ಬೆಳ್ತಂಗಡಿ ತಾಲೂಕು ಕಚೇರಿಗೆ ಲೋಕಾಯುಕ್ತ ದಾಳಿ; ದಾಖಲೆ ಪರಿಶೀಲನೆ!

ಬೆಳ್ತಂಗಡಿ : ಮಂಗಳೂರು ಲೋಕಾಯುಕ್ತ ಇನ್ಸ್ ಪೆಕ್ಟರ್
ವಿನಾಯಕ ಬಿಲ್ಲವ ಅವರ ನೇತೃತ್ವದಲ್ಲಿ ಏಳು ಮಂದಿ ಲೋಕಾಯುಕ್ತ ಅಧಿಕಾರಿಗಳು ದಿಡೀರ್ ಭೇಟಿ ನೀಡಿದ್ದು ಸಾರ್ವಜನಿಕರೊಂದಿಗೆ “ನಾಳೆ ಬನ್ನಿ” ಎಂದು ಕಣ್ಣಾಮುಚ್ಚಾಲೆ ಆಡುವ ಕೆಲವು ಮೈಗಳ್ಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಬೆವರಿಳಿಸಿದ್ದಾರೆ.
ಬುಧವಾರ ಬೆಳಿಗ್ಗೆ ಸುಮಾರು 10 ಗಂಟೆ ಹೊತ್ತಿಗೆ ದಿಢೀರ್ ದಾಳಿ ನಡೆಸಿ ತಹಶೀಲ್ದಾರ್ ಚೇಂಬರ್ ಗೆ ಪ್ರವೇಶಿಸಿದ ಅಧಿಕಾರಿಗಳ ತಂಡ ತಹಶೀಲ್ದಾರ್ ಅವರನ್ನು
ಹೊರತುಪಡಿಸಿ ತಾಲೂಕು ಕಚೇರಿಯ ಎಲ್ಲಾ ವಿಭಾಗಗಳ ಅಧಿಕಾರಿ ಹಾಗೂ ಸಿಬ್ಬಂದಿಗಳ ವೈಯಕ್ತಿಕ ಬ್ಯಾಗ್ ಗಳನ್ನು ತಪಾಸಣೆ ನಡೆಸಿದ್ದು ಕೆಲವು ಅಧಿಕಾರಿಗಳು, ಸಿಬ್ಬಂದಿಗಳು ಏನು ಗ್ರಹಚಾರ ಕಾದಿದೆಯೋ ಎಂದು ಆತಂಕಕ್ಕೊಳಗಾದರು.

ತಾಲೂಕು ಕಚೇರಿಯಲ್ಲಿ ವಿಭಾಗವಾರು ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ತಾಲೂಕು ಕಚೇರಿಯಲ್ಲಿ ಕಡತ,ದಾಖಲೆ ಪರಿಶೀಲನೆ ಮುಂದುವರಿದಿದ್ದು ಅಧಿಕಾರಿಗಳಲ್ಲಿ ಆತಂಕ, ಸಾರ್ವಜನಿಕರಲ್ಲಿ ಕುತೂಹಲ ಮೂಡಿದೆ.















Post Comment