ಶಿರ್ಲಾಲು; ಕರ್ತವ್ಯ ನಿರತ ಬಿ.ಎಲ್.ಒ.ಗೆ ಜಾತೀಯತೆ ಅವಮಾನ!

ಬೆಳ್ತಂಗಡಿ : ಚುನಾವಣಾ ಆಯೋಗದ ಆದೇಶದಂತೆ ಸರಕಾರಕಾರದ ಸೂಚನೆಯಂತೆ ಮತದಾರರ ಪಟ್ಟಿ ಪರಿಷ್ಕರಿಸುವ ಕ್ಷೇತ್ರ ಕಾರ್ಯದಲ್ಲಿದ್ದ ಕರ್ತವ್ಯನಿರತ ದಲಿತ ಬಿ.ಎಲ್.ಒ. (ಮತಗಟ್ಟೆ ಮಟ್ಟದ ಅಧಿಕಾರಿ) ಒಬ್ಬರಿಗೆ ಜಾತಿವಾದಿ ಮಹಿಳೆಯೊಬ್ಬರು ಜಾತಿಯ ಕಾರಣಕ್ಕಾಗಿಯೇ ಅವಮಾನಿಸಿ ಅಂಗಳದಲ್ಲೇ ನಿಲ್ಲಿಸಿದ ಅಮಾನವೀಯ ಪ್ರಸಂಗ ಶಿರ್ಲಾಲು ಗ್ರಾಮದಲ್ಲಿ ಜುಲೈ 6ನೇ ಸೋಮವಾರದಂದು ನಡೆದಿದೆ.
ಬೆಳ್ತಂಗಡಿ ತಾಲೂಕು ಶಿರ್ಲಾಲು ಗ್ರಾಮದ ಬಿ.ಎಲ್.ಒ. (ಬೂತ್ ಮಟ್ಟದ ಅಧಿಕಾರಿ, ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಅವಮಾನಗೊಂಡ ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ.
2025ರಲ್ಲಿ ಶಿರ್ಲಾಲು ಗ್ರಾಮದ ಬೂತ್ ಒಂದರ ಬಿ.ಎಲ್.ಒ. ಆಗಿ ನೇಮಕಗೊಂಡಿರುವ (ಅಂಗನವಾಡಿ ಕಾರ್ಯಕರ್ತೆ) ತಮ್ಮ ವ್ಯಾಪ್ತಿಯ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಕ್ಷೇತ್ರ ಕಾರ್ಯದಲ್ಲಿ ತೊಡಗಿದ್ದು ಸ್ಥಳೀಯ ಪಲ್ಲದೋಡಿ ಎಂಬಲ್ಲಿನ ಮಹಿಳೆ ತಮ್ಮ ಮನೆಯ ಜಗುಲಿಯ ಮೆಟ್ಟಿಲು ಹತ್ತಿರ ಹೋದ ಬಿ.ಎಲ್.ಒ.ಗೆ “ಇಂಚಿ ಬರ್ಪುಜಿ , ಅವುಲೇ ಉಂತುಲ” (ಈ ಕಡೆ ಬರುವುದಿಲ್ಲ, ಅಲ್ಲೇ ನಿಲ್ಲು) ಎಂದು ಏಕವಚನದಲ್ಲಿ ಹೇಳುತ್ತಾ ಜೋರು ಮಳೆ ಬರುತ್ತಿದ್ದರೂ ಅಂಗಳದಲ್ಲೇ ನಿಲ್ಲಿಸಿ ಅವಮಾನಿಸಿ ಅಮಾನವೀಯತೆ ಮೆರೆದ ಘಟನೆ ನಡೆದಿದೆ.

ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಕ್ಷೇತ್ರ ಕಾರ್ಯದಲ್ಲಿ ಕರ್ತವ್ಯನಿರತರಾಗಿದ್ದು ಜಾತಿಯ ಕಾರಣಕ್ಕಾಗಿ ಜಾತಿವಾದಿ ಮಹಿಳೆಯಿಂದ ಅವಮಾನಿಸಲ್ಪಟ್ಟು ನೊಂದ ಮಹಿಳೆ ಇದೀಗ ತಹಶೀಲ್ದಾರ್ ವಹಿಸಿಕೊಟ್ಟಿರುವ ಬಿ.ಎಲ್.ಒ. ಕರ್ತವ್ಯಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ.
ಈ ಬಗ್ಗೆ ತಮ್ನ ರಾಜಿನಾಮೆ ಪತ್ರವನ್ನು ಬೆಳ್ತಂಗಡಿ ತಹಶಿಲ್ದಾರರಿಗೆ ಸಲ್ಲಿಸಿರುವ ಬಿ.ಎಲ್.ಒ. ಈ ಘಟನೆಯ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾಲೂಕು ದಂಡಾಧಿಕಾರಿಯವರಿಗೆ ದೂರು ನೀಡಿದ್ದಾರೆ.
ಅವಮಾನದಿಂದ ನೊಂದ ಬಿ.ಎಲ್.ಒ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.















Post Comment