ಮೈರೋಳ್ತಡ್ಕ ಶಾಲಾ ಅಮೃತ ಮಹೋತ್ಸವ ಸವಿನೆನಪಿನ ನೂತನ‌ ಕಟ್ಟಡ ನಿರ್ಮಾಣ: ಬ್ಯಾಂಕ್ ಖಾತೆಯ ಸ್ಕ್ಯಾನರ್ ಅನಾವರಣ

ಮೈರೋಳ್ತಡ್ಕ ಶಾಲಾ ಅಮೃತ ಮಹೋತ್ಸವ ಸವಿನೆನಪಿನ ನೂತನ‌ ಕಟ್ಟಡ ನಿರ್ಮಾಣ: ಬ್ಯಾಂಕ್ ಖಾತೆಯ ಸ್ಕ್ಯಾನರ್ ಅನಾವರಣ

Share
20261001_110429-1024x576 ಮೈರೋಳ್ತಡ್ಕ ಶಾಲಾ ಅಮೃತ ಮಹೋತ್ಸವ  ಸವಿನೆನಪಿನ ನೂತನ‌ ಕಟ್ಟಡ ನಿರ್ಮಾಣ:  ಬ್ಯಾಂಕ್ ಖಾತೆಯ ಸ್ಕ್ಯಾನರ್ ಅನಾವರಣ

ಬಂದಾರು : ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮೈರೋಳ್ತಡ್ಕ, ಎಸ್.ಡಿ.ಎಂ.ಸಿ. ಅಮೃತ ಮಹೋತ್ಸವ ಸಮಿತಿ ಇವುಗಳ ಸಹಯೋಗದೊಂದಿಗೆ
ಪ್ರಗತಿ ಹಿರಿಯ ವಿದ್ಯಾರ್ಥಿ ಸಂಘ ಮೈರೋಳ್ತಡ್ಕ ವತಿಯಿಂದ ಪದ್ಮುಂಜ ಕೆನರಾ ಬ್ಯಾಂಕ್ ನಲ್ಲಿ ಆರ್ಥಿಕ ವ್ಯವಹಾರ ಮತ್ತು ದೇಣಿಗೆ ಸಂಗ್ರಹದ ಉದ್ದೇಶಕ್ಕಾಗಿ
ತೆರೆಯಲಾದ ಜಂಟಿ ಉಳಿತಾಯ ಖಾತೆಯ ಸ್ಕ್ಯಾನರ್ ನ
ಅನಾವರಣ ಕಾರ್ಯಕ್ರಮವು ಅ:1ನೇ ಗುರುವಾರ ನೆರವೇರಿತು.

ಹಿರಿಯ ದಾನಿಗಳು, ಸಿ.ಎ.ಬ್ಯಾಂಕ್ ನಿವೃತ್ತ ಮೆನೇಜರ್
ರಘುಪತಿ ಭಟ್ ಅನಾಬೆ ಮೈರೋಳ್ತಡ್ಕ ಶಾಲಾ ಪ್ರಗತಿ ಹಿರಿಯ ವಿದ್ಯಾರ್ಥಿ ಸಂಘದ ಜಂಟಿ ಉಳಿತಾಯ ಖಾತೆಯ ಸ್ಕ್ಯಾನರ್ ಬಿಡುಗಡೆಗೊಳಿಸಿದರು.

IMG-20260615-WA0021 ಮೈರೋಳ್ತಡ್ಕ ಶಾಲಾ ಅಮೃತ ಮಹೋತ್ಸವ  ಸವಿನೆನಪಿನ ನೂತನ‌ ಕಟ್ಟಡ ನಿರ್ಮಾಣ:  ಬ್ಯಾಂಕ್ ಖಾತೆಯ ಸ್ಕ್ಯಾನರ್ ಅನಾವರಣ

ಶಿವ ಗೆಳೆಯರ ಬಳಗ – ನವ್ಯಶ್ರೀ ಯುವತಿ ಮಂಡಲದಿಂದ 10,000 ರೂ. ದೇಣಿಗೆ ಹಸ್ತಾಂತರ.

20261001_110936-1024x576 ಮೈರೋಳ್ತಡ್ಕ ಶಾಲಾ ಅಮೃತ ಮಹೋತ್ಸವ  ಸವಿನೆನಪಿನ ನೂತನ‌ ಕಟ್ಟಡ ನಿರ್ಮಾಣ:  ಬ್ಯಾಂಕ್ ಖಾತೆಯ ಸ್ಕ್ಯಾನರ್ ಅನಾವರಣ

ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರಶಾಂತ್ ನಿರುಂಬುಡ
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು. ಈ ಸಂದರ್ಭ
ಅಮೃತ ಮಹೋತ್ಸವ ಸವಿ ನೆನಪಿನ ತರಗತಿ ಕೊಠಡಿ ನಿರ್ಮಾಣದ ಬಾಬ್ತು ಇಲ್ಲಿನ ಶಿವ ಗೆಳೆಯರ ಬಳಗ ಹಾಗೂ
ನವ್ಯಶ್ರೀ ಯುವತಿ ಮಂಡಲದ ವತಿಯಿಂದ ದೇಣಿಗೆಯಾಗಿ
₹10,000/- ಮೊತ್ತದ ಚೆಕ್ ಅನ್ನು ಅಧ್ಯಕ್ಷರಾದ ಜಗದೀಶ್ ಗೌಡ ಕೊಂಬೇಡಿ, ಕಾರ್ಯದರ್ಶಿ ಚೇತನ್ ಕುರಿಯಾಳ ಮತ್ತು ನವ್ಯಶ್ರೀ ಯುವತಿ ಮಂಡಲದ ಸದಸ್ಯರು
ಹಸ್ತಾಂತರಿಸಿದರು.

ಈ ಸಂದರ್ಭ ಚಂದಪ್ಪ ಗೌಡ ನಡುಮಜಲು ಅವರು ದೇಣಿಗೆಯಾಗಿ 5,000 ರೂಪಾಯಿ ನೀಡಿದರು.
ವೇದಿಕೆಯಲ್ಲಿ ಪ್ರಗತಿಪರ ಕೃಷಿಕರಾದ ಧರ್ಣಪ್ಪ ಗೌಡ ಬಾನಡ್ಕ, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷರಾದ
ಕೃಷ್ಣಯ್ಯ ಆಚಾರ್ಯ, ಸಿ.ಎ. ಬ್ಯಾಂಕ್ ಮೆನೇಜರ್ ತಿಮ್ಮಯ್ಯ ಗೌಡ, ಪ್ರಗತಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗುರುಪ್ರಸಾದ್ , ಮುಂಡೂರು ಚಾಮುಂಡೇಶ್ವರಿ‌ ಕ್ಷೇತ್ರದ ಧರ್ಮದರ್ಶಿ ಆನಂದ ಗೌಡ,
ಎಸ್.ಡಿ.ಎಂ.ಸಿ. ಸದಸ್ಯರಾದ ಹರಿಣಾಕ್ಷಿ, ಪ್ರಗತಿ ಹಿರಿಯ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಯಶೋಧಾ, ಶ್ರೀಧರ ಗೌಡ , ಡೊಂಬಯ್ಯ ಗೌಡ, ಮೋಹನ್ ಬಂಗೇರ, ಮುಖ್ಯೋಪಾಧ್ಯಾಯ ಶೀನಪ್ಪ ಗೌಡ ಶಿಕ್ಷಕ ವೃಂದ ಉಪಸ್ಥಿತರಿದ್ದರು.

IMG-20260921-WA0003-1024x1024 ಮೈರೋಳ್ತಡ್ಕ ಶಾಲಾ ಅಮೃತ ಮಹೋತ್ಸವ  ಸವಿನೆನಪಿನ ನೂತನ‌ ಕಟ್ಟಡ ನಿರ್ಮಾಣ:  ಬ್ಯಾಂಕ್ ಖಾತೆಯ ಸ್ಕ್ಯಾನರ್ ಅನಾವರಣ

ಅಮೃತ ಮಹೋತ್ಸವ ಸವಿ ನೆನಪಿನ ತರಗತಿ‌ ಕೊಠಡಿ ನಿರ್ಮಾಣದ ಬಾಬ್ತು ದಾನಿಗಳಿಂದ, ಪ್ರಾಯೋಜಕರಿಂದ, ವಿದ್ಯಾಭಿಮಾನಿಗಳಿಂದ,ಪೋಷಕರಿಂದ ದೇಣಿಗೆ ಸಂಗ್ರಹದ ಉದ್ದೇಶದಿಂದ ಇದೀಗ ಸ್ಥಳೀಯ ಪದ್ಮುಂಜ ಕೆನರಾ ಬ್ಯಾಂಕ್ ನಲ್ಲಿ‌ ಜಂಟಿ ಖಾತೆಯನ್ನು ತೆರೆಯಲಾಗಿದ್ದು ಬಿಡುಗಡೆಗೊಂಡ ಸ್ಕ್ಯಾನರ್ ಅನ್ನು ಆಸಕ್ತ ದಾನಿಗಳು ಪ್ರಾಯೋಜಕರು, ವಿದ್ಯಾಭಿಮಾನಿಗಳು, ಪೋಷಕರು, ಹಿರಿಯ ವಿದ್ಯಾರ್ಥಿಗಳು ಬಳಸಿಕೊಳ್ಳುವಂತೆ ವಿನಂತಿಸಲಾಯಿತು. ಮುಖ್ಯೋಪಾಧ್ಯಾಯ ಶೀನಪ್ಪ ಗೌಡ ಸ್ವಾಗತಿಸಿ ಸಹ ಶಿಕ್ಷಕ ಶ್ರೀಧರ ವಂದಿಸಿದರು.

InShot_20261001_145633580-3-1024x1024 ಮೈರೋಳ್ತಡ್ಕ ಶಾಲಾ ಅಮೃತ ಮಹೋತ್ಸವ  ಸವಿನೆನಪಿನ ನೂತನ‌ ಕಟ್ಟಡ ನಿರ್ಮಾಣ:  ಬ್ಯಾಂಕ್ ಖಾತೆಯ ಸ್ಕ್ಯಾನರ್ ಅನಾವರಣ

Previous post

ಧರ್ಮಸ್ಥಳ ಪ್ರಕರಣದ ಎಸ್.ಐ.ಟಿ. ತನಿಖಾ ವರದಿ ಮುಚ್ವಿಟ್ಟು ಸರಕಾರ ಪ್ರಭಾವಿ ಅಪರಾಧಿಗಳನ್ನು‌ ರಕ್ಷಿಸುತ್ತಿದೆಯೇ?: ಗಿರೀಶ್ ಮಟ್ಟೆಣವರ್ ಪ್ರಶ್ನೆ!

Next post

ಮೈರೋಳ್ತಡ್ಕ ಶಾಲಾ ಅಮೃತ ಮಹೋತ್ಸವ ಕಾರ್ಯಕ್ರಮ : ಬ್ಯಾಂಕ್ ಖಾತೆಯ ಸ್ಕ್ಯಾನರ್ ಅನಾವರಣ

Post Comment

ಟ್ರೆಂಡಿಂಗ್‌

error: Content is protected !!