ಎಂಬುದಕ್ಕೆ ಈತನ ಸೋಮಾರಿತನದ ವರ್ತನೆಯೇ ಸಾಕ್ಷಿ.
ಶಾಸಕರು ಐಬಿಯಲ್ಲಿದ್ದರೆ ಅವರ ಮುಂದೆ ಕಾಣಿಸುವುದೇ ಇಲ್ಲ ಎಂದು ಹೇಳಲಾಗುತ್ತಿದೆ. ಮೇಲಾಧಿಕಾರಿಗಳು ಕಚೇರಿಯಲ್ಲಿದ್ದಾಗ ಹೇಗೋ ಅವರ ಕಣ್ಣು ತಪ್ಪಿಸಿ ಡ್ಯೂಟಿಯಲ್ಲಿರುವ ಟ್ರಾಫಿಕ್ (ಲೇಡಿ) ಪೊಲೀಸರ ತಲೆ ತಿನ್ನುವ ಆಸಕ್ತಿ!
ಒಟ್ಟಿನಲ್ಲಿ ಈತ ಕೆಲಸ ಮಾಡದೆ ಲೋಕೋಪಯೋಗಿ ಇಲಾಖೆಯಿಂದ ಸಂಬಳ ಪಡೆಯುವ ನಿರುಪಯೋಗಿ ಸೋಮಾರಿ ಸಿಬ್ಬಂದಿ!
ಇದಕ್ಕೆ ಕಾರಣವೇನೆಂಬುದು ಇದೀಗ ತನಿಖೆಯಾಗಬೇಕಾಗಿದೆ.
ಬಡ್ಡಿ ನಾರಾಯಣ ಎಂದೇ ಕರೆಯಲಾಗುತ್ತಿರುವ ಈ ವ್ಯಕ್ತಿಗೆ ಪ್ರವಾಸಿ ಮಂದಿರದಲ್ಲಿ ಗುತ್ತಿಗೆ ಆಧಾರದ ಕೆಲಸ ಬೇಕು, ಕೆಲಸ ಮಾಡದೆ ಸರಕಾರದ ಸಂಬಳ ಬೇಕು, ಆದರೆ ಅಲ್ಲಿ ಬರುವ ಅತಿಥಿಗಳನ್ನು ಸತ್ಕರಿಸಲು, ಸ್ವಚ್ಛತೆ ಕೆಲಸ ಮಾಡಲು, ಸಾಹೇಬ್ರು ಕಳಿಸುವ ಕಡತಗಳನ್ನು ಬೇರೆ ಅಧಿಕಾರಿಗಳ ಚೇಂಬರ್ ಗಳಿಗೆ ತಲುಪಿಸುವುದು, ಗುಡಿಸುವುದು ಮುಜುಗರವಾಗುವುದಾದರೆ ಪ್ರವಾಸಿ ಮಂದಿರಕ್ಕಾಗಲಿ, ಲೋಕೋಪಯೋಗಿ ಇಲಾಖಾ ಕಚೇರಿಗಾಗಲಿ
ಇಂಥ ಅಡಗಿ ಕೂರುವ ಸಿಬ್ಬಂದಿ ಯಾಕೆ ಬೇಕು? ಇಲ್ಲಿನ
ಎಡವಟ್ಟಿಗೆಲ್ಲ ಗುತ್ತಿಗೆ ಆಧಾರದಲ್ಲಿ ಇಂಥ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡ ಇಂಜಿನಿಯರ್ ಮತ್ತು ಗುತ್ತಿಗೆದಾರ ಹೊಣೆಯಾಗುವುದಿಲ್ಲವೇ?












Post Comment