ನಾಳೆ ಬೆಳ್ತಂಗಡಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಪರಿಶಿಷ್ಟರ ಕುಂದು ಕೊರತೆ ಸಭೆ

ಜಿಲ್ಲಾ ಮಟ್ಟದ ಸಭೆ ಬದಲಾಗಿ ತಾಲೂಕುವಾರು ಸಭೆ
ಬೆಳ್ತಂಗಡಿ : ಆಗಸ್ಟ್ 20-2026ನೇ ಗುರುವಾರದಂದು ಪೂರ್ವಹ್ನ 11:00 ಗಂಟೆಗೆ ದ.ಕ. ಜಿಲ್ಲಾಧಿಕಾರಿ ದರ್ಶನ್ ಕೆ.ವಿ. ಅವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ತಾಲೂಕು ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಕುಂದು ಕೊರತೆ ಸಭೆ ನಡೆಯಲಿದೆ.
ಈ ಮಹತ್ವದ ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಮುಖಂಡರು ಭಾಗವಹಿಸಿ ತಾವು ಪ್ರತಿನಿಧಿಸುವ ಸಮುದಾಯದ ಕುಂದು ಕೊರತೆಗಳನ್ನು ಬಗೆಹರಿಸಿಕೊಳ್ಳುವ ಕುರುತು ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ಕೋರಲಾಗಿದೆ.

ಈ ಕೆಳಗೆ ಕಾಣಸಿದ ತಾಲೂಕು ಮಟ್ಟದ ಅಧಿಕಾರಿಗಳಿಗೆ ತಮ್ಮ ಇಲಾಖೆಗೆ ಸಂಬಂಧಪಟ್ಟ ಅಗತ್ಯ ಮಾಹಿತಿಯೊಂದಿಗೆ ಖುದ್ದು ಹಾಜರಾಗಲು ಸೂಚಿಸಲಾಗಿದೆ.
ಪೊಲೀಸ್ ಉಪಾಧೀಕ್ಷಕರು ಬೆಳ್ತಂಗಡಿ ಉಪ ವಿಭಾಗ, ಬೆಳ್ತಂಗಡಿ, ಕ್ಷೇತ್ರ ಶಿಕ್ಷಣಾಧಿಕಾರಿಯವರು ಬೆಳ್ತಂಗಡಿ, ಮುಖ್ಯಾಧಿಕಾರಿ ನಗರ ಪಂಚಾಯತ್ ಬೆಳ್ತಂಗಡಿ, ವೃತ್ತ ನಿರೀಕ್ಷಕರು ಆರಕ್ಷಕ ಠಾಣೆ ಬೆಳ್ತಂಗಡಿ, ಬೆಳ್ತಂಗಡಿ,
ಪುಂಜಾಲಕಟ್ಟೆ, ಧರ್ಮಸ್ಥಳ, ವೇಣೂರು ಹಾಗೂ ಉಪ್ಪಿನಂಗಡಿ ಆರಕ್ಷಕ ಠಾಣೆಗಳ ಪೋಲೀಸ್ ನಿರೀಕ್ಷಕರು,
ಸಹಾಯಕ ಕಾರ್ಯಪಾಲಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಬೆಳ್ತಂಗಡಿ, ಸಹಾಯಕ ಕಾರ್ಯಪಾಲಕ ಅಭಿಯಂತರರು ಪಂ.ರಾಜ್ ಇಂಜೀನಿಯರಿಂಗ್ ಉಪ ವಿಭಾಗ ಬೆಳ್ತಂಗಡಿ,
ತಾಲೂಕು ಕಲ್ಯಾಣಾಧಿಕಾರಿ ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಇಲಾಖೆ ಬೆಳ್ತಂಗಡಿ, ತಾಲೂಕು ಆರೋಗ್ಯಾಧಿಕಾರಿ ಬೆಳ್ತಂಗಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಳ್ತಂಗಡಿ, ಸಹಾಯಕ ನಿರ್ದೇಶಕರು
ಕೃಷಿ ಇಲಾಖೆ ಬೆಳ್ತಂಗಡಿ, ಸಹಾಯಕ ನಿರ್ದೇಶಕರು ತೋಟಗಾರಿಕಾ ಇಲಾಖೆ ಬೆಳ್ತಂಗಡಿ, ಅಬಕಾರಿ ನಿರೀಕ್ಷಕರು ಅಬಕಾರಿ ಇಲಾಖೆ ಬೆಳ್ತಂಗಡಿ, ಕಾರ್ಮಿಕ ನಿರೀಕ್ಷಕರು ಕಾರ್ಮಿಕ ಇಲಾಖೆ ಬೆಳ್ತಂಗಡಿ, ವೇಣೂರು, ಬೆಳ್ತಂಗಡಿ, ಉಪ್ಪಿನಂಗಡಿ, ವಲಯಗಳ ಅರಣ್ಯಾಧಿಕಾರಿಗಳು ಅರಣ್ಯ ಇಲಾಖೆ , ಮತ್ತು ವಲಯ ಅರಣ್ಯಾಧಿಕಾರಿ ಸಾಮಾಜಿಕ ಅರಣ್ಯ ಇಲಾಖೆ ಬೆಳ್ತಂಗಡಿ, ವಲಯ ಅರಣ್ಯಾಧಿಕಾರಿ ವನ್ಯಜೀವಿ ವಲಯ ಬೆಳ್ತಂಗಡಿ, ಸಹಾಯಕ ನಿರ್ದೇಶಕರು ಪಶುಸಂಗೋಪನೆ ಇಲಾಖೆ ಬೆಳ್ತಂಗಡಿ ಭೂದಾಖಲೆಗಳ ಸಹಾಯಕ ನಿರ್ದೇಶಕರು ಬೆಳ್ತಂಗಡಿ, ಸಹಾಯಕ ಕ್ರೀಡಾಧಿಕಾರಿ ಯುವಜನ ಸೇವಾ ಇಲಾಖೆ, ಮಂಗಳೂರು.
ಸಹಕಾರಿ ಸಂಘಗಳ ಸಹಾಯಕ ನಿಬಂಧಕರು, ಪುತ್ತೂರು ಉಪ ವಿಭಾಗ, ಸಹಕಾರಿ ಸಂಘಗಳ ನಿರೀಕ್ಷಕರು, ಬೆಳ್ತಂಗಡಿ ತಾಲೂಕು ಸೇರಿದಂತೆ ಸುಮಾರು ತಾಲೂಕು ಮಟ್ಟದ 28ಕ್ಕೂ ಅಧಿಕ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಖುದ್ದು ಹಾಜರಿರುವಂತೆ ಬೆಳ್ತಂಗಡಿ ತಹಶೀಲ್ದಾರ್ ಎಸ್.ಎನ್. ನರಗುಂದ ಅವರ ಆಹ್ವಾನಪತ್ರದಲ್ಲಿ ಸೂಚಿಸಲಾಗಿದೆ.
















Post Comment