ಬೆಳ್ತಂಗಡಿ ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವಂಚನೆ ಪ್ರಕರಣ: ಸಿಐಡಿ ಒಡ್ಡೋಲಗ

ಬೆಳ್ತಂಗಡಿ : ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ(ರಿ)ಯಲ್ಲಿ ಗ್ರಾಹಕರ ಸುಮಾರು 40 ಕೋಟಿ ರೂಪಾಯಿ ಠೇವಣಿ ಹಣವನ್ನು ವಾಪಾಸ್ ನೀಡದೆ (ವಂಚನೆ) ಹಗರಣ ಮಾಡಿರುವ ಪ್ರಕರಣ ಸಂಬಂಧ ಮಾ.17ನೇ ಮಂಗಳವಾರ ಬೆಳಗ್ಗೆ ಸೊಸೈಟಿಗೆ ಬೆಂಗಳೂರಿನಿಂದ ಸಿಐಡಿ ಆಗಮಿಸಿ ತನಿಖೆ ಕೈಗೆತ್ತಿಕೊಂಡಿದೆ.
ಪ್ರಕರಣ ವಿವರ:
ದ.ಕ. ಜಿಲ್ಲೆಯ ಬೆಳ್ತಂಗಡಿ ನಗರದ ಜ್ಯೂನಿಯರ್ ಕಾಲೇಜ್ ರಸ್ತೆಯಲ್ಲಿರುವ ರಾಮನಗರದ ವಿ.ಆರ್.ನಾಯಕ್ ಕಾಂಪೌಂಡ್ ನಲ್ಲಿ ಸುಮಾರು 25 ವರ್ಷಗಳಿಂದ ಏಕೈಕ ಬ್ರಾಂಚ್ ಆಗಿ ಕಾರ್ಯಾಚರಿಸುತ್ತಿರುವ ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ(ರಿ) ನಲ್ಲಿ ಆಡಳಿತ ಮಂಡಳಿಯವರು ಗ್ರಾಹಕರಿಗೆ ಸೇರಿದ ಠೇವಣಿ ಇಟ್ಟಿದ್ದ ಸುಮಾರು 40 ಕೋಟಿ ರೂಪಾಯಿ ಹಣ ವಾಪಸ್ ಗ್ರಾಹಕರಿಗೆ ನೀಡದೆ ವಂಚನೆ ಮಾಡಿರುವುದು ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಂಚನೆಗೊಳಗಾದ ಬೆಳ್ತಂಗಡಿ ನಿವಾಸಿ ದಯಾನಂದ ನಾಯಕ್ ಸೇರಿ ಒಟ್ಟು 13 ಜನ ಸಂತ್ರಸ್ತರು ಮೇ 22-2025 ರಂದು ಸೊಸೈಟಿಯ ಆಡಳಿತ ಮಂಡಳಿಗೆ ಸಂಬಂಧಿಸಿದ14 ಮಂದಿಯ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಮೇ 23-2025 ರಂದು (KARNATAKA PROTECTION OF INTEREST DEPOSITIONS EXORBITANT ACT 2004 (u/s -9) ಅಡಿಯಲ್ಲಿ ) ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ಮಂಗಳೂರು ಸೆನ್ ಪೊಲೀಸ್ ಠಾಣೆಗೆ ಹೋಗಿ ಇದೀಗ ಸಿಐಡಿಗೆ ಹಸ್ತಾಂತರಗೊಂಡು ತನಿಖೆಗೆ ಚಾಲನೆ ಸಿಕ್ಕಿದೆ.
ಪ್ರಕರಣದಲ್ಲಿ ಡಜನ್ ಗಟ್ಟಲೆ ಆರೋಪಿಗಳು: 2021ರಿಂದ 2024 ರವರೆಗೆ ಬ್ಯಾಂಕ್ ನಲ್ಲಿ ಜವಾಬ್ದಾರಿಯಲ್ಲಿದ್ದ
40 ಕೋಟಿ ರೂಪಾಯಿ ಹಣ (ವಂಚನೆ) ಹಗರಣದ ರೂವಾರಿಗಳಾದ ಬ್ಯಾಂಕ್ ಸಿಇಒ ಚಂದ್ರಕಾಂತ್, ಅಧ್ಯಕ್ಷ ಪ್ರಭಾಕರ ಸಿ.ಹೆಚ್, ಉಪಾಧ್ಯಕ್ಷ ಸದಾನಂದ. ಎಂ., ಉಜಿರೆ, ನಿರ್ದೇಶಕರುಗಳಾದ ವಿಶ್ವನಾಥ.ಆರ್.ನಾಯಕ್, ಪ್ರಮೋದ್.ಆರ್. ನಾಯಕ್, ವಿಶ್ವನಾಥ, ಜಗನ್ನಾಥ.ಪಿ, ರತ್ನಾಕರ, ಸುಮಾ, ದಿನೇಶ್ ಉಜಿರೆ ನಯನ ಶಿವಪ್ರಸಾದ್, ಮೋಹನ್ ದಾಸ್.ಕೆ, ಕಿಶೋರ್ ಕುಮಾರ್ ಲಾಯಿಲ, ಬ್ಯಾಂಕ್ ಸಿಬ್ಬಂದಿ ಸರಿತಾ.ಎಸ್ ಮತ್ತು ವಿನೋದ್ ಕುಮಾರ್.ಸಿ.ಹೆಚ್ ಸೇರಿ ಒಟ್ಟು 14ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು.
13 ಮಂದಿ ಸಂತ್ರಸ್ತರಿಂದ ದೂರು : ದಯಾನಂದ ನಾಯಕ್, ನಿಧೀಶ್.ಡಿ.ನಾಯಕ್, ಶ್ರದ್ಧಾ.ಬಿ , ಮಾಲಿನಿ.ಟಿ.ರಾವ್, ತುಕರಾಮ್ ರಾವ್, ಅಕ್ಷಯಾ.ಟಿ.ರಾವ್, ಅಕ್ಷತಾ ರಾವ್, ಚೈತ್ರಾ ಭಟ್,
ಮೈತ್ರಿ ಭಟ್, ಸ್ವಾತಿ ಭಟ್, ನಂದಕುಮಾರ್, ಬಿ.ಗಣೇಶ್ ಭಟ್, ವಿದ್ಯಾ ಭಟ್ ಮುಂತಾದ 13 ಮಂದಿ ವಂಚನೆಗೊಳಗಾದವರು ದೂರು ನೀಡಿದ್ದರು.
ಆಸ್ತಿ ಮುಟ್ಟುಗೋಲಿಗೆ ನೋಟಿಸ್ ಜಾರಿ:
ಸೊಸೈಟಿ ಅಧ್ಯಕ್ಷ ಸಿ.ಹೆಚ್.ಪ್ರಭಾಕರ, ನಿರ್ದೇಶಕರಾದ ವಿಶ್ವನಾಥ.ಆರ್.ನಾಯಕ್, ವಿಶ್ವನಾಥ, ಪ್ರಮೋದ್.ಆರ್.ನಾಯಕ್, ಕಿಶೋರ್ ಲಾಯಿಲ, ಪಿ.ಜಗನ್ನಾಥ್, ರತ್ನಾಕರ ಶೇರಿಗಾರ್, ನಯನ ಶಿವಪ್ರಸಾದ್, ಮುಖ್ಯ ಕಾರ್ಯನಿರ್ವಾಣಾಧಿಕಾರಿ ಬಿ.ಚಂದ್ರಕಾಂತ್,ಸಿಬ್ಬಂದಿ ಸರಿತಾ ಇವರು ಹತ್ತು ಮಂದಿಗೆ ಸಹಕಾರ ಸಂಘಗಳ ಉಪ ನಿಬಂಧಕರು ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ನ್ಯಾಯಾಲಯದಿಂದ ಜೂನ್ 05-2025ರಂದು ನೋಟಿಸ್ ಜಾರಿಯಾಗಿತ್ತು. ಇಲ್ಲವಾದರೆ 30,45,24,278 (ಮೂರು ಕೋಟಿ ನಲವತ್ತೈದು ಲಕ್ಷದ ಇಪ್ಪತೈದು ಸಾವಿರದ ಇನ್ನೂರ ಇಪ್ಪತ್ತೆಂಟು ರೂಪಾಯಿ) ಭದ್ರತಾ ಠೇವಣಿ ಇಡಲು ಅವಕಾಶ ನೀಡಲಾಗಿತ್ತು. ನೋಟಿಸ್ ವಿರುದ್ಧ ಹೈಕೋರ್ಟ್ ತಡೆಯಾಜ್ಞೆ ತಂದಿದ್ದರು. ಸಿಐಡಿ ತನಿಖಾರಂಭ: ಶ್ರೀ ರಾಮ ಕ್ರೆಡಿಟ್ ಕೊ.ಆಪರೇಟಿವ್ ಸೊಸೈಟಿಯಲ್ಲಿ ಸುಮಾರು 40 ಕೋಟಿ ರೂಪಾಯಿಗಳ ವಂಚನೆ ಪ್ರಕರಣವಾಗಿರುವ ಕಾರಣ ಈ ತನಿಖೆಯನ್ನು ಬೆಳ್ತಂಗಡಿ ಪೊಲೀಸರು ಮಂಗಳೂರು ಸೆನ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದರು. ಬಳಿಕ ಪ್ರಕರಣವನ್ನು ದ.ಕ. ಪೊಲೀಸ್ ವರಿಷ್ಠಾಧಿಕಾರಿಗಳು ಸಿಐಡಿಗೆ ಹಸ್ತಾಂತರಿಸಿದ ಹಿನ್ನೆಲೆಯಲ್ಲಿ ಇದೀಗ ಅಧಿಕೃತವಾಗಿ ಬೆಂಗಳೂರು ಸಿಐಡಿ ಇನ್ಸ್‌ಪೆಕ್ಟರ್ ಹರೀಶ್ ನೇತೃತ್ವದ ಅಧಿಕಾರಿಗಳ ತಂಡ ತನಿಖೆ ಆರಂಭಿಸಿದ್ದು ನೊಂದ ಗ್ರಾಹಕರಿಗೆ ತನಿಖೆಯಿಂದ ನ್ಯಾಯ ಸಿಗುತ್ತಾ? ಕೋಟಿ ಲೂಟಿಗೈದವರಿಗೆ ಶಿಕ್ಷೆಯಾಗುತ್ತಾ? ಎಂಬುದನ್ನು ಕಾದು ನೋಡಬೇಕಾಗಿದೆ.













Post Comment