ಧರ್ಮಸ್ಥಳ ಬಂಗ್ಲೆಗುಡ್ಡೆಯಲ್ಲಿ ಯೂಟ್ಯೂಬರ್ ಗಳಿಂದ ವೀಡಿಯೋ ಚಿತ್ರೀಕರಣ; ಅರಣ್ಯ ಇಲಾಖೆಯಿಂದ ‘ಅಕ್ರಮ ಪ್ರವೇಶ’ ಪ್ರಕರಣ ದಾಖಲು

ಧರ್ಮಸ್ಥಳ ಬಂಗ್ಲೆಗುಡ್ಡೆಯಲ್ಲಿ ಯೂಟ್ಯೂಬರ್ ಗಳಿಂದ ವೀಡಿಯೋ ಚಿತ್ರೀಕರಣ; ಅರಣ್ಯ ಇಲಾಖೆಯಿಂದ ‘ಅಕ್ರಮ ಪ್ರವೇಶ’ ಪ್ರಕರಣ ದಾಖಲು

Share
IMG-20260920-WA0006-1-1024x986 ಧರ್ಮಸ್ಥಳ ಬಂಗ್ಲೆಗುಡ್ಡೆಯಲ್ಲಿ ಯೂಟ್ಯೂಬರ್ ಗಳಿಂದ ವೀಡಿಯೋ ಚಿತ್ರೀಕರಣ; ಅರಣ್ಯ ಇಲಾಖೆಯಿಂದ 'ಅಕ್ರಮ ಪ್ರವೇಶ' ಪ್ರಕರಣ ದಾಖಲು

ಬೆಳ್ತಂಗಡಿ : ಧರ್ಮಸ್ಥಳ ಠಾಣಾ ವ್ಯಾಪ್ತಿಯ ಬಂಗ್ಲೆಗುಡ್ಡೆ ರಕ್ಷಿತಾರಣ್ಯಕ್ಕೆ ಇಬ್ಬರು ಯುವಕರು ಅಕ್ರಮವಾಗಿ ಪ್ರವೇಶಿಸಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಸ್ಥಳೀಯರು ಅವರುಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುತ್ತಾರೆ” ಎಂಬಿತ್ಯಾದಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಯ ಕುರಿತು ದ.ಕ. ಎಸ್.ಪಿ. ಕಚೇರಿ ಸ್ಪಷ್ಟನೆ ನೀಡಿದೆ.
” ಪೂರ್ವಾನುಮತಿ‌ ಪಡೆಯದೇ ರಕ್ಷಿತಾರಣ್ಯಕ್ಕೆ ತೆರಳಿದ ಹಿನ್ನೆಲೆಯಲ್ಲಿ ಯುವಕರ ವಿರುದ್ಧ ಅರಣ್ಯ ಇಲಾಖೆಯು ದೂರರ್ಜಿ ದಾಖಲಿಸಿಕೊಂಡಿದೆ. ಮುಂದಿನ ಕಾನೂನು ಕ್ರಮ ಜರುಗಿಸುವುದಾಗಿ ಅರಣ್ಯ ಇಲಾಖೆಯಿಂದ ಮಾಹಿತಿ ನೀಡಿರುತ್ತಾರೆ.” ಎಂದು ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ.

IMG-20260921-WA0003-1024x1024 ಧರ್ಮಸ್ಥಳ ಬಂಗ್ಲೆಗುಡ್ಡೆಯಲ್ಲಿ ಯೂಟ್ಯೂಬರ್ ಗಳಿಂದ ವೀಡಿಯೋ ಚಿತ್ರೀಕರಣ; ಅರಣ್ಯ ಇಲಾಖೆಯಿಂದ 'ಅಕ್ರಮ ಪ್ರವೇಶ' ಪ್ರಕರಣ ದಾಖಲು

ಯುವಕರ ಮೇಲೆ ಯಾವುದೇ ಹಲ್ಲೆ ಅಥವಾ ತೊಂದರೆಯಾಗಿದ್ದಲ್ಲಿ ದೂರು‌ ನೀಡಲು ಸೂಚಿಸಿದ್ದು ಈ ಬಗ್ಗೆ ಚರ್ಚಿಸಿ ಅಗತ್ಯವಿದ್ದಲ್ಲಿ ದೂರು ನೀಡುವುದಾಗಿ ಯುವಕರು ತಿಳಿಸಿದ್ದು ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿರುವುದಿಲ್ಲ” ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

Post Comment

ಟ್ರೆಂಡಿಂಗ್‌

error: Content is protected !!