ಮತ್ತೆ ಬಾಲ ಬಿಚ್ಚಿದ ಅ-ನೈತಿಕ ಪೊಲೀಸ್ ಗಿರಿ !

ಮತ್ತೆ ಬಾಲ ಬಿಚ್ಚಿದ ಅ-ನೈತಿಕ ಪೊಲೀಸ್ ಗಿರಿ !

Share
IMG-20260813-WA0000 ಮತ್ತೆ ಬಾಲ ಬಿಚ್ಚಿದ        ಅ-ನೈತಿಕ ಪೊಲೀಸ್ ಗಿರಿ !

ಬೆಳ್ತಂಗಡಿ : ವ್ಯಕ್ತಿಯೊಬ್ಬರು ರಾತ್ರಿ ವೇಳೆ ತಮ್ಮ ಪರಿಚಿತರಾದ ತಾಯಿ ಮತ್ತು ಆಕೆಯ ಅಪ್ರಾಪ್ತ ಮಗಳನ್ನು ಕರೆದುಕೊಂಡು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಗುಂಪೊಂದು ಕಾರನ್ನು ತಡೆದು ನಿಲ್ಲಿಸಿ ಬಾಲಕಿಯ ಬಗ್ಗೆ ವಿಚಾರಿಸಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿಯ ಅವಾಚ್ಯವಾಗಿ ನಿಂದಿಸಿ ಹಲ್ಲೆಗೈದ ಘಟನೆ ಮಂಗಳವಾರ ನಡೆದಿದ್ದು ಘಟನೆಗೆ ಸಂಬಂಧಿಸಿ ಬೆಳ್ತಂಗಡಿಯ ಐದು ಮಂದಿಯ ಮೇಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ.
ಪ್ರಕರಣದಲ್ಲಿ ಕಾರ್ಕಳ ತಾಲೂಕಿನ ಈದು ನಿವಾಸಿ ಶೈಕ್ ಮುಕ್ತಾರ್ (50) ಎಂಬವರ ದೂರಿನಂತೆ ತಮ್ನ ಕೆಲಸದ ನಿಮಿತ್ತ ದಿನಾಂಕ ಆಗಸ್ಟ್ 11-2026ನೇ ಮಂಗಳವಾರ ರಾತ್ರಿ ತನ್ನ ಪರಿಚಯಸ್ಥರೊಬ್ಬರ ಅಪ್ರಾಪ್ತ ಪ್ರಾಯದ ಮಗಳನ್ನು ಕರೆದುಕೊಂಡು ಹಾಸನ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದು ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕೊಕ್ಕಡ ಕಾಪಿನಬಾಗಿಲು ಎಂಬಲ್ಲಿಗೆ ತಲುಪಿದಾಗ, ಅಲ್ಲಿ ಸೇರಿದ್ದ ಕೆಲವು ಜನರ ಗುಂಪು ಶೈಕ್ ಮುಕ್ತಾರ್ ಚಲಾಯಿಸುತ್ತಿದ್ದ
ಕಾರನ್ನು ತಡೆದು ನಿಲ್ಲಿಸಿ, ಕಾರಿನಲ್ಲಿದ್ದ ಅಪ್ರಾಪ್ತ ಬಾಲಕಿಯ ಬಗ್ಗೆ ವಿಚಾರಿಸಿ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿರುತ್ತಾರೆ
ಎಂಬುದಾಗಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 106/2026, ಕಲಂ: 189(2), 191(2), 126(2), 353(2), 352, 115(2) ಜೊತೆಗೆ 190 BNS ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ, ಆರೋಪಿಗಳಾದ 1.ಧನುಷ್ (23), ಕೊಕ್ಕಡ, ಬೆಳ್ತಂಗಡಿ, 2.ದಿನೇಶ್ (45), ಚಾರ್ಮಾಡಿ, ಬೆಳ್ತಂಗಡಿ, 3.ಪೂರ್ಣಕ್ಷ ಬಿ (40), ಪುದುವಟ್ಟು, ಬೆಳ್ತಂಗಡಿ.
4.ಸೂರಜ್ (25), ಕೊಕ್ಕಡ, ಬೆಳ್ತಂಗಡಿ 5.ರಂಜಿತ್ ಬಂಡಾರಿ (29), ಕೊಕ್ಕಡ, ಬೆಳ್ತಂಗಡಿ ಎಂಬವರುಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

IMG-20260615-WA0021-17 ಮತ್ತೆ ಬಾಲ ಬಿಚ್ಚಿದ        ಅ-ನೈತಿಕ ಪೊಲೀಸ್ ಗಿರಿ !

ಪ್ರತಿದೂರು:
ಇದೇ ಘಟನೆಗೆ ಸಂಬಂಧಿಸಿದಂತೆ, ಅಪ್ರಾಪ್ತ ಬಾಲಕಿಯ ತಾಯಿ, ತನ್ನ ಮಗಳನ್ನು ಆರೋಪಿ ಶೇಕ್ ಮುಕ್ತಾರ್ (52) ಎಂಬಾತನು, ಬಲವಂತವಾಗಿ ಆತನ ಕಾರಿನಲ್ಲಿ ಕುಳ್ಳಿರಿಸಿ ಕರೆದುಕೊಂಡು ಹೋಗಿರುತ್ತಾನೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: ZERO FIR 03/2026, ಕಲಂ: 137(2)ಬಿ ಎನ್ ಎಸ್ ರಂತೆ‌ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

IMG-20260804-WA0025-12-683x1024 ಮತ್ತೆ ಬಾಲ ಬಿಚ್ಚಿದ        ಅ-ನೈತಿಕ ಪೊಲೀಸ್ ಗಿರಿ !

Post Comment

ಟ್ರೆಂಡಿಂಗ್‌

error: Content is protected !!