ಝೀ ಕನ್ನಡ ‘ಸರಿಗಮಪ’ ಲಿಟಲ್ ಚಾಂಪ್ಸ್ ವಿಜೇತ ಅಶ್ಮಿತ್ ಎಜೆ ವಿಜಯ ಸಂಭ್ರಮಾಚರಣೆ ಮಂಗಳೂರಿನಲ್ಲಿ ಇಂದು

ಮಂಗಳೂರು : ಕರ್ನಾಟಕದ ಅತೀ ದೊಡ್ಡ ರಿಯಾಲಿಟಿ ಶೋ ವೇದಿಕೆಯಾದ ಝೀ ಕನ್ನಡದಲ್ಲಿ ಪ್ರಸಾರವಾಗುವ ‘ಸರಿಗಮಪ ಲಿಟಲ್ ಚಾಂಪ್ಸ್’ ಸಂಗೀತ ಕಾರ್ಯಕ್ರಮದಲ್ಲಿ
ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿ ವಿಜಯಶಾಲಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಜಯರಾಮ್ ಮತ್ತು ರೇವತಿ ದಂಪತಿಯ ಹೆಮ್ಮೆಯ ಪುತ್ರ ಅಶ್ಮಿತ್ ಎ ಜೆ ಇವರ ಗೆಲುವಿನ ಗೌರವ- ಸಂಭ್ರಮಾಚರಣೆಯನ್ನು ‘ರೋಡ್ ಶೋ’ ಮೆರವಣಿಗೆಯ ಮೂಲಕ ಆ.29ನೇ ಇಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ವಿಜಯ ಸಂಭ್ರಮಾಚರಣಾ ಮೆರವಣಿಗೆಯು ಮಂಗಳೂರಿನ ಜ್ಯೋತಿ ವೃತ್ತದಿಂದ ಹೊರಟು ಹಂಪನಕಟ್ಟೆಯಾಗಿ ಸಾಗಿ ರಾಜ್ಯ ಸರ್ಕಾರಿ ನೌಕರರ ನಂದಿನಿ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮದೊಂದಿಗೆ ಸಮಾಪ್ತಿಗೊಳ್ಳಲಿದೆ.
ಈ ಕಾರ್ಯಕ್ರಮದಲ್ಲಿ ಸಂಗೀತ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಜೇತ ಹೆಮ್ಮೆಯ ಅಶ್ಮಿತ್ ಎ.ಜೆ. ಇವರಿಗೆ ಶುಭ ಹಾರೈಸಿ ಆಶೀರ್ವದಿಸಬೇಕಾಗಿ ಆಯೋಜಕರು ವಿನಂತಿಸಿದ್ದಾರೆ.















Post Comment