ಬೆಳ್ತಂಗಡಿಯ ಭಗ್ನಪ್ರೇಮಿಯಿಂದ ಬಂಟ್ವಾಳದ ಯುವತಿ ಬರ್ಭರ ಕೊಲೆ!

ಬಂಟ್ವಾಳ: ಭಗ್ನ ಪ್ರೇಮಿಯೊಬ್ಬ ಹಾಡು ಹಗಲೇ ಯುವತಿಯೊಬ್ಬಳ ಮೇಲೆ ಹರಿತವಾದ ಆಯುಧದಿಂದ ಕಡಿದು , ಇರಿದು ಬರ್ಭರವಾಗಿ ಕೊಲೆಗೈದು ವೇಗವಾಗಿ ಓಡುತ್ತಾ ಸ್ಥಳದಿಂದ ಪರಾರಿಯಾದ ಆತಂಕಕಾರಿ ಘಟನೆ ಜು.16ನೇ ಗುರುವಾರ ಸಂಜೆ ಸಂಭವಿಸಿದೆ.
ಕೊಲೆಯಾದ ಯುವತಿಯನ್ನು ಬಂಟ್ವಾಳ ತಾಲೂಕಿನ ಕಕ್ಯೆಪದವು ಉಳಿ ಗ್ರಾಮದ ನಿವಾಸಿ ಲಾವಣ್ಯ (21) ಹಾಗೂ ಆರೋಪಿಯನ್ನು
ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಪುರುಷೋತ್ತಮ ಗೌಡ ಎಂಬವರ ಪುತ್ರ ಚೇತನ್ ಗೌಡ (22) ಎಂಬಾತನೆಂದು ತಿಳಿದು ಬಂದಿದೆ.
ಅರೋಪಿಯ ಬಂಧನಕ್ಕಾಗಿ ಶೋಧ ನಡೆಸುತ್ತಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಯುವಕನ ಕತ್ತಿ ದಾಳಿಯ ಪರಿಣಾಮ
ಯುವತಿ ಸ್ಥಳದಲ್ಲೇ ನರಳಾಡುತ್ತಾ ಮೃತಪಟ್ಟಿದ್ದು ಆಕೆಯನ್ನು ಭೀಕರವಾಗಿ ಕೊಲೆಗೈದ ಆರೋಪಿ ಕೆಲವೇ ನಿಮಿಷದಲ್ಲಿ ಸ್ಥಳದಿಂದ ವೇಗವಾಗಿ ಓಡುತ್ತಾ ಪರಾರಿಯಾಗಿರುವ ವೀಡಿಯೋ ತುಣುಕು ವೈರಲ್ ಆಗಿದೆ.


ಬಿ. ಸಿ. ರೋಡ್ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಕಕ್ಕೆಪದವು ಕಡೆ ಹೋಗುವ ಸರ್ಕಾರಿ ಬಸ್ಸಿನೊಳಗೆ ಕುಳಿತಿದ್ದ ಯುವತಿಯನ್ನು ಹಿಂಬಾಲಿಸಿಕೊಂಡು ಬಸ್ಸಿನೊಳಗೆ ನುಗ್ಗಿ ಬಲವಂತವಾಗಿ ಕೆಳಗಿಳಿಸಿದ್ದು ಹಾಡುಹಗಲೇ ಸಾರ್ವಜನಿಕರ ಮುಂದೆಯೇ ಯುವತಿಗೆ ಕತ್ತಿಯಿಂದ ಕಡಿದು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿ ಚೇತನ್ ಕೊಲೆಯಾದ ಯುವತಿಯ ಸಂಬಂಧಿಯಾಗಿದ್ದು ಈತ ಯುವತಿಯನ್ನು ಪ್ರೀತಿಸುತ್ತಿದ್ದು ಮೂರು ವರ್ಷಗಳ ಹಿಂದೆ ಪ್ರೀತಿ ಮುರಿದು ಬಿದ್ದಿತ್ತು ಹಾಗೂ ಕೆಲವು ಸಮಯಗಳಿಂದ ಚೇತನ್ ಮತ್ತೆ ಲಾವಣ್ಯಳ ಹಿಂದೆ ಬಿದ್ದು ಏಕಮುಖವಾಗಿ ಪ್ರೀತಿಸುತ್ತಿದ್ದು ಆಕೆ ನಿರಾಕರಿಸಿದ್ದೇ ಕೊಲೆಗೆ ಕಾರಣವಾಗಿರಬಹುದೆಂದು ಸ್ಥಳೀಯವಾಗಿ ಹೇಳಲಾಗುತ್ತಿದೆ.
ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಲಾಯಿತಾದರೂ ಚಿಕಿತ್ಸೆಗೂ ಮೊದಲೇ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಳು ಎಂದು ತಿಳಿದು ಬಂದಿದೆ.














Post Comment