ನೆರಿಯಾದಲ್ಲಿ ಅಕ್ರಮ ಮರ ಕಡಿದ ಪ್ರಕರಣ ಪತ್ತೆ !

ನೆರಿಯಾದಲ್ಲಿ ಅಕ್ರಮ ಮರ ಕಡಿದ ಪ್ರಕರಣ ಪತ್ತೆ !

Share
IMG-20260630-WA0008 ನೆರಿಯಾದಲ್ಲಿ ಅಕ್ರಮ ಮರ ಕಡಿದ ಪ್ರಕರಣ ಪತ್ತೆ !

ಬೆಳ್ತಂಗಡಿ : ಬೃಹತ್ ಹೆಬ್ಬಲಸಿನ ಮರವೊಂದನ್ನು‌ ಕಡಿದು ಹಲಗೆ ಮಾಡಿ ಮಾರಾಟಕ್ಕೆ ಸಿದ್ಧಗೊಳಿಸಿದ್ದ ಮರಗಳವು ಪ್ರಕರಣವೊಂದನ್ನು ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳು ಮತ್ತು ಅರಣ್ಯ ಸಂಚಾರಿ ದಳದ ಅಧಿಕಾರಿಕಾರಿಗಳು ನೆರಿಯಾ ಗ್ರಾಮದಲ್ಲಿ ಪತ್ತೆ ಹಚ್ಚಿದ್ದು ಕೃತ್ಯ ಬೆಳಕಿಗೆ ಬಂದು ವಾರಗಟ್ಟಲೆ ಆದರೂ ಇದುವರೆಗೂ ಅರಣ್ಯ ಇಲಾಖಾಧಿಕಾರಿಗಳು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸದೆ ವಿಳಂಬ ಮಾಡುತ್ತಾ ಪ್ರಕರಣವನ್ನು ತಿರುಚಲು ಅಥವಾ ಮುಚ್ಚಿ ಹಾಕುವ ಪ್ರಯತ್ನದಲ್ಲಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬೆಳ್ತಂಗಡಿ ತಾಲೂಕಿನ ನೆರಿಯಾ ಗ್ರಾಮದ ಗಂಡಿಬಾಗಿಲು ಸಮೀಪದ ಅಂಬಲೆ ಎಂಬಲ್ಲಿನ ನಿವಾಸಿ ರಾಜಪ್ಪ ಗೌಡ ಎಂಬಾತನ ಖಾಸಗಿ ಒತ್ತುವರಿಯಲ್ಲಿರುವ ಸರಕಾರಿ ಜಾಗದಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬೃಹತ್ ಹೆಬ್ಬಲಸಿನ ಮರವನ್ನು ಸ್ಥಳೀಯ ಖದೀಮರ ತಂಡವೊಂದು ನಿರಾತಂಕವಾಗಿ ಅಕ್ರಮವಾಗಿ ಕಡಿದುರುಳಿಸಿ ಹಲಗೆ ಮಾಡಿ ಸಾಗಾಟಕ್ಕೆ ಸಿದ್ಧತೆ ನಡೆಸಿದ್ದು ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳು ಮತ್ತು ಅರಣ್ಯ ಸಂಚಾರಿ ದಳ ಖಚಿತ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು.‌

ಅಕ್ರಮವಾಗಿ ಮರವನ್ನು ಕಡಿದ ಸ್ಥಳಕ್ಕೆ ದಾಳಿ ನಡೆಸಿದ ಅರಣ್ಯ ಇಲಾಖಾಧಿಕಾರಿಗಳು ಮರಗಳ್ಳರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮಕೈಗೊಳ್ಳುತ್ತಾರೆ ಎಂದು ಸ್ಥಳೀಯರು ಸಹಜವಾಗಿ ನಿರೀಕ್ಷಿಸಿದ್ದರು.
ನೆರಿಯಾದಲ್ಲಿ ಅಕ್ರಮವಾಗಿ ಮರ ಕಡಿದ ಪ್ರದೇಶವು ಬೆಳ್ತಂಗಡಿ ವಲಯ ವ್ಯಾಪ್ತಿಯಲ್ಲಿರುವ ಕಾರಣ ಬೆಳ್ತಂಗಡಿಯ ಅಧಿಕಾರಿಗಳೇ
ಎಫ್ ಐ ಆರ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಬೇಕಾಗಿದ್ದು ಖಚಿತ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಿದ್ದ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತೆರಳಿದ್ದರು.
ಆದರೆ ಅಕ್ರಮವಾಗಿ ಮರ ಕಡಿದ ವ್ಯಕ್ತಿಗಳು ರಾಜಕೀಯ ಪ್ರಭಾವ ಹೊಂದಿದ್ದು ಅರಣ್ಯಾಧಿಕಾರಿಗಳು ಎಫ್ ಐ ಆರ್ ದಾಖಲಿಸಿಕೊಳ್ಳದೆ ದಿನಕ್ಕೊಂದು ನೆಪದಲ್ಲಿ ವಿಳಂಬ ಮಾಡಿದ್ದು ಪ್ರಕರಣವನ್ನು ತಿರುಚುವುದಕ್ಕೋ ಆರೋಪಿಗಳನ್ನು ರಕ್ಷಿಸುವುದಕ್ಕೋ ಎಂಬ ಸಂಶಯ ಮೂಡುವಂತಾಗಿದೆ.
ಪ್ರಕರಣ ನಡೆದು ನಾಲ್ಕೈದು ದಿನಗಳಾಗಿದ್ದು ದಾಳಿ ನಡೆಸಿದ
ಬೆಳ್ತಂಗಡಿ ಅರಣ್ಯಾಧಿಕಾರಿಗಳು ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಳ್ಳಬೇಕಾಗಿದ್ದು ದಾಳಿಯ ದಿನ
ಶುಕ್ರವಾರ ಮೊಹರಮ್ ರಜೆ ಎಂಬ ನೆಪದಲ್ಲಿ ಮರುದಿನ ನಾಲ್ಕನೇ ಶನಿವಾರ ಸರಕಾರಿ ರಜೆಯ ನೆಪದಲ್ಲಿ ಸೋಮವಾರ ಅರಣ್ಯಾಧಿಕಾರಿಗೆ ಜ್ವರ(?)ದ ನೆಪದಲ್ಲಿ ಮಂಗಳವಾರ ಬೆಳ್ತಂಗಡಿ ನ್ಯಾಯಾಧೀಶರು “ಇಲ್ಲ” ಎಂಬ ನೆಪದಲ್ಲಿ ಎಫ್ ಐ ಆರ್ ದಾಖಲಿಸಲು ವಿಳಂಬಿಸುತ್ತಲೇ ಬಂದಿದ್ದು ಈ ಅರಣ್ಯಾಧಿಕಾರಿಗಳ ವಿಳಂಬ ನೀತಿ ಸಂಶಯಕ್ಕೆಡೆ ಮಾಡಿದೆ.

Post Comment

ಟ್ರೆಂಡಿಂಗ್‌

error: Content is protected !!