ಲಾವಣ್ಯ ಹೆತ್ತವರಿಗೆ ಕರೆ ಮಾಡಿ “ನಿಮ್ಮ ಮಗಳನ್ನು ಕೊಂದಿದ್ದೇನೆ, ನನ್ನ ಹೆಣ ನಾಳೆ ಸಿಗುತ್ತದೆ”ಎಂದು ಹೇಳಿದ್ದ ಆರೋಪಿ ಚೇತನ್ ಬಂಧನ


ಪೊಲೀಸರ ಕಂಡು ಇಲಿ ಪಾಷಾಣ ತಿಂದು ಆತ್ಮಹತ್ಯೆಗೆ ಯತ್ನಿಸಿದ ಭಗ್ನಪ್ರೇಮಿ
ಬಂಟ್ವಾಳ : ಬಂಟ್ವಾಳ ಬಸ್ ನಿಲ್ದಾಣದಲ್ಲಿ ಹಾಡು ಹಗಲೇ ಸಾರ್ವಜನಿಕರ ಕಣ್ಣ ಮುಂದೆಯೇ ಕಕ್ಯೆಪದವು ಉಳಿ ಗ್ರಾಮದ ಲಾವಣ್ಯ ಳನ್ನು ಕತ್ತಿಯಿಂದ ಬರ್ಬರವಾಗಿ ಕೊಲೆಗೈದ ಆರೋಪಿ ಬೆಳ್ತಂಗಡಿ ಓಡಿಲ್ನಾಳದ ಚೇತನ್ ಇಂದು ಬಂಧನಕ್ಕೊಳಗಾಗಿದ್ದಾನೆ. ಆರೋಪಿ ಚೇತನ್ ಇತ್ತೀಚೆಗಷ್ಟೇ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಪಾಲಿಟೆಕ್ನಿಕ್ ವ್ಯಾಸಂಗ ಮುಗಿಸಿಕೊಂಡು ಕೇವಲ ಮೂರು ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಹೋಗುವುದಾಗಿ ತನ್ನ ಪೋಷಕರಲ್ಲಿ ಹೇಳಿ ಹೋಗಿದ್ದನೆಂಬ ಮಾತುಗಳು ಇದೀಗ ಕೇಳಿ ಬರುತ್ತಿದೆ.

ಈತ ಈ ಹಿಂದೆಯೂ ಹುಡುಗಿ ಲಾವಣ್ಯ ಕೆಲಸ ಮಾಡುತ್ತಿದ್ದ ಕಲ್ಲಡ್ಕದ ಪುಷ್ಪರಾಜ್ ಮೆಡಿಕಲ್ ಶಾಪ್ ನೊಳಗೂ ನುಗ್ಗಿ “ನಿನ್ನನ್ನು ಇಲ್ಲಿಗೆ ಕೆಲಸಕ್ಕೆ ಬರಬಾರದೆಂದು ನಾನು ಹೇಳಿದ್ದರೂ ಕೂಡ ನೀನು ಮತ್ತೆ ಇಲ್ಲಿ ಯಾಕೆ ಬಂದಿದ್ದಿಯಾ” ಎಂದು ಆಕೆಯ ಮೇಲೆ ಹಲ್ಲೆಗೆ ಮುಂದಾಗಿದ್ದು ಈ ವೇಳೆ ಸ್ಥಳೀಯ ಆಸ್ಪತ್ರೆಯ ಸಿಬ್ಬಂದಿಗಳು ಆತನನ್ನು ತಡೆಯಲು ಯತ್ನಿಸಿದಾಗ ಆತ ಅಲ್ಲಿನ
ಗ್ಲಾಸ್ ಗಳನ್ನು ತನ್ನ ಕೈಯಿಂದಲೇ ಹೊಡೆದು ದಾಂಧಲೆ ನಡೆಸಿದ್ದು
ಈ ವೇಳೆ ವೈದ್ಯರು ಪೊಲೀಸರಿಗೆ ಕರೆ ಮಾಡುತ್ತಿದ್ದಂತೆ ” ನಿನ್ನ ಪೊಲೀಸರು ಬಂದರೆ ಬರಲಿ ನಾನು ನೋಡಿಕೊಳ್ಳುತ್ತೇನೆ ” ಎಂದು ಹೇಳಿ ಅಲ್ಲಿಂದ ಪರಾರಿಯಾಗಿದ್ದನೆಂದು
ಹೇಳಲಾಗುತ್ತಿದೆ. ನಿನ್ನೆಯೂ ಕೊಲೆ ನಡೆಸಿದ ಆರೋಪಿ ಪರಾರಿ ಆಗುತ್ತಲೇ ದಾರಿ ಮಧ್ಯೆ ಮೃತ ಲಾವಣ್ಯಳ ಪೋಷಕರಿಗೆ ಕರೆ ಮಾಡಿ “ನಿಮ್ಮ ಮಗಳನ್ನು ನಾನು ಕೊಂಡಿದ್ದೇನೆ, ನನ್ನ ಹೆಣ ನಾಳೆ ಸಿಗುತ್ತದೆ” ಎಂದು ಹೇಳಿ ಮೊಬೈಲ್ ಕರೆ ಸ್ಥಗಿತಗೊಳಿಸಿದ್ದನೆಂಬ ಅಂಶ ಇದೀಗ ಸ್ಥಳೀಯವಾಗಿ ಚರ್ಚೆಯಾಗುತ್ತಿದೆ.
















Post Comment