ನೆರಿಯಾ ಅಕ್ರಮ ಮರ ಕಡಿದ ಪ್ರಕರಣ: ಗಜ ಪ್ರಸವದಂತೆ ಕೊನೆಗೂ ಬಿತ್ತು ಎಫ್ಐ.ಆರ್

ನೆರಿಯಾ ಅಕ್ರಮ ಮರ ಕಡಿದ ಪ್ರಕರಣ: ಗಜ ಪ್ರಸವದಂತೆ ಕೊನೆಗೂ ಬಿತ್ತು ಎಫ್ಐ.ಆರ್

Share
IMG-20260703-WA0005 ನೆರಿಯಾ ಅಕ್ರಮ ಮರ ಕಡಿದ ಪ್ರಕರಣ: ಗಜ ಪ್ರಸವದಂತೆ ಕೊನೆಗೂ ಬಿತ್ತು ಎಫ್ಐ.ಆರ್

ಬೆಳ್ತಂಗಡಿ : ನೆರಿಯಾ ಗ್ರಾಮವೆಂದರೆ ಒಂದು ‘ಕರಿಮಲೆಯ ಕಗ್ಗತ್ತಲು.!’ ಭೂಬಕಾಸುರರ, ಮರಗಳ್ಳರ ಸ್ವರ್ಗವೆಂದೇ ಕುಖ್ಯಾತಿ ಹೊಂದಿರುವ ನೆರಿಯಾ ಗ್ರಾಮದ ಅರಣ್ಯ ಪ್ರದೇಶ, ಸರಕಾರಿ ಜಾಗವೆಂದರೆ ತನ್ನ ಅಪ್ಪನಪ್ಪನ ಆಸ್ತಿ ಎಂಬಂತೆ ಅಕ್ರಮ ಬೇಲಿ ಹಾಕಿಕೊಂಡು ಕಬಳಿಸಿಕೊಂಡು ಹಂತ ಹಂತವಾಗಿ ಬೆಲೆ ಬಾಳುವ ಮರಗಳ ಬುಡಗಳಿಗೆ ಕಾನೂನಿನ ಭಯವಿಲ್ಲದೆ ಗರಗಸ ಇಡುತ್ತಿರುವ ಮರ ಭಕ್ಷಕರ ದಂಡೇ ಇದ್ದರೂ ಸ್ಥಳೀಯ ಕೆಲವು ಭ್ರಷ್ಟ ಅಧಿಕಾರಿಗಳು ಮರಗಳ್ಳರಿಗೆ ಮೂಗುದಾರ ಹಾಕುವ ಬದಲು ಪರೋಕ್ಷವಾಗಿ ಸಹಕರಿಸುತ್ತಾರೆ ಎಂಬ ಆರೋಪಗಳು ಆಗಾಗ ಕೇಳಿ ಬರುತ್ತಲೇ ಇದೆ, ಇದಕ್ಕೆ ಪುಷ್ಠಿ ನೀಡುವಂತೆ
ಸ್ಥಳೀಯ ಖಾಸಗಿ ವ್ಯಕ್ತಿಯೋರ್ವ ತನ್ನ ಪಟಲಾಂ ಸೇರಿಸಿಕೊಂಡು ತನ್ನ ಪಿತ್ರಾರ್ಜಿತ ಜಾಗದಲ್ಲಿರುವ ಸ್ವಂತ ಮರವೆಂಬಂತೆ ಬೃಹತ್ ಹೆಬ್ಬಲಸಿನ ಮರವೊಂದರ ಬುಡಕ್ಕೆ ಕೊಡಲಿ ಇಟ್ಟು ಪರಿಣಾಮ ಸಿಕ್ಕಿ ಬೀಳಬೇಕಾಯಿತು.

ಬೆಳ್ತಂಗಡಿ ತಾಲೂಕು ನೆರಿಯಾ ಗ್ರಾಮದ ಅಂಬಲೆ ಎಂಬಲ್ಲಿ ಹೆಬ್ಬಲಿಸಿನ ಬೃಹತ್ ಮರವನ್ನು ಕಡಿಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ನೇತೃತ್ವದ ತಂಡ ಹಾಗೂ ಅರಣ್ಯ ಸಂಚಾರಿ ದಳ ದಾಳಿ ನಡೆಸಿದ್ದು ಹೆಬ್ಬಲಸಿನ ಮರದ ಹಲಗೆಗಳು ಮತ್ತು ದಿನ್ನೆಗಳನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಿಕೊಂಡಿದೆ.
ದಾಳಿಯ ಬೆನ್ನಲ್ಲೇ ಪ್ರಕರಣವನ್ನು‌ ಮುಚ್ಚಿ ಹಾಕಲು ರಾಜಕೀಯ ಒತ್ತಡಗಳು ಬಂದಿದ್ದು ಎಫ್ ಐ ಆರ್ ದಾಖಲಿಲು ವಾರಗಟ್ಟಲೆ ವಿಳಂಬವಾಗಿತ್ತು. ಒಂದೆಡೆ ಕೇಸು ದಾಖಲಿಸದಂತೆ ರಾಜಕೀಯ ಒತ್ತಡಗಳು ಬಂದರೆ ಇನ್ನೊಂದೆಡೆ ಅಷ್ಟೇ ಪ್ರಬಲವಾಗಿ
ಕೇಸು ದಾಖಲಿಸುವಂತೆ ಒತ್ತಡಗಳು ಬಂದಿತ್ತು, ಇದೀಗ ಗಜ ಪ್ರಸವದಂತೆ ಕೊನೆಗೂ ಆರೋಪಿ ವಿರುದ್ಧ ಎಫ್ ಐ ಆರ್ ಬಿದ್ದಿದೆ.
ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನೆರಿಯಕಾಡು ಎಂಬಲ್ಲಿ ಸರಕಾರಿ ಜಾಗದಲ್ಲಿ ಅಂಬಲೆ ನಿವಾಸಿ ರಾಜಪ್ಪ ಗೌಡ (57) ಎಂಬವರು ಅಕ್ರಮವಾಗಿ ಯಾವುದೇ ಅನುಮತಿ ಇಲ್ಲದೆ ಹೆಬ್ಬಲಸು ಮರವನ್ನು ಕಡಿಯುತ್ತಿರುವ ಬಗ್ಗೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ಆರ್.ಎಫ್.ಒ ತ್ಯಾಗರಾಜ್ ಗೆ ಬಂದ ಈತ ಮಾಹಿತಿ ಮೇರೆಗೆ ಜೂ.29 ರಂದು ದಾಳಿ ಮಾಡಿದ್ದಾರೆ.

IMG-20260615-WA0021-1 ನೆರಿಯಾ ಅಕ್ರಮ ಮರ ಕಡಿದ ಪ್ರಕರಣ: ಗಜ ಪ್ರಸವದಂತೆ ಕೊನೆಗೂ ಬಿತ್ತು ಎಫ್ಐ.ಆರ್


ಸರಕಾರಿ ಜಾಗಕ್ಕೆ ದಾಳಿ ಮಾಡಿದ ವೇಳೆ ಒಂದು ಹೆಬ್ಬಲಸು ಮರವನ್ನು ಕಡಿದು ತುಂಡರಿಸಿರುವುದು ಪತ್ತೆಯಾಗಿದೆ.
40 ಹೆಬ್ಬಲಸು ಹಲಗೆ ಮರದ ಗಾತ್ರದ ಒಟ್ಟು ಪ್ರಮಾಣ 1.003 ಘನ ಮೀಟರ್ ಹಾಗೂ 3 ಮರದ ದಿಮ್ಮಿಗಳ ಒಟ್ಟು ಪ್ರಮಾಣ 1.026 ಘನ ಮೀಟರ್ ಆಗಿದೆ.ಕಡಿದಿರುವ ಮರಗಳನ್ನು ಮಹಜರು ನಡೆಸಿ ವಶಪಡಿಸಿಕೊಂಡು ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಜೂ.30 ರಂದು ವರದಿ ಮಾಡಿಕೊಂಡು ಬೆಳ್ತಂಗಡಿ ನ್ಯಾಯಾಲಯಕ್ಕೆ ಜು.1 ರಂದು ಪ್ರಕರಣ ದಾಖಲಿಸಲು ವರದಿಯನ್ನು ಸಲ್ಲಿಸಿ ಜು.2 ರಂದು ಅನುಮತಿ ಸಿಕ್ಕಿದ ಬಳಿಕ ಸಂಜೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ನೆರಿಯ ಗ್ರಾಮದ ಅಂಬ್ಲೆ ನಿವಾಸಿ ಆರೋಪಿ ರಾಜಪ್ಪ ಗೌಡ(57) ವಿರುದ್ಧ
THE KARNATAKA FOREST ACT, 1963 8 Sections 33(2) of the THE KARNATAKA FOREST ACT, 1963 THE KARNATAKA FOREST RULES, 1969, 25(3)d ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.
ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ನೇತೃತ್ವದಲ್ಲಿ ನೆರಿಯ ಡಿ.ಆರ್.ಎಫ್.ಒ ರವಿಚಂದ್ರ, ಗಸ್ತು ವನಪಾಲಕ ರವಿ ಜಟ್ಟಿ ಮುಕ್ರಿ , ಚಿಬಿದ್ರೆ ಡಿ.ಆರ್.ಎಫ್.ಒ ದೀಪಾ ಗಡಿಗ, ಚಾಲಕ ಕುಶಾಲಪ್ಪ ಮತ್ತು ಅರಣ್ಯ ಸಂಚಾರಿ
ದಳದವರು ಪಾಲ್ಗೊಂಡಿದ್ದರು.

IMG-20260615-WA0005-1-1024x1024 ನೆರಿಯಾ ಅಕ್ರಮ ಮರ ಕಡಿದ ಪ್ರಕರಣ: ಗಜ ಪ್ರಸವದಂತೆ ಕೊನೆಗೂ ಬಿತ್ತು ಎಫ್ಐ.ಆರ್

Post Comment

ಟ್ರೆಂಡಿಂಗ್‌

error: Content is protected !!