ಧರ್ಮಸ್ಥಳ ಪ್ರಕರಣದ ಎಸ್.ಐ.ಟಿ. ತನಿಖಾ ವರದಿ ಮುಚ್ವಿಟ್ಟು ಸರಕಾರ ಪ್ರಭಾವಿ ಅಪರಾಧಿಗಳನ್ನು ರಕ್ಷಿಸುತ್ತಿದೆಯೇ?: ಗಿರೀಶ್ ಮಟ್ಟೆಣವರ್ ಪ್ರಶ್ನೆ!

ಅಕ್ಟೋಬರ್ 10ರಂದು ಬೆಳ್ತಂಗಡಿಯಲ್ಲಿ
ಸೌಜನ್ಯ 14ನೇ ವರ್ಷದ ಸಂಸ್ಮರಣೆ ಪ್ರಯುಕ್ತ
‘ನ್ಯಾಯದ ನಡೆ’ ಮಹೇಶ್ ಶೆಟ್ಟಿ ತಿಮರೋಡಿ
ಬೆಳ್ತಂಗಡಿ : ಎಸ್ ಐಟಿ ತಂಡವು ತನಿಖೆಯ ಯಾವ ಹಂತದಲ್ಲಿಯೂ ಪ್ರಕರಣದ ಸಾಕ್ಷಿಗಳಿಗೆ ಮಾಹಿತಿದಾರರಿಗೆ ಒಡ್ಡದೇ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಹಾಗೂ
ತನಿಖೆ ದಾರಿ ತಪ್ಪಿಸಲು ಸಂಚು ರೂಪಿಸುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಸೌಜನ್ಯ ಹೋರಾಟಗಾರರು, ನ್ಯಾಯವಾದಿಗಳು, ಸಾಕ್ಷಿಗಳು, ಮಾಹಿತಿದಾರರನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳಲ್ಲಿ ಮಾಧ್ಯಮ ವಿಚಾರಣೆ ( MEDIA TRIAL ) ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸೌಜನ್ಯಪರ ಹೋರಾಟಗಾರ ಗಿರೀಶ್ ಮಟ್ಟೆಣವರ್ ಒತ್ತಾಯಿಸಿದರು.
ಅವರು ಉಜಿರೆಯ ತಿಮರೋಡಿ ನಿವಾಸದಲ್ಲಿ ಮಂಗಳವಾರ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ ಈಗಾಗಲೇ ಧರ್ಮಸ್ಥಳ ಪ್ರಕರಣದಲ್ಲಿ ರಚಿಸಲಾದ ಎಸ್ ಐಟಿ ಎನೀಡಿದ ವರದಿ ಹಿನ್ನೆಲೆಯಲ್ಲಿ
ರಾಜ್ಯ ಮಹಿಳಾ ಆಯೋಗವು ಎಸ್ ಐ ಟಿ ತನಿಖೆ ಮುಂದುವರೆಸಿ ಕೊಲೆ ಅಪರಾಧಿಗಳನ್ನು ಪತ್ತೆ ಹಚ್ಚಲು ಕೋರಿದೆ. ಆದರೆ ರಾಜ್ಯ ಸರ್ಕಾರ ಎಸ್ ಐ ಟಿ ವರದಿಯನ್ನು ಬಹಿರಂಗಗೊಳಿಸದೇ ಸಾರ್ವಜನಿಕರಿಂದ ಮುಚ್ಚಿಟ್ಟು ತನಿಖೆ ನಿಲ್ಲಿಸಿದೆ , ಸರ್ಕಾರ ಪ್ರಭಾವಿ ಅಪರಾಧಿಗಳನ್ನು ರಕ್ಷಿಸಲು ಮುಂದಾಗಿದೆಯೇ ?
ಎಂದು ಪ್ರಶ್ನಿಸುತ್ತಾ ಕಳವಳ ವ್ಯಕ್ತಪಡಿಸಿದರು.

ಎಸ್ ಐ ಟಿ ವರದಿಯನ್ನು ಮಾಧ್ಯಮಗಳಿಗೆ ಬಹಿರಂಗಮಾಡಿ ಅಪರಾಧಿಗಳನ್ನು ಪತ್ತೆ ಹಚ್ಚಲು ಆದೇಶ ನೀಡಬೇಕು, ರಾಜ್ಯದ ಹೆಣ್ಣುಮಕ್ಕಳು ಶಾಲಾ ಕಾಲೇಜು ಬಾಲಕ ಬಾಲಕಿಯರ ಸುರಕ್ಷತೆಗಾಗಿ ರಾಜ್ಯ ಸರ್ಕಾರ ” ಸೌಜನ್ಯ ಸಹಾಯವಾಣಿ ” ( HELP LINE ) ತೆರೆದು ಕರ್ನಾಟಕ ಜನತೆಯನ್ನು ಕಾಮುಕ, ಸಮಾಜಘಾತುಕ ವ್ಯಕ್ತಿಗಳಿಂದ ಜನಸಾಮಾನ್ಯರನ್ನು ರಕ್ಷಿಸುವ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು.
ಬರುವ ಅಕ್ಟೋಬರ್ 10,2026ರಂದು ವಿದ್ಯಾರ್ಥಿನಿ ದಾರುಣ ಸಾವು ಕಂಡು 14 ವರ್ಷಗಳು ಗತಿಸಿದ ಹಿನ್ನೆಲೆಯಲ್ಲಿ ನ್ಯಾಯ ಮಾತ್ರ ಮರೀಚಿಕೆಯಾಗಿ ಉಳಿದಿದೆ.
ಆದರೆ 14 ವರ್ಷಗಳ ನಿರಂತರ ಸಂಘರ್ಷದ ಕಾನೂನು ಹೋರಾಟದ ಕಾರಣದಿಂದ ಈ ದೇಶದ ಮಾನ್ಯ ಸರ್ವೋಚ್ಚ ನ್ಯಾಯಾಲಯವು ದಿ. 22-09-2026 ರಂದು ಸೌಜನ್ಯ ತಾಯಿ ಕುಸುಮಾವತಿ ಸಲ್ಲಿಸಿದ SLP ಅರ್ಜಿ ( 5763/26) ಸೌಜನ್ಯ ಭೀಕರ ಕೊಲೆ ಮತ್ತು ಗುಂಪು ಅತ್ಯಾಚಾರ ಪ್ರಕರಣ ( Cr No 250/2012 ಬೆಳ್ತಂಗಡಿ ಠಾಣೆ ) ಹೊಸ SIT ರಚಿಸಿ ಮರುತನಿಖೆಗೆ ರಾಜ್ಯ ಸರ್ಕಾರಕ್ಕೆ ಆದೇಶ ಮಾಡಿದ್ದು ಇದು ಕತ್ತಲೆಯಲ್ಲಿ ಮರೆತು ಹೋದ ಪ್ರಕರಣಕ್ಕೆ ನ್ಯಾಯದ ಹೊಸ ಬೆಳಕು ಚೆಲ್ಲಿದೆ.
ಮುಗಿದು ಹೋದ ಅಧ್ಯಾಯಕ್ಕೆ ಮರುತನಿಖೆಯ ಮರುಜೀವ ತುಂಬಿದೆ, ನ್ಯಾಯದ ಘಂಟೆ ಬಾರಿಸಬೇಕಿದೆ ಎಂದು ಗಿರೀಶ್ ಮಟ್ಟೆಣವರ್ ಪ್ರತಿಪಾದಿಸಿದರು.
ಮಾನ್ಯ ನ್ಯಾಯಾಲಯ 2012ರಲ್ಲಿ ಕರ್ನಾಟಕ ರಾಜ್ಯ ಪೊಲೀಸರು ಮತ್ತು ತದ ನಂತರ ಸಿಬಿಐ ನಡೆಸಿದ ಕಳಪೆ ತನಿಖೆಗೆ ತೀವ್ರ ಚಾಟಿ ಏಟು ಬೀಸಿ ” ನೀವು ಯಾರನ್ನು ರಕ್ಷಣೆ ಮಾಡಲು ತನಿಖೆ ಮಾಡಿರುತ್ತೀರಿ?” ಎಂದು ಪ್ರಶ್ನಿಸಿರುವುದು ಪ್ರಭಾವಿ ಅತ್ಯಾಚಾರಿಗಳನ್ನು ರಕ್ಷಣೆ ಮಾಡುತ್ತಿರುವ ಬಗ್ಗೆ ಕನ್ನಡಿ ಹಿಡಿದಂತಿದೆ.
ನ್ಯಾಯ ಸಿಗುವುದೇ ಇಲ್ಲ ಎನ್ನುವ ಮನಸ್ಥಿತಿ ಇರುವಾಗ ಸುಧೀರ್ಘ 14 ವರ್ಷಗಳ ನಂತರ ಮತ್ತೆ ಮರುತನಿಖೆ ಆದೇಶ ಆಗಿರುವುದು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು ಮತ್ತು ಅಸಹಾಯಕ ಜನಸಾಮಾನ್ಯರಿಗೆ ದೇಶದ ನ್ಯಾಯ ವ್ಯವಸ್ಥೆಯ ಮೇಲೆ ನಂಬಿಕೆ ಮೂಡಿಸುವ ಆಶಾ ಕಿರಣ ಎಂದು ಅವರು ತಿಳಿಸಿದರು.

ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶ ಮತ್ತು ನಿರ್ದೇಶನವನ್ನು ಸ್ವಾಗತಿಸುತ್ತಾ ಸೌಜನ್ಯ ಹೋರಾಟ ಪರ ನಿಂತ ಎಲ್ಲ ನ್ಯಾಯವಾದಿಗಳು ಸಾಮಾಜಿಕ ಜಾಲತಾಣ, ಯೂಟ್ಯೂಬ್ ಮಾಧ್ಯಮಗಳು ಪತ್ರಿಕೆಗಳು, ಮಾಧ್ಯಮ ಮತ್ತು ಮರುತನಿಖೆಗೆ ಪ್ರಾರ್ಥಿಸಿದ ಕೋಟಿ ಕೋಟಿ ಜನಸಾಮಾನ್ಯರನ್ನು ಸೌಜನ್ಯ ಹೋರಾಟದ ವತಿಯಿಂದ ಅಭಿನಂದಿಸುವ ಉದ್ದೇಶದಿಂದ ನ್ಯಾಯದ ನಡಿಗೆ ಆಯೋಜಿಸಿದ್ದೇವೆ ಎಂದು ಗಿರೀಶ್ ಮಟ್ಟೆಣವರ್ ತಿಳಿಸಿದರು.
ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗಿರೀಶ್ ಮಟ್ಟೆಣ್ಣವರ್ ಆರೋಪ ಹೊತ್ತ ಪೊಲೀಸ್ ಅಧಿಕಾರಿಗಳನ್ನು ಎಸ್ ಐ ಟಿಗೆ ನೇಮಕಗೊಳಿಸಿರುವ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ, ಈ ಬಗ್ಗೆ ಸರಕಾರ ಗಮನಹರಿಸಬೇಕು, ಎನ್. ಶಶಿಕುಮಾರ್ ಮೇಲೆ ನನಗೆ ವೈಯಕ್ತಿಕ ದ್ವೇಷವೇನೂ ಇಲ್ಲ, ಆದರೆ ಎನ್. ಶಶಿಕುಮಾರ್
ಅವರ ಮೇಲಿರುವ ಆರೋಪಗಳ ಬಗ್ಗೆ ತನಿಖೆ ನಡೆಸುವುದಕ್ಕೆ ಬೇರೆಯೇ ಎಸ್ ಐ ಟಿ ಬೇಕಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಸೌಜನ್ಯ
ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ
ಕು. ಸೌಜನ್ಯಳ 14ನೇ ವರ್ಷದ ಪುಣ್ಯಸ್ಮರಣೆ ಸಂದರ್ಭದಲ್ಲಿ ಸೌಜನ್ಯ ಪ್ರಕರಣ ತನಿಖೆಗೆ ರಚಿಸಲಾಗಿರುವ ನೂತನ ಎಸ್ ಐ ಟಿ ಮಾನ್ಯ ನ್ಯಾಯಾಲಯ ಚಾಟಿ ಬೀಸಿದಂತೆ ನಿಜವಾದ ಅಪರಾಧಿಗಳನ್ನು ರಕ್ಷಣೆ ಮಾಡದೇ ಪ್ರಾಮಾಣಿಕ ತನಿಖೆ ಮಾಡಿ ಸೌಜನ್ಯಳಿಗೆ ನ್ಯಾಯ ದೊರಕಿಸಿ ದೇಶದ ಸಂವಿಧಾನ, ಕಾನೂನು ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನಸಾಮಾನ್ಯರು ನಂಬಿಕೆ ಇರಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಈ ನಿಟ್ಟಿನಲ್ಲಿ ನ್ಯಾಯದ ನಡೆ ಅಭಿನಂದನಾ ಸಭೆಯಲ್ಲಿ ಎಲ್ಲಾ ಸೌಜನ್ಯ ಹೋರಾಟಗಾರರ, ಸಾರ್ವಜನಿಕರ
ಪ್ರಮುಖ ಆಗ್ರಹಗಳನ್ನು ಸರಕಾರ ಮತ್ತು ಎಸ್ ಐ ಟಿ ಗಮನಕ್ಕೆ ತರಲಿದ್ದೇವೆ ಎಂದು ತಿಳಿಸಿದರು.
ಗಿರೀಶ್ ಮಟ್ಟೆಣವರ್ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಅವರು ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡುವಾಗ ಕುಸುಮಾವತಿ ಚಂದಪ್ಪ ಗೌಡ ಧ್ವನಿಗೂಡಿಸಿದರು.
ಈ ಅಭಿನಂದನಾ ಸಭೆಯ ಯಶಸ್ಸಿಗೆ ಮಾನ್ಯ ಜಿಲ್ಲಾ ಪೊಲೀಸ್ ಜಿಲ್ಲಾಡಳಿತ ಮತ್ತು ಮಾಧ್ಯಮಗಳ ಸಹಕಾರ ಕೋರಿದರು.
ಪತ್ರಿಕಾ ಗೋಷ್ಠಿಯಲ್ಲಿ ಹೋರಾಟಗಾರ ಅನಿಲ್ ಅಂತರ ಪಾಲ್ಗೊಂಡರು.















Post Comment