ರಾಷ್ಟ್ರೀಯ ಹೆದ್ದಾರಿ75 ಬದಿ ಮುಗೇರಡ್ಕ ಸೇತುವೆಗೆ ಸಂಪರ್ಕ ರಸ್ತೆ ಮತ್ತು ಸುರಕ್ಷತೆಗೆ ಅಗತ್ಯ ಕ್ರಮಕ್ಕೆ ಪ್ರಸ್ತಾವನೆ :

ರಾಷ್ಟ್ರೀಯ ಹೆದ್ದಾರಿ75 ಬದಿ ಮುಗೇರಡ್ಕ ಸೇತುವೆಗೆ ಸಂಪರ್ಕ ರಸ್ತೆ ಮತ್ತು ಸುರಕ್ಷತೆಗೆ ಅಗತ್ಯ ಕ್ರಮಕ್ಕೆ ಪ್ರಸ್ತಾವನೆ :

Share
IMG-20260815-WA0003 ರಾಷ್ಟ್ರೀಯ ಹೆದ್ದಾರಿ75 ಬದಿ  ಮುಗೇರಡ್ಕ ಸೇತುವೆಗೆ ಸಂಪರ್ಕ ರಸ್ತೆ ಮತ್ತು  ಸುರಕ್ಷತೆಗೆ  ಅಗತ್ಯ ಕ್ರಮಕ್ಕೆ     ಪ್ರಸ್ತಾವನೆ :

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಮುಗೇರಡ್ಕದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸೇತುವೆಗೆ ರಾಷ್ಟ್ರೀಯ ಹೆದ್ದಾರಿ–75ರ ಸಂಪರ್ಕ ರಸ್ತೆ ಕುರಿತಾಗಿ ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಅಗತ್ಯ ಕ್ರಮಕೈಗೊಳ್ಳುವಂತೆ ಮಾನ್ಯ ಲೋಕಸಭಾ ಸದಸ್ಯರಾದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಅವರ ಗಮನಕ್ಕೆ ತರಲಾಯಿತು.

IMG-20260615-WA0021-24 ರಾಷ್ಟ್ರೀಯ ಹೆದ್ದಾರಿ75 ಬದಿ  ಮುಗೇರಡ್ಕ ಸೇತುವೆಗೆ ಸಂಪರ್ಕ ರಸ್ತೆ ಮತ್ತು  ಸುರಕ್ಷತೆಗೆ  ಅಗತ್ಯ ಕ್ರಮಕ್ಕೆ     ಪ್ರಸ್ತಾವನೆ :

ವಿಷಯ ತಿಳಿದ ತಕ್ಷಣ ಸ್ಪಂದಿಸಿದ ಸಂಸದರು ಹಾಗೂ ಶಾಸಕರು, ಸ್ಟ್ರಕ್ಚರಲ್ ಇಂಜಿನಿಯರ್ ಪ್ರಸನ್ನ ದರ್ಬೆ ಅವರನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಂಗಳೂರು ಯೋಜನಾ ಘಟಕದ ಯೋಜನಾ ನಿರ್ದೇಶಕರಾದ ಅಬ್ದುಲ್ ಜಾವೇದ್ ಅಜ್ಮಿ ಅವರೊಂದಿಗೆ ಚರ್ಚಿಸಲು ಕಳುಹಿಸಿದರು.

ಆ.13ರಂದು ನಡೆದ ಚರ್ಚೆಯಲ್ಲಿ ಕಾರಣಿಕದ ಶ್ರೀ ಕ್ಷೇತ್ರ ಮುಗೇರಡ್ಕ ದೈವಸ್ಥಾನದ ಭಕ್ತರಿಗೆ ಅನುಕೂಲವಾಗುವಂತೆ, ಮುಗೇರಡ್ಕದ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ NH-75ರ ಬದಿಯಲ್ಲಿ ಅಗತ್ಯ ಜಾಗ ಕಾಯ್ದಿರಿಸುವುದು ಹಾಗೂ ನೂತನ ಸೇತುವೆಗೆ ಸೂಕ್ತ ಸಂಪರ್ಕ ರಸ್ತೆ ನಿರ್ಮಿಸುವ ಕುರಿತು ಚರ್ಚಿಸಲಾಯಿತು.

IMG-20260804-WA0025-17-683x1024 ರಾಷ್ಟ್ರೀಯ ಹೆದ್ದಾರಿ75 ಬದಿ  ಮುಗೇರಡ್ಕ ಸೇತುವೆಗೆ ಸಂಪರ್ಕ ರಸ್ತೆ ಮತ್ತು  ಸುರಕ್ಷತೆಗೆ  ಅಗತ್ಯ ಕ್ರಮಕ್ಕೆ     ಪ್ರಸ್ತಾವನೆ :

ಆ.14ರಂದು ಪ್ರಸನ್ನ ದರ್ಬೆ NHAI ಇಂಜಿನಿಯರ್‌ಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆಯನ್ನು ಪರಿಶೀಲಿಸಿ ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಕುರಿತು ಕ್ರಮ ಕೈಗೊಳ್ಳುವ ಭರವಸೆಯಿತ್ತರು.

ಸಮಸ್ಯೆ ಬಗ್ಗೆ ಸ್ಪಂದಿಸಿದ ಶಾಸಕ ಹರೀಶ್ ಪೂಂಜ , ಸಂಸದ ಬ್ರಿಜೇಶ್ ಚೌಟ, ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!