ಕಲ್ಲಮಾಡ; ಗುತ್ತಿಲಾರು ದಿ.ಭಾರತಿಯಮ್ಮ ಸ್ಮರಣಾರ್ಥ ನೂತನ ಬಸ್ ತಂಗುದಾಣ ಲೋಕಾರ್ಪಣೆ

ಬೆಳ್ತಂಗಡಿ : ಬಂದಾರು ಗ್ರಾಮಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮದ ಕಲ್ಲಮಾಡ ಎಂಬಲ್ಲಿ ಗುತ್ತಿಲಾರು ದಿ.ಭಾರತಿ ಅಮ್ಮನವರ ಸ್ಮರಣಾರ್ಥವಾಗಿ ಅವರ ಮಕ್ಕಳು ಮತ್ತು ಮೊಮ್ಮಕ್ಕಳ ಕೊಡುಗೆಯಾಗಿ ನಿರ್ಮಾಣಗೊಂಡಿರುವ ನೂತನ ಬಸ್ ತಂಗುದಾಣವನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾದ ಹರೀಶ್ ಪೂಂಜ ಅವರು ಲೋಕಾರ್ಪಣೆಗೊಳಿಸಿ ಶುಭ ಹಾರೈಸಿದರು.
ಈ ಸಂದರ್ಭ ಬಂದಾರು ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ದಿನೇಶ್ ಖಂಡಿಗ, ಉಪಾಧ್ಯಕ್ಷ ಗಂಗಾಧರ ಪೂಜಾರಿ, ಪದ್ಮುಂಜ ಸಿ.ಎ. ಬ್ಯಾಂಕ್ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ರಘುಪತಿ ಭಟ್ ಅನಾಬೆ, ನಿರ್ದೇಶಕ ಪ್ರಭಾಕರ ಗೌಡ ಗುತ್ಯೋಡಿ, ಸ್ಥಳೀಯರಾದ ರಾಮಚಂದ್ರಭಟ್ ಬಾಂಗೇರು, ರಾಕೇಶ್ ಆಚಾರ್ಯ , ಬಾಳಪ್ಪ ಗೌಡ ದಂಡುಗ, ಮೈರೋಳ್ತಡ್ಕ ಶಾಲಾ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಗುರುಪ್ರಸಾದ್ ಎಂ., ಅಶೋಕ್ ಮೊಗ್ರ, ಗುತ್ತಿಲಾರು ಭಾರತಿಯಮ್ಮನವರ
ಹಿರಿಯ ಪುತ್ರ ಪದ್ಮನಾಭ ಮುಚ್ಚಿನ್ನಾಯ ಮತ್ತು ಸಹೋದರ ಸಹೋದರಿಯರು ಕುಟುಂಬ ವರ್ಗದವರು ಉಪಸ್ಥಿತರಿದ್ದರು.

















Post Comment