ಪದ್ಮುಂಜ; 135ನೇ ಅಂಬೇಡ್ಕರ್ ಜಯಂತಿ ಆಚರಣೆ

ಪದ್ಮುಂಜ; 135ನೇ ಅಂಬೇಡ್ಕರ್ ಜಯಂತಿ ಆಚರಣೆ

Share
20260414_211739-1024x387 ಪದ್ಮುಂಜ; 135ನೇ ಅಂಬೇಡ್ಕರ್ ಜಯಂತಿ ಆಚರಣೆ

ಕಣಿಯೂರು : ಕಣಿಯೂರು – ಬಂದಾರು -ಮೊಗ್ರು- ಕೊಯ್ಯೂರು ಗ್ರಾಮಗಳ ದಲಿತ ಬಾಂಧವರ ಒಗ್ಗೂಡುವಿಕೆಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ135ನೇ ಜನ್ಮದಿನಾಚರಣೆಯನ್ನು ಪದ್ಮುಂಜ ನೂತನ ಅಂಬೇಡ್ಕರ್ ಭವನದಲ್ಲಿ ಆಚರಿಸಲಾಯಿತು.
ಪುಟಾಣಿ ಮಕ್ಕಳ ಮೂಲಕ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಸ್ಥಳೀಯ ಪ್ರಮುಖರಾದ ಮೋನಪ್ಪ ಎನ್. ಎಸ್. ಪ್ರಸ್ತಾವನೆಗೈದರು.
ಬಿ.ಎಸ್.ಪಿ. ತಾಲೂಕು ಅಧ್ಯಕ್ಷ ಶ್ರೀನಿವಾಸ್ , ಮುಖಂಡರಾದ
ಸಂಜೀವ ನೀರಾಡಿ,‍ ಪತ್ರಕರ್ತ ಅಚುಶ್ರೀ ಬಾಂಗೇರು , ಕು.ಸಂಧ್ಯಾ ನೀರಾಡಿ, ಕರ್ನಾಟಕ ದ.ಸಂ.ಸ. (ಅಂಬೇಡ್ಕರ್ ವಾದ) ತಾಲೂಕು ಮುಖಂಡ ಬಿ.ಕೆ.ಶೇಖರ್ ಬೊಳ್ಚೋಡಿ, ಅಕ್ಷಯ್ ಪುದ್ದೊಟ್ಟು ಮತ್ತಿತರರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭ ಬಿ.ವಿ.ಎಫ್ ಕಣಿಯೂರು ಘಟಕದ ಅಧ್ಯಕ್ಷ ಸತೀಶ್ ಬಸವನಗುಡಿ, ತನಿಯಪ್ಪ ಪುದ್ದೊಟ್ಟು, ಬಾಬು ಪದ್ಮುಂಜ, ಕೃಷ್ಣಪ್ಪ ಪುನರಡ್ಕ, ವೀರಪ್ಪ ಪುನರಡ್ಕ, ಕು.ಮೀನಾಕ್ಷಿ ಪುನರಡ್ಕ, ಕೃಷ್ಣ ಬಂಡಸಾಲೆ, ಸುರೇಶ್ ನೀರಾಡಿ, ರಮೇಶ್ ಬಿ.ಎಲ್., ಅನಂತ್ ಪುನರಡ್ಕ, ಪ್ರವೀಣ್ ಉಮಿಯ, ಸಂತೋಷ್ ನೀರಾಡಿ ಮತ್ತಿತರರು ಇದ್ದರು.‌ ಬಿ.ವಿ.ಎಫ್ ಜಿಲ್ಲಾ ಸಂಯೋಜಕ ಲೋಕೇಶ್ ನೀರಾಡಿ ಸ್ವಾಗತಿಸಿ ಬಳಿಕ ವಂದಿಸಿದರು.

Post Comment

ಟ್ರೆಂಡಿಂಗ್‌

error: Content is protected !!