ಧರ್ಮಸ್ಥಳ ಸೌಜನ್ಯ ಪ್ರಕರಣದ ಮರುತನಿಖೆ: ಎಸ್ಐಟಿಗೆ ಮತ್ತೆ 16 ಮಂದಿ ಸಹಾಯಕ ಅಧಿಕಾರಿಗಳ ನೇಮಕ

ಧರ್ಮಸ್ಥಳ ಸೌಜನ್ಯ ಪ್ರಕರಣದ ಮರುತನಿಖೆ: ಎಸ್ಐಟಿಗೆ ಮತ್ತೆ 16 ಮಂದಿ ಸಹಾಯಕ ಅಧಿಕಾರಿಗಳ ನೇಮಕ

Share
IMG-20260922-WA0004-1-1024x1024 ಧರ್ಮಸ್ಥಳ ಸೌಜನ್ಯ ಪ್ರಕರಣದ ಮರುತನಿಖೆ: ಎಸ್ಐಟಿಗೆ ಮತ್ತೆ 16 ಮಂದಿ ಸಹಾಯಕ ಅಧಿಕಾರಿಗಳ ನೇಮಕ

ಬೆಳ್ತಂಗಡಿ : ಸುಪ್ರೀಂಕೋರ್ಟ್ ಆದೇಶದಂತೆ
ಧರ್ಮಸ್ಥಳ ಕು. ಸೌಜನ್ಯ ಅತ್ಯಾಚಾರ- ಕೊಲೆ ಪ್ರಕರಣದ ಮರುತನಿಖೆಗಾಗಿ ರಾಜ್ಯ ಸರಕಾರ ಈಗಾಗಲೇ
ಎನ್ ಶಶಿಕುಮಾರ್ ಐಪಿಎಸ್ ನೇತೃತ್ವದ ಎಸ್ಐಟಿ ರಚಿಸಿ ಆದೇಶ ಹೊರಡಿಸಿದ್ದು ಈ ಎಸ್ ಐ ಟಿ ಕಳಂಕಿತ ಅಧಿಕಾರಿಗಳಿಂದ ಕೂಡಿದೆ ಎಂಬ ವ್ಯಾಪಕ ವಿರೋಧಗಳ ನಡುವೆಯೂ ಇದೇ ತಂಡಕ್ಕೆ ಮತ್ತೆ 26 ಮಂದಿ ಸಹಾಯಕ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ.

ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖಾ ದಳದ ಮುಖಸ್ಥರಾಗಿ ಎನ್.ಶಶಿಕುಮಾರ್ ಐಪಿಎಸ್, ಪೊಲೀಸ್ ಮಹಾನಿರೀಕ್ಷಕರು ಹಾಗೂ ಸದಸ್ಯರುಗಳಾದ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸಿ.ಹೆಚ್.ಸುಧೀರ್ ಕುಮಾರ್ ರೆಡ್ಡಿ, ಬೆಂಗಳೂರು ರಾಜ್ಯ ಗುಪ್ತ ವಾರ್ತೆ ಶ್ರೀಮತಿ ನಿಶಾ ಜೇಮ್ಸ್ , ಬೆಂಗಳೂರು ಸಿಐಡಿ ಪೊಲೀಸ್ ಅಧೀಕ್ಷಕರಾದ ಲೋಕೇಶ್ ಜಗಲಸಾರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವೆಂಕಟೇಶ್ ಪ್ರಸನ್ನ ಅವರನ್ನು ಒಳಗೊಂಡ ಐದು ಮಂದಿಯ ಅಧಿಕಾರಿಗಳ ತಂಡವನ್ನು ಸೆ.24ರಂದು ಸರಕಾರ ರಚನೆ ಮಾಡಿತ್ತು.‌ ಇದೇ ತಂಡಕ್ಕೆ ಇದೀಗ ಸಹಾಯಕರಾಗಿ 16 ಮಂದಿಯನ್ನು ನೇಮಕ ಮಾಡಿ ಡಿಜಿ & ಐಜಿಪಿ ಡಾ.ಎಂ.ಎ.ಸಲೀಂ ಅವರು ಸೆ.29ರಂದು ಆದೇಶ ಹೊರಡಿಸಿದ್ದಾರೆ.

IMG-20260615-WA0021-35 ಧರ್ಮಸ್ಥಳ ಸೌಜನ್ಯ ಪ್ರಕರಣದ ಮರುತನಿಖೆ: ಎಸ್ಐಟಿಗೆ ಮತ್ತೆ 16 ಮಂದಿ ಸಹಾಯಕ ಅಧಿಕಾರಿಗಳ ನೇಮಕ

ಎಸ್ಐಟಿ ತನಿಖಾ ಸಹಾಯಕರಾಗಿ ಮಂಗಳೂರು ನಗರ ಸಿಸಿಬಿಯ ಎಸಿಪಿ ಮನೋಜ್ ಕುಮಾರ್ ನಾಯಕ್, ಬೆಂಗಳೂರು ಸಿಸಿಬಿ ಎಸಿಪಿ ರಾಮಚಂದ್ರ.ಬಿ, ಸಿಐಡಿ ಇನ್ಸ್‌ಪೆಕ್ಟರ್ ದೀಪಕ್, ಇನ್ಸ್‌ಪೆಕ್ಟರ್ ಮೋಹನ್ ಡಿ ಪಾಟೀಲ್, ಮಡಿವಾಳ ಸಂಚಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಈಶ್ವರಿ, ಕೋಣಾಜೆ ಪೊಲೀಸ್ ಠಾಣೆಯ ಪಿಎಸ್ಐ ಪುನೀತ್ ಗಾವಂಕರ್, ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಪ್ರದೀಪ್, ಕಂಕನಾಡಿ ಪೊಲೀಸ್ ಠಾಣೆಯ ಮ.ಪಿಎಸ್ಐ ಅನಿತಾ ನಿಕಂ, ಮಂಗಳೂರು ಸಿಸಿಬಿ ಎಎಸ್ಐ ಮೋಹನ್, ಕಂಕನಾಡಿ ಪೊಲೀಸ್ ಠಾಣೆಯ ಸಿಬ್ಬಂದಿ ಪ್ರದೀಪ್ ಕುಮಾರ್ ರೈ, ಗೋವರ್ಧನ್, ದಿನೇಶ್.ಎನ್, ಉಳ್ಳಾಲ ಪೊಲೀಸ್ ಠಾಣೆಯ ಸಿಬ್ಬಂದಿ ರಾಧಕೃಷ್ಣ.ಕೆ.ಕೆ, ಕಾವೂರು ಪೊಲೀಸ್ ಠಾಣೆಯ ಸಿಬ್ಬಂದಿ ರೆಜಿ.ವಿ.ಎಂ, ಸುರತ್ಕಲ್ ಪೊಲೀಸ್ ಠಾಣೆಯ ಸಿಬ್ಬಂದಿ ರಾಜೇಂದ್ರ ಪ್ರಸಾದ್.ವಿ.ಪಿ, ಕಂಕನಾಡಿ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಪ್ರಮೀಳಾ ಅವರನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿದೆ.
ಇದೀಗ ಎರಡನೇ ಹಂತದಲ್ಲಿ ನೇಮಕಗೊಂಡಿರುವ ತನಿಖಾ ಸಹಾಯಕರು ಕರ್ತವ್ಯ ನಿರ್ವಹಿಸುತ್ತಿರುವ ಠಾಣೆಗಳಿಂದ ಬಿಡುಗಡೆಗೊಂಡು ಎಸ್ಐಟಿ ತನಿಖಾ ತಂಡ ಬೆಂಗಳೂರಿನಲ್ಲಿ ವರದಿ ಮಾಡಿಕೊಳ್ಳಲು ಸೂಚಿಲಾಗಿದೆ.

IMG-20260921-WA0003-13-1024x1024 ಧರ್ಮಸ್ಥಳ ಸೌಜನ್ಯ ಪ್ರಕರಣದ ಮರುತನಿಖೆ: ಎಸ್ಐಟಿಗೆ ಮತ್ತೆ 16 ಮಂದಿ ಸಹಾಯಕ ಅಧಿಕಾರಿಗಳ ನೇಮಕ

Post Comment

ಟ್ರೆಂಡಿಂಗ್‌

error: Content is protected !!