ಲಾಯಿಲಾದಲ್ಲಿ ಕರೀಮ್ ಮಗನ ಕರಾಮತ್ತು ;

ಲಾಯಿಲಾದಲ್ಲಿ ಕರೀಮ್ ಮಗನ ಕರಾಮತ್ತು ;

Share

ಅಕ್ರಮ ಕಟ್ಟಡಗಳ ಸಾಮ್ರಾಜ್ಯದಲ್ಲಿ
ಬಲ್ಲಿರೇನಯ್ಯಾ.. ‘ಭವಾನಿ’ ಮಹಾತ್ಮೆ…!

IMG-20260916-WA0009-1024x488 ಲಾಯಿಲಾದಲ್ಲಿ ಕರೀಮ್  ಮಗನ ಕರಾಮತ್ತು ;

ಬೆಳ್ತಂಗಡಿ : ಲಾಯಿಲಾದಲ್ಲಿ ವಾಸದ ಮನೆಯ ಹೆಸರಿನಲ್ಲಿ ಭೂ‌ಪಪರಿವರ್ತನೆ ಮಾಡಿಕೊಂಡು ಅದೇ ಅಕ್ರಮವಾಗಿ ಬಹುಮಹಡಿ ವಾಣಿಜ್ಯ ಕಟ್ಟಡವನ್ನು ನಿರ್ಮಿಸುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಈ ಬಗ್ಗೆ ದೂರು ನೀಡಲಾಗಿದ್ದರೂ ಕ್ರಮ ಕೈಗೊಳ್ಳದ ಬಗ್ಗೆ ಬೆಳ್ತಂಗಡಿ ತಾಲೂಕುಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಭವಾನಿ‌ ಶಂಕರ್‌ ಮತ್ತಿತರರ ವಿರುದ್ಧ ಸ್ಥಳೀಯರೊಬ್ಬರು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ಈ ಅಕ್ರಮ ಕಟ್ಟಡದ ಬಗ್ಗೆ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಿ ಕಟ್ಟಡ ಮಾಲಕರಿಗೆ ಅನುಕೂಲಕರವಾಗಿ ವರ್ತಿಸುತ್ತಿರುವ
ತಾ.ಪಂ. ಇ.ಓ. ಭವಾನಿ ಶಂಕರ್ ಮತ್ತಿರರ ವಿರುದ್ಧ ಲಾಯಿಲಾ ಗ್ರಾಮದ ನಿವಾಸಿ ಅನ್ಸಾರ್ ಎಂಬವರು ಲೋಕಾಯುಕ್ತರಿಗೆ ಸೆ.16 ರಂದು ದೂರು ನೀಡಿದ್ದು ಲೋಕಾಯುಕ್ತ ಅಧಿಕಾರಿಗಳು ಸ್ವೀಕರಿಸಿದ ದೂರಿನ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

IMG-20260615-WA0021-20 ಲಾಯಿಲಾದಲ್ಲಿ ಕರೀಮ್  ಮಗನ ಕರಾಮತ್ತು ;

ಲೋಕಾಯುಕ್ತ ದೂರಿನಲ್ಲೇನಿದೆ…?
ಬೆಳ್ತಂಗಡಿ ತಾಲೂಕಿನ ಲಾಯಿಲ‌ ಗ್ರಾಮದ ನಿವಾಸಿ ಅನ್ಸಾರ್ ಎಂಬವರು ನೀಡಿರುವ ದೂರಿನಲ್ಲಿ ಲಾಯಿಲ ಗ್ರಾಮದ ರಾಘವೇಂದ್ರ ನಗರದಲ್ಲಿ ಮೊಹಮ್ಮದ್ ರಫೀಕ್ ಬಿನ್ ಕರೀಂ ಮೈನಾ ಎಂಬವರು ವಾಣಿಜ್ಯ ಉದ್ದೇಶಕ್ಕಾಗಿ ಬಹುಮಹಡಿ ಕಟ್ಟಡವನ್ನು ನಿರ್ಮಿಸುತ್ತಿದ್ದು ಈ‌ಕಟ್ಟಡಕ್ಕೆ ಸಮರ್ಪಕ ಪರವಾನಿಗೆಗಳನ್ನು ಪಡೆದುಕೊಂಡಿಲ್ಲ,
ಗೃಹ ನಿರ್ಮಾಣದ ಉದ್ದೇಶಕ್ಕಾಗಿ ಭೂಪರಿವರ್ತನೆ ಮಾಡಿಕೊಂಡು ಅದರಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಕಟ್ಟಡ ಕಟ್ಟಲಾಗುತ್ತಿದೆ. ಇದರ ಬಗ್ಗೆ ಲಾಯಿಲ ಗ್ರಾಮಪಂಚಾಯತು ಮತ್ತು ಬೆಳ್ತಂಗಡಿ ತಾಲೂಕು ಪಂಚಾಯತು ಕಾರ್ಯನಿರ್ವಾಹಣಾಧಿಕಾರಿ ಭವಾನಿ ಶಂಕರ್ ಅವರಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೆ ಅಕ್ರಮ ಕಟ್ಟಡ ನಿರ್ಮಾಣಕ್ಕೆ‌ ಸಹಕಾರ ನೀಡುತ್ತಾ ಬಂದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದೀಗ ಅಕ್ರಮವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಡೋರ್ ನಂಬರ್ ಹಾಗೂ ವಿದ್ಯುತ್ ಸಂಪರ್ಕ ಕ್ಕೆ ಎನ್.ಒ.ಸಿ ನೀಡುವ ಬಗ್ಗೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಈ ದೂರನ್ನು ಲೋಕಾಯುಕ್ತರು ಸ್ವೀಕರಿಸಿದ್ದಾರೆ ಪ್ರಕರಣದ ಬಗ್ಗೆ ಲೋಕಾಯುಕ್ತರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಕಾದು ನೋಡಬೇಕಾಗಿದೆ.

Post Comment

ಟ್ರೆಂಡಿಂಗ್‌

error: Content is protected !!