ಲಾಯಿಲಾ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ : “ಬಂದ ಪುಟ್ಟ.. ಹೋದ ಪುಟ್ಟ.!”

ಲಾಯಿಲಾ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ : “ಬಂದ ಪುಟ್ಟ.. ಹೋದ ಪುಟ್ಟ.!”

Share
20260803_161637-1024x768 ಲಾಯಿಲಾ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ :                     "ಬಂದ ಪುಟ್ಟ..           ಹೋದ ಪುಟ್ಟ.!"
20260803_161613-1024x768 ಲಾಯಿಲಾ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ :                     "ಬಂದ ಪುಟ್ಟ..           ಹೋದ ಪುಟ್ಟ.!"

ಬೆಳ್ತಂಗಡಿ : ಎರಡು ದಿನಗಳ ಹಿಂದೆ ಭಾರೀ ಮಳೆಗೆ ಮುಳುಗಡೆಯಾಗಿದ್ದ ಮತ್ತು ಅಪಾಯದಲ್ಲಿರುವ
ಮನೆಗಳ ಪ್ರದೇಶಕ್ಕೆ ದಿಡೀರ್ ಭೇಟಿ ನೀಡಿದ ದಕ ಜಿಲ್ಲಾಧಿಕಾರಿ ದರ್ಶನ್ ಕೆವಿ ಅವರು ಸಂತ್ರಸ್ತ ಕುಟುಂಬಗಳನ್ನು ಸಂಪರ್ಕಿಸಿ ಕುಂದು ಕೊರತೆಗಳನ್ನು ವಿಚಾರಿಸದೆ , ಅಳಲು ಆಲಿಸದೆ ಕನಿಷ್ಠ ಮಾತನಾಡಿಸದೆ
ಕಿಂಡಿ ಅಣೆಕಟ್ಟು ಮತ್ತು ಸೇತುವೆ ವೀಕ್ಷಿಸಿ ತರಾತುರಿಯಲ್ಲಿ ಹೋಗಿದ್ದು ಸಂತ್ರಸ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಭಾರೀ ಮಳೆಯ ಸಂದರ್ಭ ಈ ಭಾಗದಲ್ಲಿ ಮನೆಗಳು ಮುಳುಗಡೆಯಾಗಿದ್ದು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಲಾಯಿಲಾ ಗ್ರಾಮದ ಗುರಿಂಗಾನ, ಪುತ್ರಬೈಲು ಸುತ್ತಮುತ್ತಲಿನ ನದಿ ದಡದಲ್ಲಿ ಸುಮಾರು ಸುಮಾರು 9 ಮನೆಗಳು ಅಪಾಯದಲ್ಲಿದೆ, ಮತ್ತು ಗ್ರಾಮಪಂಚಾಯತ್ ಆಡಳಿತ ಮತ್ತು ಗ್ರಾಮಾಡಳಿತಾಧಿಕಾರಿ ಗುರುತಿಸಿದ್ದಾರೆ.

IMG-20260615-WA0021-2 ಲಾಯಿಲಾ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ :                     "ಬಂದ ಪುಟ್ಟ..           ಹೋದ ಪುಟ್ಟ.!"


ಸ್ಥಳೀಯ ನದಿ ದಡದ 15 ಕುಟುಂಬಗಳು ತಾಲೂಕು ಆಡಳಿತದ ಸೂಚನೆಯಂತೆ ಸ್ಥಳಾಂತರಿಸಲಾಗಿತ್ತು.
ಆದರೆ ಸೋಮವಾರ ಲಾಯಿಲಾ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ದರ್ಶನ್ ಕೆವಿ ಅವರು ನೆರೆ ಸಂತ್ರಸ್ತ ಕುಟುಂಬಗಳ ಮನೆಗಳನ್ನು ವೀಕ್ಷಿಸದೆ, ಕುಟುಂಬಗಳಿಗೆ ಸಾಂತ್ವಾನ ಹೇಳದೆ , ಕುಂದು ಕೊರತೆ ವಿಚಾರಿಸದೆ ಗಡಿಬಿಡಿಯಲ್ಲಿ ಹೋಗಿದ್ದು ” ಬಂದ ಪುಟ್ಟ ಹೋದ ಪುಟ್ಟ.. ” ಎಂಬಾತಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ.
ಇನ್ನೊಂದೆಡೆ ಜಿಲ್ಲಾಧಿಕಾರಿಗಳು ಜಿಲ್ಲಾ ಕೇಂದ್ರದಿಂದ ಇಷ್ಟು ದೂರ ಬಂದಿದ್ದು ಕೇವಲ ಕಿಂಡಿ ಅಣೆಕಟ್ಟು, ಸೇತುವೆಗಳನ್ನು ವೀಕ್ಷಿಸುವುದಕ್ಕೋ ಸಂತ್ರಸ್ತರ ಸಂಕಷ್ಟ ವಿಚಾರಿಸುವುದಕ್ಕೋ ಎಂಬ ಮಾತುಗಳು ಸ್ಥಳೀಯರಿಂದ ಕೇಳಿ ಬಂದಿದೆ.
ಜಿಲ್ಲಾಧಿಕಾರಿ ಭೇಟಿ ಸಂದರ್ಭ ತಹಶೀಲ್ದಾರ್ ಎಸ್ ಎನ್ ನರಗುಂದ, ತಾಪಂ ಇಒ ಭವಾನಿಶಂಕರ್, ಗ್ರಾಮಾಡಳಿತಾಧಿಕಾರಿ ರನಿತಾ ಇದ್ದರು. ಅಪಾಯದಲ್ಲಿರುವ ಮನೆಗಳ ನಿವಾಸಿಗಳು ಜಿಲ್ಲಾದಿಕಾರಿ ಬರುತ್ತಾರೆ ಎಂದು ಸುದ್ದಿ ಕೇಳಿ ಮನೆಯ ಅಂಗಳದಲ್ಲಿ ಕುರ್ಚಿ ಕಾಯುತ್ತಿದ್ದ ಸಂತ್ರಸ್ತರಿಗೆ ನಿರಾಶೆ ಮೂಡಲು‌ ಕಾರಣವಾಗಿದೆ.

IMG-20260615-WA0005-2-1024x1024 ಲಾಯಿಲಾ ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ :                     "ಬಂದ ಪುಟ್ಟ..           ಹೋದ ಪುಟ್ಟ.!"

no no

Post Comment

ಟ್ರೆಂಡಿಂಗ್‌

error: Content is protected !!