ಎಸ್ ಐ ಟಿ ಅಧಿಕಾರಿಗಳ ವಿರುದ್ಧ ನೀಡಿದ ದೂರಿನ ತನಿಖೆ ಬಂತು?

ಬೆಳ್ತಂಗಡಿ : ಜುಲೈ 4-2025ರಂದು ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ Cr. No.: 39/2025- ಸಂಬಂಧಪಟ್ಟಂತೆ ಸೆಪ್ಟಂಬರ್ 4-2025ರಂದು ಎಸ್ ಐ ಟಿ ಠಾಣೆಗೆ ಹೇಳಿಕೆ ದಾಖಲಿಸಲು ಕರೆ ಬಂದ ಮೇರೆಗೆ ಹಾಜರಾದ ಸಂದರ್ಭ ದೈಹಿಕ ದೌರ್ಜನ್ಯ ನಡೆಸಿ, ಸುಳ್ಳು ಸಾಕ್ಷ್ಯ ಹೇಳಿಕೆ ನೀಡುವಂತೆ ಬಲವಂತ ಮಾಡಿರುವ
ಬಗ್ಗೆ ಎಸ್ ಐ ಟಿ ಅಧಿಕಾರಿಗಳ ವಿರುದ್ಧ ನೀಡಿದ ದೂರಿನ ತನಿಖೆಯ ಮಾಹಿತಿ ಪಡೆಯಲು ಸೌಜನ್ಯ ಹೋರಾಟಗಾರ ಜಯಂತ್ ಟಿ ಅವರು ಬುಧವಾರ ಬೆಳ್ತಂಗಡಿ ಠಾಣೆಗೆ ಬಂದಿದ್ದಾರೆ.
ಜುಲೈ 4-2025ರಂದು ಧರ್ಮಸ್ಥಳ ಠಾಣೆಯಲ್ಲಿ ದಾಖಲಾದ Cr. No.: 39/2025- ಸಂಬಂಧಪಟ್ಟಂತೆ ಸೆಪ್ಟಂಬರ್ 4-2025ರಂದು
ಎಸ್ ಐ ಟಿ ಠಾಣೆಗೆ ಹೇಳಿಕೆ ದಾಖಲಿಸಲು ಹಾಜರಾದ ಸಂದರ್ಭ
ಎಸ್ ಐ ಟಿ ಅಧಿಕಾರಿಗಳಾದ ಜಿತೇಂದ್ರ ದಯಾಮ ಐಪಿಎಸ್ , ಎಸ್.ಪಿ. ಸೈಮನ್, ಡಿವೈಎಸ್ಪಿ ಆರ್ ಜಿ. ಮಂಜುನಾಥ, ಇನ್ಸ್ ಪೆಕ್ಟರ್ಮಂ ಜುನಾಥ ಗೌಡ, ಸಬ್ ಇನ್ಸೆಪೆಕ್ಟರ್ ಗುಣಪಾಲ್ ಮುಂತಾದವರು ದೈಹಿಕ ಹಲ್ಲೆ, ಪ್ರಾಣ ಬೆದರಿಕೆ, ಅಪರಾಧಿಕ ಪಿತೂರಿ, ಸುಳ್ಳು ಸಾಕ್ಷಿ ಹೇಳುವಂತೆ ಮಾಡಿರುವ ಬಲವಂತ
ಮತ್ತಿತರ ಕಾನೂನು ಬಾಹಿರ ಕೃತ್ಯಗಳನ್ನು ಎಸಗಿದ್ದಲ್ಲದೆ
ಸರಕಾರಿ ಆದೇಶ ಪಾಲನೆ ಮಾಡದೆ, ಕರ್ತವ್ಯ ನಿರ್ಲಕ್ಷ
ಮಾಡಿದ್ದಲ್ಲದೆ ನೀಡಿದ ಹೇಳಿಕೆಯನ್ನು ತಿರುಚಿ ಬೇರೆಯೇ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಬಗ್ಗೆ ತನಿಖೆಗೆ ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಜಯಂತ್ ಟಿ ಅವರು
15-11-2025ರಂದು ರಾಜ್ಯಪಾಲರು ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಗೆ ಎಸ್ ಐ ಟಿ ಅಧಿಕಾರಿಗಳ ವಿರುದ್ಧ ಮಹತ್ವದ ದೂರು ನೀಡಿದ್ದರು.
ಹೋರಾಟಗಾರ ಜಯಂತ್ ಟಿ ಅವರನ್ನು ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿದ್ದ Cr. No.: 39/2025- ಸಂಬಂಧಪಟ್ಟಂತೆ
ಹೇಳಿಕೆ ದಾಖಲಿಸಲು ಬೆಳ್ತಂಗಡಿ ಎಸ್ ಐ ಟಿ ಠಾಣೆಗೆ ಕರೆದು
ಧರ್ಮಸ್ಥಳ ಸಮೂಹ ದಫನ ಪ್ರಕರಣದ
ಸಾಕ್ಷಿದೂರುದಾರನಾಗಿದ್ದ ಚಿನ್ನಯ್ಯನಿಗೆ ಲಾಠಿಯಲ್ಲಿ ಹೊಡೆದು ಬಳಿಕ ಆತನಿಂದಲೇ ತನ್ನ ಬೆನ್ನು, ತಲೆ, ಕೆನ್ನೆಗೆ ಹೊಡೆಸಿ ಕಾಲಲ್ಲಿ ಬಲವಾಗಿ ಒದ್ದು ಅಕ್ರಮ ಬಂಧನಕ್ಕೊಳಪಡಿಸಿದ್ದರು ಹಾಗೂ ತನ್ನ ಹೇಳಿಕೆ ಪಡೆಯದೆ ಸ್ವಯಂಪ್ರೇರಿತವಾಗಿ ಸುಳ್ಳು ಹೇಳಿಕೆ ಟೈಪ್ ಮಾಡಿಸಿದ್ದಾರೆ ಎಂಬಿತ್ಯಾದಿ ಗಂಭೀರ ಆರೋಪಗಳ ದೂರನ್ನು ಹೋರಾಟಗಾರ ಜಯಂತ್ ಟಿ ನೀಡಿದ್ದರು.
ಆದರೆ ದೂರು ನೀಡಿ ಸುಮಾರು ನಾಲ್ಕು ತಿಂಗಳುಗಳಾಗುತ್ತಿದ್ದರೂ ಬೆಳ್ತಂಗಡಿ ಪೊಲೀಸರು ದೂರಿನ ಬಗ್ಗೆ ನಡೆಸುತ್ತಿರುವ ತನಿಖೆಯ ಕುರಿತು ತಮಗೆ ಯಾವುದೇ ಮಾಹಿತಿಯನ್ನಾಗಲಿ ಯಾವುದೇ ನೋಟೀಸನ್ನಾಗಲಿ ನೀಡದ ಹಿನ್ನೆಲೆಯಲ್ಲಿ ಜಯಂತ್ ಟಿ ಅವರು ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ವಿಚಾರಿಸಿದ್ದು ಈ ಸಂದರ್ಭ ತನಿಖೆ ನಡೆಯುತ್ತಿದೆ, ಶೀಘ್ರದಲ್ಲಿ ಮಾಹಿತಿ ನೀಡುವುದಾಗಿ ಬೆಳ್ತಂಗಡಿ ಪೊಲೀಸರು ತಿಳಿಸಿದ್ದಾರೆ ಎಂದು ಜಯಂತ್ ಟಿ ತಿಳಿಸಿದ್ದಾರೆ.














Post Comment