ಶಿರ್ಲಾಲು; ಕರ್ತವ್ಯನಿರತ ಬಿ.ಎಲ್.ಒ.ಗೆ ಅವಮಾನ: ಆರೋಪಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು

ಶಿರ್ಲಾಲು; ಕರ್ತವ್ಯನಿರತ ಬಿ.ಎಲ್.ಒ.ಗೆ ಅವಮಾನ: ಆರೋಪಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು

Share
IMG-20260708-WA0003 ಶಿರ್ಲಾಲು; ಕರ್ತವ್ಯನಿರತ ಬಿ.ಎಲ್.ಒ.ಗೆ ಅವಮಾನ: ಆರೋಪಿ ವಿರುದ್ಧ           ಜಾತಿ ನಿಂದನೆ ಪ್ರಕರಣ ದಾಖಲು

ಬೆಳ್ತಂಗಡಿ : ಚುನಾವಣಾ ಆಯೋಗದ ಆದೇಶದಂತೆ ಸರಕಾರಕಾರದ ಸೂಚನೆಯಂತೆ ಮತದಾರರ ಪಟ್ಟಿ ಪರಿಷ್ಕರಿಸುವ ಕ್ಷೇತ್ರ ಕಾರ್ಯದಲ್ಲಿದ್ದ ಕರ್ತವ್ಯನಿರತ ದಲಿತ ಬಿ.ಎಲ್.ಒ. (ಮತಗಟ್ಟೆ ಮಟ್ಟದ ಅಧಿಕಾರಿ) ಒಬ್ಬರಿಗೆ ಜಾತಿಯ ಕಾರಣಕ್ಕಾಗಿಯೇ ಅವಮಾನಿಸಿ ಧಾರಾಕಾರ ಮಳೆಗೆ ಅಂಗಳದಲ್ಲೇ ನಿಲ್ಲಿಸಿ ಅವಮಾನಿಸಿದ ಅಮಾನವೀಯ ಕೃತ್ಯವೆಸಗಿದ ಆರೋಪಿ ವಿರುದ್ಧ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕು ಶಿರ್ಲಾಲು ಗ್ರಾಮದ ಬೂತ್
ನಂ- 9ರ ಬಿ.ಎಲ್.ಒ. (ಬೂತ್ ಮಟ್ಟದ ಅಧಿಕಾರಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಅವಮಾನಗೊಂಡ ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ.‌

IMG-20260615-WA0021-3 ಶಿರ್ಲಾಲು; ಕರ್ತವ್ಯನಿರತ ಬಿ.ಎಲ್.ಒ.ಗೆ ಅವಮಾನ: ಆರೋಪಿ ವಿರುದ್ಧ           ಜಾತಿ ನಿಂದನೆ ಪ್ರಕರಣ ದಾಖಲು

2025ರಲ್ಲಿ ಶಿರ್ಲಾಲು ಗ್ರಾಮದ ಬೂತ್ ನಂ-9 ವ್ಯಾಪ್ತಿಗೆ ಬಿ.ಎಲ್.ಒ. ನೇಮಕಗೊಂಡಿರುವ (ಅಂಗನವಾಡಿ ಕಾರ್ಯಕರ್ತೆ)
ತಮ್ಮ ವ್ಯಾಪ್ತಿಯ ಮತದಾರ ಪಟ್ಟಿ ಪರಿಷ್ಕರಣೆ ಬಗ್ಗೆ ಜುಲೈ 6ನೇ ಸೋಮವಾರದಂದು ಎ.ಎಲ್.ಒ. ಮಾಧವ ಎಂಬವರೊಂದಿಗೆ
ಕ್ಷೇತ್ರ ಕಾರ್ಯದಲ್ಲಿ ತೊಡಗಿದ್ದ ಸಂದರ್ಭ ‌ ಸ್ಥಳೀಯ ಪಲ್ಲದೋಡಿ ‘ಕಾಳಿಕಾಂಬ ನಿವಾಸ’ದ ಯಶೋಧಾ ಆಚಾರ್ಯ ಎಂಬವರು‌ ತಮ್ಮ ಮನೆಯ ಜಗುಲಿಯ ಮೆಟ್ಟಿಲು ಹತ್ತಿರ ಹೋದ ಪರಿಶಿಷ್ಟ ಜಾತಿಗೆ ಸೇರಿದ ಬಿ.ಎಲ್.ಒ.ಗೆ “ನಿಕುಲೆನ ಜಾತಿದಕ್ಲು ಇಂಚಿ ಬರ್ಪುಜಿ , ಅವುಲೇ ಉಂತುಲ..” ( ನಿಮ್ಮ ಜಾತಿಯವರು ಈ ಕಡೆ ಬರುವುದಿಲ್ಲ, ಅಲ್ಲೇ ನಿಲ್ಲು..) ಎಂದು ಏಕವಚನದಲ್ಲಿ ಹೇಳುತ್ತಾ ಜೋರು ಮಳೆ ಬರುತ್ತಿದ್ದರೂ ಅಂಗಳದಲ್ಲೇ ನಿಲ್ಲಿಸಿ ಅವಮಾನಿಸಿ ಅಮಾನವೀಯತೆ ಮೆರೆದ ಘಟನೆ ನಡೆದಿತ್ತು.
ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಕ್ಷೇತ್ರ ಕಾರ್ಯದಲ್ಲಿ ಕರ್ತವ್ಯನಿರತರಾಗಿದ್ದ ವೇಳೆ ಜಾತಿಯ ಕಾರಣಕ್ಕಾಗಿ ಜಾತಿವಾದಿ ಮಹಿಳೆಯಿಂದ ಅವಮಾನಿಸಲ್ಪಟ್ಟು ನೊಂದ ( ಬಿ.ಎಲ್.ಒ.) ಸಂತ್ರಸ್ತೆ ಬೆಳ್ತಂಗಡಿ ತಹಶೀಲ್ದಾರ್ ವಹಿಸಿಕೊಟ್ಟಿರುವ ಬಿ.ಎಲ್‌.ಒ. ಕರ್ತವ್ಯಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ.

ಈ ಬಗ್ಗೆ ತಮ್ನ ರಾಜಿನಾಮೆ ಪತ್ರವನ್ನು ತಹಶಿಲ್ದಾರರಿಗೆ ಸಲ್ಲಿಸಿರುವ ಬಿ.ಎಲ್.ಒ. ಈ ಘಟನೆಯ ಬಗ್ಗೆ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.

ಪ್ರಕರಣದ ತನಿಖೆ ನಡೆಸಿದ ವೇಣೂರು ಪೊಲೀಸರು ಇದೀಗ ಆರೋಪಿ ಯಶೋಧಾ ಆಚಾರ್ಯ ಎಂಬಾಕೆಯ ವಿರುದ್ಧ ಪರಿಶಿಷ್ಟರ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.ಮುಂದಿನ ಕಾನೂನುಕ್ರಮ ಕೈಗೊಳ್ಳುತ್ತಿದ್ದಾರೆ.

IMG-20260615-WA0005-3-1024x1024 ಶಿರ್ಲಾಲು; ಕರ್ತವ್ಯನಿರತ ಬಿ.ಎಲ್.ಒ.ಗೆ ಅವಮಾನ: ಆರೋಪಿ ವಿರುದ್ಧ           ಜಾತಿ ನಿಂದನೆ ಪ್ರಕರಣ ದಾಖಲು

Post Comment

ಟ್ರೆಂಡಿಂಗ್‌

error: Content is protected !!