ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪರಿಶಿಷ್ಟರ ಕುಂದು ಕೊರತೆ ಸಭೆ:
ದಲಿತರಿಗೆ ಕಲ್ಲುಬಂಡೆಗಳ ಭೂಮಿ ಹಂಚಿಕೆ ಮಾಡಬೇಡಿ, ಕೃಷಿ ಯೋಗ್ಯ ಭೂಮಿ ಕೊಡಿ: ಸಿ.ಕೆ.ಚಂದ್ರಕಲಾ

ಬೆಳ್ತಂಗಡಿ : ದಲಿತರಿಗೆ ಕಂದಾಯ ಇಲಾಖೆ ಮಂಜೂರಾತಿ ಮಾಡುವ ಬಹುತೇಕ ಭೂಮಿಗಳಲ್ಲಿ ಬಂಡೆಕಲ್ಲುಗಳೇ ಇರುತ್ತದೆ, ದಲಿತರಿಗೆ ಬೇಕಾಗಿರುವುದು ಕೃಷಿ ಯೋಗ್ಯ ಭೂಮಿ, ದಲಿತರಿಗೆ ಅಕ್ರಮ ಸಕ್ರಮ, 94C, ಡಿ.ಸಿ. ಮನ್ನಾ ಅಥವಾ ಯಾವುದೇ ಭೂಮಂಜೂರಾತಿ ಮಾಡುವ ಸಂದರ್ಭದಲ್ಲಿ ದಯವಿಟ್ಟು ಕೃಷಿ ಮಾಡಲು ಯೋಗ್ಯವಾದ ಭೂಮಿಯನ್ನು ಕೊಡಿ, ಅದು ಬಿಟ್ಟು ನಮಗೆ ಕಲ್ಲುಬಂಡೆಗಳೇ ತುಂಬಿರುವ ಕೃಷಿ ಯೋಗ್ಯವಲ್ಲದ ಗುಡ್ಡವನ್ನು ಕೊಡಬೇಡಿ ಎಂದು ಒತ್ತಾಯಿಸಿದರು.
‘ಎ.ಸಿ. ಕಚೇರಿಗೆ ಹೋದ ಕಡತಗಳೆಲ್ಲ ಬಾಕಿ; ಎ.ಸಿ.
ವಿಳಂಬ ಕಾರ್ಯವೈಖರಿಗೆ ಆಕ್ರೋಶ’
ಕೋರ್ಟ್ ಮೂಲಕ ಪಾಲುಪಟ್ಟಿ ಮಾಡಿಕೊಳ್ಳುವ ಪರಿಸ್ಥಿತಿ ಬಂದರೂ ಹಕ್ಕುಪತ್ರ ,ಪಹಣಿ ಬದಲಾಗುತ್ತಿಲ್ಲ, ತಾಲೂಕು ಕಚೇರಿಯಿಂದ ಯಾವುದೇ ಕಡತಗಳು ತಹಶೀಲ್ದಾರ್ ಪ್ರಕ್ರಿಯೆ ಮುಗಿದು ಪುತ್ತೂರು ಎ.ಸಿ. ಕಚೇರಿಗೆ ಕಡತ ಕಳಿಸಿದ್ರೆ ಫ್ರಿಜರ್ ನಲ್ಲಿ ಇಟ್ಟ ಹಾಗೆ. ತಿಂಗಳುಗಟ್ಟಲೆ ವರ್ಷಗಟ್ಟಲೆ ಕಡತಗಳು ಬಾಕಿಯಾಗುತ್ತವೆ, ಎ.ಸಿ. ಸ್ಟೆಲ್ಲಾ ವರ್ಗೀಸ್ ಅವರು ಕಡತ ಮುಟ್ಟುವುದೇ ಇಲ್ಲ, ಹೋದ ಕಡತಗಳು ವರ್ಷಗಟ್ಟಲೆ ಎ.ಸಿ. ಕಚೇರಿಯಲ್ಲಿ ಬಾಕಿಯಾಗುತ್ತಿದ್ದು ಎ.ಸಿ.ಅವರು ಯಾವುದೇ ಕಡತಗಳನ್ನು ಸಕಾಲಕ್ಕೆ ವಿಲೇವಾರಿ ಮಾಡುವುದೇ ಇಲ್ಲ. ಇಂಥ ಎ.ಸಿ. ನಮಗೆ ಬೇಡ, ದಯವಿಟ್ಟು ಈ ಬಗ್ಗೆ ಸೂಚನೆ ನೀಡಿ ಎಂದು ನ್ಯಾಯವಾದಿ, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್ಪು ತ್ತೂರು ಎ.ಸಿ. ಸ್ಟೆಲ್ಲಾ ವರ್ಗೀಸ್ ಅವರ ವಿಳಂಬ ಕಾರ್ಯವೈಖರಿಯ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

” ಡಿ.ಸಿ.ಮನ್ನಾಭೂಮಿ ಒತ್ತುವರಿಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿ”
ಡಿ.ಸಿ.ಮನ್ನಾ ಭೂಮಿ ಕೆ.ಸಿ.ಡಿ.ಸಿ.ಯಲ್ಲಿದೆ, ಒಂದು ಕಡೆ ಗೋಮಾಳದಲ್ಲಿದೆ, ಇನ್ನೊಂದು ಕಡೆ ಅರಣ್ಯ ಇಲಾಖೆಯಿಂದ ಒತ್ತುವರಿಯಾಗಿದೆ, ಇಂದಿಗೂ ಕೆ.ಸಿ.ಡಿ.ಸಿ. ಮತ್ತು ಅರಣ್ಯ ಇಲಾಖೆ ಉಳಿದ ಡಿ.ಸಿ.ಮನ್ನಾ ಭೂಮಿ ಒತ್ತುವರಿ ಮಾಡಿ ನೆಡುತೋಪುಗಳನ್ನು ಮಾಡಿಕೊಳ್ಳುತ್ತಲೇ ಇದೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ಸ್ಪಷ್ಟ ಸೂಚನೆ ಮತ್ತು ನಿರ್ದೇಶನ ನೀಡಬೇಕು ಎಂದು ಆದಿದ್ರಾವಿಡ ಮುಖಂಡ ಲಕ್ಷ್ಮಣ್ ಜಿ.ಎಸ್. ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
“ಪರಿಶಿಷ್ಟರ 9 ವಿದ್ಯಾರ್ಥಿ
ನಿಲಯಗಳಲ್ಲಿ ಒಬ್ಬನೇ ವಾರ್ಡನ್! “
ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಟ್ಟು 13 ವಿದ್ಯಾರ್ಥಿ ನಿಲಯಗಳಲ್ಲಿ ವಾರ್ಡನ್ಹು ದ್ದೆಗಳು ಖಾಲಿ ಇದೆ, 4 ಪ.ಜಾ. ಹಾಗೂ 9.ಪ.ಪಂ. ಸೇರಿ ಒಟ್ಟು 13 ಹಾಸ್ಟೆಲ್ ಇದ್ದು 13 ವಾರ್ಡನ್ ಗಳ ಬೇಡಿಕೆ ಇದೆ, ಇರುವುದು ಕೇವಲ 4 ವಾರ್ಡನ್ ಗಳನ್ನು 9 ಹಾಸ್ಟೆಲ್ ಗಳಿಗೆ ನಿಯೋಜಿಸಲಾಗಿದೆ. ಖಾಲಿ ಇರುವ ವಾರ್ಡನ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಲು ಕ್ರಮ ಕೈಗೊಳ್ಳಿ ಎಂದು ಕರ್ನಾಟಕ ದ.ಸಂ.ಸ (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ರಮೇಶ್ ಆರ್ ಒತ್ತಾಯಿಸಿದರು.
ಗುರುವಾಯನಕೆರೆ – ಉಪ್ಪಿನಂಗಡಿ ರಸ್ತೆಯು ತೀವ್ರ ಹದಗೆಟ್ಟಿದೆ, ವಾಹನ ತೊಂದರೆಯಾಗುತ್ತಿದೆ. ಈ ರಸ್ತೆಯನ್ನು ಕೂಡಲೇ ಅಭಿವೃದ್ಧಿಪಡಿಸಬೇಕು ಎಂದು ಈಶ್ವರಿ ಶಂಕರ್ ಆಗ್ರಹಿಸಿದರು.
“ಆದಿದ್ರಾವಿಡ ಜಾತಿ ಪ್ರಮಾಣಪತ್ರದಲ್ಲಿ ಪ್ರವರ್ಗ ಗೊಂದಲ”
ಕಂದಾಯ ಇಲಾಖೆಯಿಂದ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆಯುವ ಸಂದರ್ಭ ಉಪಜಾತಿಯಲ್ಲಿ ಪ್ರವರ್ಗ ನಮೂದಿಸುವಾಗ ಗೊಂದಲವಾಗುತ್ತಿದೆ ಇದು ಪಿ.ಡಿ.ಒ. ಹುದ್ದೆಗೆ ಅರ್ಜಿ ಸಲ್ಲಿಸಲು ಅಡ್ಡಿಯಾಗುತ್ತಿದೆ ಎಂದು ಬಿ.ಎಸ್.ಪಿ. ತಾಲೂಕು ಅಧ್ಯಕ್ಷ ಪಿ.ಎಸ್.ಶ್ರೀನಿವಾಸ್ ಪ್ರಸ್ತಾಪಿಸಿದರು.
ಜಿಲ್ಲಾಧಿಕಾರಿ ಸೆಂಥಿಲ್ ಅವರು ಇರುವಾಗ ಪ್ರತೀ ತಿಂಗಳಿಗೊಮ್ಮೆ ತಾಲೂಕಿಗೆ ಭೇಟಿ ಕೊಡುತ್ತಿದ್ದರು.
ಅವರು ರಾಜಿನಾಮೆ ಕೊಟ್ಟ ಬಳಿಕ ಅದು ನಿಂತು ಹೋಯುತು. ದಯವಿಟ್ಟು ತಾವು ಇನ್ನಾದರೂ ತಾಲೂಕು ಕೇಂದ್ರದಲ್ಲಿ ತಿಂಗಳಿಗೊಮ್ಮೆ ಸಭೆ, ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಶೇಖರ್ ಎಲ್ ಹೇಳಿದರು. ಗ್ರಾ.ಪಂ. ಮಟ್ಟದ ಪೌರ ಕಾರ್ಮಿಕರೆ ತಿಂಗಳಿಡೀ ಕೆಲಸವಿಲ್ಲದೆ ಅತಂತ್ರರಾಗಿದ್ದಾರೆ. ಇನ್ನೊಂದೆಡೆ ಸಂಜೀವಿನಿ ಒಕ್ಕೂಟದವರು ಇದೇ ಪೌರ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದು ಇವರಿಗೆ ಸರಿಯಾಗಿ ಉದ್ಯೋಗ ಭದ್ರತೆ ಒದಗಿಸಬೇಕು ಎಂದು ಶೇಖರ್ ಒತ್ತಾಯಿಸಿದರು.

ಕೊಯ್ಯೂರು ಗ್ರಾಮದಲ್ಲಿ ಕೆ.ಸಿ.ಡಿ.ಸಿ. ವಶದಲ್ಲಿ ನೂರಾರು ಎಕ್ರೆ ಡಿ.ಸಿ. ಮನ್ನಾ ಭೂಮಿ ಇದೆ, ಈ ಭೂಮಿಯನ್ನು ದಲಿತರಿಗೆ ಕೃಷಿ ಭೂಮಿಗಾಗಿ ಮಂಜೂರಾತಿ ಮಾಡಬೇಕು ಎಂದು ಒತ್ತಾಯಿಸಿದರು.
ವೇಣೂರಿನಲ್ಲಿ ರುದ್ರಭೂಮಿ ಸಮಸ್ಯೆ, ಅರಣ್ಯದಂಚಿನ ಕುಟುಂಗಳ ಮೂಲಭೂತ ಸೌಲಭ್ಯಗಳ ಬೇಡಿಕೆ,
ಅಳದಂಗಡಿ ಬರಾಯ ಗಣಿಗಾರಿಕೆ ತೊಂದರೆ ಇತ್ಯಾದಿ ಪ್ರಮುಖ ವಿಷಯಗಳೂ ಸೇರಿದಂತೆ ಪರಿಶಿಷ್ಟರ ಹತ್ತಾರು ಕುಂದು ಕೊರತೆಗಳನ್ನು ಸ್ಥಳೀಯ ಮುಖಂಡರು ಪರಿಹಾರ ಕೋರಿ ಪ್ರಸ್ತಾಪಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಈ ಬಗ್ಗೆ ಸಂಬಂದಪಟ್ಟ ಇಲಾಖಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆಗಳ ವರದಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಗಮನಹರಿಸುತ್ತೇನೆ ಎಂದು ದ.ಕ. ಜಿಲ್ಲಾಧಿಕಾರಿ ದರ್ಶನ್ ಕೆ.ವಿ. ಭರವಸೆ ನೀಡಿದರು.















Post Comment