ಬಂದಾರು ಪರಿಸರದಲ್ಲಿ ಕಾಡಾನೆ ಸಂಚಾರ:

ಬೆಳ್ತಂಗಡಿ : ಬಂದಾರು ಗ್ರಾಮಪಂಚಾಯತ್ ವ್ಯಾಪ್ತಿಯ ಪಾಣೆಕಲ್ಲು ಸಮೀಪದ ಕಂಪ ಮತ್ತು ದಲಜ್ಜೆ ಎಂಬಲ್ಲಿ ತೋಟದಲ್ಲಿ ಆನೆಯೊಂದು ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ಬಂದಾರು ಗ್ರಾಮದ ಬಟ್ಲಡ್ಕ , ದಲಜ್ಜೆ ಪರಿಸರದ ತೋಟಗಳಲ್ಲಿ ಕಾಡಾನೆ ಸ್ಥಳೀಯರಿಗೆ ಕಾಣಿಸಿಕೊಂಡಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಆನೆ ಕಾರ್ಯಪಡೆ ಭೇಟಿ ನೀಡಿದ್ದು ಆನೆ ಸಂಚಾರದ ಬಗ್ಗೆ ನಿಗಾವಹಿಸಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಬಂದಾರು ಗ್ರಾಮದ ಬಟ್ಲಡ್ಕ-ಬೀಬಿ ಮಜಲು ಪರಿಸರದಲ್ಲಿ ಪದೇ ಪದೇ ವಾರಗಟ್ಟಲೆ ಕಾಣಿಸಿಕೊಂಡು ನೇತ್ರಾವತಿ ನದಿಯಲ್ಲಿ ಮುಳುಗೆದ್ದು ಏಕಾಂಗಿಯಾಗಿ ನೀರಾಟವಾಡಿ ಹೋಗಿತ್ತು. ಇದೀಗ ರಾತ್ರಿ ಕಾಣಿಸಿಕೊಂಡ ಕಾಡಾನೆ ಬಟ್ಲಡ್ಕ ಓಟೆಚಾರು ಪ್ರದೇಶದಲ್ಲಿ ನೇತ್ರಾವತಿ ನದಿ ದಾಟಿ ನೇರೆಂಕಿ ರಕ್ಷಿತಾರಣ್ಯ ಕಡೆಗೆ ಹೆಜ್ಜೆ ಹಾಕಿದೆ ಎಂಬ ಮಾಹಿತಿ ಇದೆ.
















Post Comment