ಧರ್ಮಸ್ಥಳ ಕು.ಸೌಜನ್ಯ ಮನೆಗೆ ಆರೆಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅಚ್ಚರಿಯ ಭೇಟಿ
ನೊಂದ ಹಿಂದೂ ಕುಟುಂಬಕ್ಕೆ ಧೈರ್ಯ ತುಂಬಲು 14 ವರ್ಷಗಳ ಬಳಿಕ ‘ಧೈರ್ಯ’ ಬಂತೇ?
“ನಿಮ್ಮೊಂದಿಗೆ ಸದಾ ನಾನಿದ್ದೇನೆ” ಎಂದ ಭಟ್ಟರಿಗೆ ಯಾವ ಹಣೆಪಟ್ಟಿ ಕಟ್ಟಬಹುದು?
ಬೆಳ್ತಂಗಡಿ : ಕಳೆದ 14 ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಬಳಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಉಜಿರೆ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿನಿ, ಧರ್ಮಸ್ಥಳ ಗ್ರಾಮದ ಪಾಂಗಾಳ ಕು.ಸೌಜನ್ಯ ಅವರ ಮನೆಗೆ ಆರ್.ಎಸ್.ಎಸ್. ಹಿರಿಯ ಮುಖಂಡ ಕಲ್ಲಡ್ಕ
ಡಾ.ಪ್ರಭಾಕರ ಭಟ್ಅ ವರು ಬುಧವಾರ ಭೇಟಿ ನೀಡಿ ಸಂಚಲನ ಮೂಡಲು ಕಾರಣವಾಗಿದೆ.
ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಸೌಜನ್ಯ ಅವರ ತಾಯಿ ಕುಸುಮಾವತಿ ಚಂದಪ್ಪ ಗೌಡ ಅವರೊಂದಿಗೆ ಮಾತುಕತೆ ನಡೆಸಿದ ಆರೆಸೆಸ್ ಮುಖಂಡ ಡಾ. ಪ್ರಭಾಕರ ಭಟ್ ಸೌಜನ್ಯ ಕುಟುಂಬದೊಂದಿಗೆ ಸದಾ ತಾನಿರುವುದಾಗಿ ಧೈರ್ಯ ತುಂಬಿದ್ದು ಇಷ್ಟು ವರ್ಷಗಳ ಬಳಿಕ ಭೇಟಿ ನೀಡಿರುವುದು ವ್ಯಾಪಕ ಚರ್ಚೆಗೂ ಇನ್ನೊಂದೆಡೆ ಕುತೂಹಲಕ್ಕೂ ಕಾರಣವಾಗಿದೆ.
ಧರ್ಮಸ್ಥಳದಲ್ಲಿ
ಸಮೂಹ ಸಮಾಧಿ ಪ್ರಕರಣದ
ಎಸ್ ಐ ಟಿ ತನಿಖೆ ನಡೆಯುತ್ತಿದ್ದ ವೇಳೆ
ಧರ್ಮಸ್ಥಳದಲ್ಲಿ ಬಿಜೆಪಿ ನೇತೃತ್ವದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ
ಎಸ್ ಐ ಟಿ
ತನಿಖೆಯನ್ನು ಮತ್ತು ಸೌಜನ್ಯಪರ ಹೋರಾಟಗಾರರನ್ನು ಬುರುಡೆ ಗ್ಯಾಂಗ್ ಎಂಬ ಹಣೆಪಟ್ಟಿ ಕಟ್ಟಿ ಟೀಕಿಸಿ
ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು.
ಅದೇ ದಿನ 13 ವರ್ಷಗಳ ಬಳಿಕ
ಸೌಜನ್ಯ ಮನೆಗೆ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತಿತರ ಮುಖಂಡರುಗಳು ಭೇಟಿ ನೀಡಿ ಧೈರ್ಯ ತುಂಬಿ ಸುಪ್ರೀಮ್ ಕೋರ್ಟ್ ನಲ್ಲಿ ನ್ಯಾಯಕ್ಕಾಗಿ ಹೋರಾಡುವುದಾದರೆ ಅದರ ಖರ್ಚು ಭರಿಸುವುದಾಗಿ ಭರವಸೆ ನೀಡಿ ಸಂಚಲನ ಮೂಡಿತ್ತು.
ಅಂದು ಬಿಜೆಪಿ ನಾಯಕರನ್ನು ಸೌಜನ್ಯ ತಾಯಿ ಕುಸುಮಾವತಿ
” ಇಷ್ಟು ವರ್ಷಗಳಿಂದ ನ್ಯಾಯಕ್ಕಾಗಿ ಅಲೆಯುತ್ತಿದ್ದೇವೆ ಈಗ ಬಂದಿದ್ದಿರಿ ಇಷ್ಟು ವರ್ಷ ಎಲ್ಲಿದ್ದಿರಿ ಎಂದು
ತರಾಟೆಗೆ ತೆಗೆದುಕೊಂಡಿದ್ದರು.
“ಕಳೆದೊಂದು ದಶಕಕ್ಕೂ ಹೆಚ್ಚು ಸಮಯದಿಂದ
ಮಗಳ ಸಾವಿಗೆ ನ್ಯಾಯಕ್ಕಾಗಿ ನಾನಾ ರೀತಿಯಲ್ಲಿ ಹೋರಾಟ ನಡೆಸುತ್ತಾ ಬಂದಿದ್ದೀರಾ ಹೋರಾಟವನ್ನು ಮುಂದುವರಿಸಿ” ಎಂದು
ಸಲಹೆ ನೀಡಿದ
ಆರ್ ಎಸ್ ಎಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್
ಸದಾ ಕುಟುಂಬಸ್ಥರೊಂದಿಗೆ ತಾನಿರುವುದಾಗಿ ಧೈರ್ಯ ತುಂಬಿ ಭರವಸೆ ನೀಡಿದರು.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಪಾಂಗಾಳ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿಯ ಪುತ್ರಿ ಉಜಿರೆ ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿನಿ ಕು. ಸೌಜನ್ಯ 2012ರ ಅಕ್ಟೋಬರ್ 12ರಂದು ಸಂಜೆ ಕಾಲೇಜು ಬಿಟ್ಟು ಬಸ್ಸಿನಲ್ಲಿ ಬಂದು ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಬಳಿಯ ಬಸ್ ನಿಲ್ದಾಣದಲ್ಲಿ ಇಳಿದು ಮುಖ್ಯ ರಸ್ತೆಯಲ್ಲಿ ಮನೆಗೆ ನಡೆದು ಹೋಗುತ್ತಿದ್ದ ದಾರಿ ಮಧ್ಯೆ ಅಪಹರಣಗೊಂಡು ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದ್ದಳು.
ಬೆಳ್ತಂಗಡಿಯಿಂದ ಆರಂಭಿಸಿ ರಾಜ್ಯಾದ್ಯಾಂತ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದ
ಸೌಜನ್ಯ ಹೆತ್ತವರು
ದೆಹಲಿವರೆಗೂ ಹೋರಾಟವನ್ನು ಕೊಂಡೊಯ್ದು ದೇಶ,ವಿದೇಶಗಳ ಗಮನ ಸೆಳೆದಿದ್ದರು.
ಹೀಗೆ14 ವರ್ಷಗಳಿಂದ ಸೌಜನ್ಯ ಕುಟುಂಬ ನ್ಯಾಯಕ್ಕಾಗಿ ಹೋರಾಡುತ್ತಿರುವುದು
ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಕಲ್ಲಡ್ಕ ಪ್ರಭಾಕರ ಭಟ್
ಸೌಜನ್ಯ ಮನೆಗೆ ಭೇಟಿ ನೀಡಿದ ಸಂದರ್ಭ ಉದ್ಯಮಿ ಸದಾನಂದ ನಾವರ, ಬಾಲಕೃಷ್ಣ ಬಿರ್ಮೊಟ್ಟು , ಪುರಂದರ, ಮೋಹನ್ ಶೆಟ್ಟಿ ಉಜಿರೆ ಮತ್ತಿತರರು ಉಪಸ್ಥಿತರಿದ್ದರು.
ಮಗಳ ಸಾವಿಗೆ ನ್ಯಾಯಕ್ಕಾಗಿ ಹೋರಾಡುತ್ತಿರುವ ಸೌಜನ್ಯ ಕುಟುಂಬದವರನ್ನು ಮತ್ತು ಬೆಂಬಲಿಸುವ ಹೋರಾಟಗಾರರನ್ನು ಬುರುಡೆ ಗ್ಯಾಂಗ್ ಎಂದು ದಿನ ನಿತ್ಯ ನಿಂದಿಸುತಗತಿರುವ ಅತೃಪ್ತ ಆತ್ಮಗಳು
ಇದೀಗ ಸೌಜನ್ಯ ತಾಯಿ ಕುಸುಮಾವತಿ ಅವರನ್ನು ಭೇಟಿಯಾಗಿ ದೈರ್ಯ ತುಂಬಿದ ಆರೆಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಯಾವ ಹಣೆಪಟ್ಟಿ ಕಟ್ಟಬಹುದು ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದ್ದು ಒಟ್ಟಿನಲ್ಲಿ ಈ ಭೇಟಿ ಒಂದು ರೀತಿಯ ಸಂಚಲನ ಮೂಡಿಸಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದೆ.














Post Comment