ಆಗಸ್ಟ್ 18ಕ್ಕೆ ಮಗ್ರಿಬ್ ಬಳಿಕ ಪ್ರವಾದಿಯವರ 1501ನೇ ಜನ್ಮದಿನ ಪ್ರಯುಕ್ತ ‘ಗ್ರ್ಯಾಂಡ್ ಹುಬ್ಬರ್ರಸೂಲ್ ಮಜ್ಲಿಸ್’ ಕಾರ್ಯಕ್ರಮ’

ಬೆಳ್ತಂಗಡಿ : ಕರ್ನಾಟಕ ಮುಸ್ಲಿಂ ಜಮಾಅತ್ (ಕೆಎಮ್‌ಜೆ), ಸುನ್ನೀ ಯುವಜನ ಸಂಘ(ಎಸ್‌ವೈಎಸ್), ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್), ಸುನ್ನೀ ಜಂ ಇಯ್ಯತುಲ್ ಉಲಮ (ಎಸ್‌ಜೆಯು), ಸುನ್ನೀ ಜಂಇಯ್ಯತುಲ್ ಮುಅಲ್ಲಮೀನ್ (ಎಸ್‌ಜೆಎಮ್), ಸುನ್ನೀ ಮೆನೇಜ್‌ಮೆಂಟ್ ಅಸೋಸಿಯೇಷನ್ (ಎಸ್‌ಎಮ್‌ಎ) ಇವುಗಳ ಸಂಯುಕ್ತ ಒಕ್ಕೂಟವಾದ ಸುನ್ನೀ ಕೋ ಆರ್ಡಿನೇಶನ್ ಸಮಿತಿ ಬೆಳ್ತಂಗಡಿ ತಾಲೂಕು ವತಿಯಿಂದ ಆ.18 ರಂದು ಗುರುವಾಯನಕೆರೆ ಎಫ್.ಎಂ ಗಾರ್ಡನ್ ಸಭಾಂಗಣದಲ್ಲಿ ಮಗ್ರಿಬ್ ಬಳಿಕ ಪ್ರವಾದಿಯವರ 1501 ನೇ ಜನ್ಮದಿನದ ಅಂಗವಾಗಿ ಗ್ರ್ಯಾಂಡ್ ಹುಬ್ಬುರ್ರಸೂಲ್ ಮಜ್ಜಿಸ್ ನಡೆಯಲಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಸಲೀಂ ಕನ್ಯಾಡಿ ತಿಳಿಸಿದ್ದಾರೆ.

ಕೇರಳ ಮುಸ್ಲಿಂ ಜಮಾಅತ್ ಪ್ರ. ಕಾರ್ಯದರ್ಶಿ, ಅಂತಾರಾಷ್ಟ್ರೀಯ ಖ್ಯಾತಿಯ ಧಾರ್ಮಿಕ ವಿದ್ವಾಂಸ ಬದ್ರುಸ್ಸಾದಾತ್ ಅಸ್ಸಯ್ಯಿದ್ ಇಬ್ರಾಹೀಂ ಖಲೀಲುಲ್ ಬುಖಾರಿ ತಂಙಳ್ ಕಡಲುಂಡಿ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ತ್ವಾಹಾ ತಂಙಳ್ ಬುರ್ದಾ ಮಜ್ಲಿಸ್ ನಡೆಸಿಕೊಡಲಿದ್ದಾರೆ.
ಸುನ್ನೀ ಕೋ ಆರ್ಡಿನೇಶನ್ ಸಮಿತಿ ಅಧ್ಯಕ್ಷ ಸಯ್ಯಿದ್ ಸಾದಾತ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಯ್ಯಿದರುಗಳಾದ ಇಸ್ಮಾಈಲ್ ತಂಙಳ್, ಕಾಜೂರು ತಂಙಳ್, ಮಲ್ಜಅ ತಂಙಳ್, ಮಸ್‌ಹೂದ್ ತಂಙಳ್, ಮನ್‌ಶರ್ ತಂಙಳ್, ವಾದೀ ಇರ್ಫಾನ್ ತಂಙಳ್, ಡಾಕ್ಟರ್ ಕಾವಳಕಟ್ಟೆ ಹಝ್ರತ್,
ಸಯ್ಯಿದ್ ಸಲಾಂ ತಂಙಳ್, ಕರ್ಪಾಡಿ ತಂಙಳ್, ಪೊಮ್ಮಾಜೆ ತಂಙಳ್, ಶರಫುದ್ದೀನ್ ತಂಙಳ್, ಎಸ್.ಎಂ. ತಂಙಳ್, ವಿದ್ವಾಂಸರಾದ ಕಾಸಿಂ ಮದನಿ ಉಸ್ತಾದ್, ಹೈದರ್ ಮದನಿ ಉಸ್ತಾದ್, ಖಾಝಿ ಇಬ್ರಾಹಿಂ ಮುಸ್ಲಿಯಾರ್, ಪಿ.ಪಿ ಉಸ್ತಾದ್, ಪೆರ್ನೆ ಉಸ್ತಾದ್, ಅಬೂಸ್ವಾಲಿಹ್ ಉಸ್ತಾದ್, ಯಾಕೂಬ್ ಉಸ್ತಾದ್ ಮೊದಲಾದವರು ಭಾಗವಹಿಸಲಿದ್ದಾರೆ.
ಇದೇ ವೇಳೆ, ಸಮಸ್ತ ಶತಮಾನೋತ್ಸವದಂಗವಾಗಿ ಬೃಹತ್ “ಸಮಸ್ತ ಸೆಂಟಿನರಿ ರ್ಯಾಲಿ” ಗುರುವಾಯನಕೆರೆ ದರ್ಗಾ ವಠಾರದಿಂದ ಸಭಾಂಗಣದವರೆಗೆ ನಡೆಯಲಿದೆ. ಈ ಎಲ್ಲಾ ಸಮಾರಂಭಗಳಲ್ಲಿ 2 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸುನ್ನೀ ಕೋ ಆರ್ಡಿನೇಶನ್ ಸಮಿತಿ ಉಪಾಧ್ಯಕ್ಷ ಸಯ್ಯಿದ್ ವಾದಿ ಇರ್ಫಾನ್ ತಂಙಳ್, ನಿರ್ದೇಶಕ ಸಯ್ಯಿದ್ ಎಸ್ ಎಂ ಕೋಯ ತಂಙಳ್ ಉಜಿರೆ, ಕೋಶಾಧಿಕಾರಿ ಮುಹಮ್ಮದ್ ರಫಿ ಬೆಳ್ತಂಗಡಿ, ಕಾರ್ಯಾಧ್ಯಕ್ಷ ಉಮರ್ ಜಿ.ಕೆ, ಕೆಎಂಜೆ ರಾಜ್ಯ ಸಮಿತಿ ಸದಸ್ಯ ಅಬ್ಬೋನು ಮದ್ದಡ್ಕ ಉಪಸ್ಥಿತರಿದ್ದರು.
ಸುನ್ನಿ ಕೋ ಆರ್ಡಿನೇಶನ್ ಸಮಿತಿ ಅಸ್ತಿತ್ವಕ್ಕೆ ಬಂದ ಬಳಿಕ ತಾಲೂಕಿನಲ್ಲಿ ಗ್ರ್ಯಾಂಡ್ ಮೌಲಿದ್ ಕಾನ್ಫರೆನ್ಸ್, ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ, ಚುನಾವಣಾ ಆಯೋಗದ ಎಸ್ ಐ ಆರ್ ಬಗ್ಗೆ ಸಮಗ್ರ ಮಾಹಿತಿ ಕಾರ್ಯಗಾರ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಿಕೊಡಲಾಗಿದೆ ಎಂದವರು ವಿವರ ನೀಡಿದರು.















Post Comment