ದ.ಕ.ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪದಾಧಿಕಾರಿಗಳ ನಿಯೋಗದೊಂದಿಗೆ ಕಂದಾಯ ಸಚಿವರ ಮಹತ್ವದ ಸಭೆ

ದ.ಕ.ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪದಾಧಿಕಾರಿಗಳ ನಿಯೋಗದೊಂದಿಗೆ ಕಂದಾಯ ಸಚಿವರ ಮಹತ್ವದ ಸಭೆ

Share
IMG-20261002-WA0003-1024x797 ದ.ಕ.ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪದಾಧಿಕಾರಿಗಳ ನಿಯೋಗದೊಂದಿಗೆ ಕಂದಾಯ ಸಚಿವರ ಮಹತ್ವದ ಸಭೆ

ಡಿ.ಸಿ. ಮನ್ನಾಭೂಮಿ ಶೀಘ್ರ ಹಂಚಿಕೆಗೆ ಶೀಘ್ರ ಕ್ರಮ: ಕಂದಾಯ ಸಚಿವ ಜಿ.ಪರಮೇಶ್ವರ್ ಭರವಸೆ

ಬೆಂಗಳೂರು : ರಾಜ್ಯ ಸರಕಾರದ ಕಂದಾಯ ಸಚಿವರಾದ ಡಾ .ಜಿ. ಪರಮೇಶ್ವರ್ ಅವರು ಮಂಗಳೂರಿನ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಪದಾದಿಕಾರಿಗಳನ್ನು ಅ:1ನೇ ಗುರುವಾರ ಬೆಂಗಳೂರಿನ
ವಿಧಾನಸೌಧದ ತಮ್ಮ ಕಚೇರಿಗೆ ಆಹ್ವಾನಿಸಿ ಕಂದಾಯ ಇಲಾಖಾ ಹಿರಿಯ ಅಧಿಕಾರಿಗಳೊಂದಿಗೆ ಡಿಸಿ ಮನ್ನಾ ಜಮೀನಿನ ಮಂಜೂರಾತಿ ಬಗೆಗಿನ ಸಾಧಕ -ಬಾಧಕ ಮತ್ತು ಕಾನೂನಾತ್ಮಕ ತೊಡಕುಗಳ ಬಗ್ಗೆ ಸುದೀರ್ಘ ಒಂದೂವರೆ ಗಂಟೆಗಳ ಕಾಲ ಚರ್ಚಿಸಿ, ದ.ಕ. ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಪದಾಧಿಕಾರಿಗಳು ಮುಂದಿಟ್ಟ ಡಿ.ಸಿ.ಮನ್ನಾ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಮಾಹಿತಿಯನ್ನು ಪಡೆದುಕೊಂಡರು.
ಡಿ.ಸಿ. ಮನ್ನಾ ಜಮೀನಿನ ಕಾನೂನು ತೊಡಕುಗಳನ್ನು ಬಗೆಹರಿಸಿಕೊಂಡು ಭೂ ಮಂಜೂರಾತಿಗೆ ವಿಶೇಷ ಕಾನೂನು ರೂಪಿಸಲು ಮುಂದಿನ ಸಚಿವ ಸಂಪುಟದ ಸಭೆಗೆ ಮುಂಚಿತವಾಗಿ ಅಗತ್ಯ ದಾಖಲೆ ಸಿದ್ಧಪಡಿಸುವಂತೆ
ಕಂದಾಯ ಸಚಿವ ಜಿ.ಪರಮೇಶ್ವರ್ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಡಿ.ಸಿ. ಮನ್ನಾ ಜಮೀನಿನ ಭೂಮಂಜೂರಾತಿ ಬಗ್ಗೆ ಸೂಕ್ತ ಕಾನೂನು ರೂಪಿಸುತ್ತೇವೆ, ಮತ್ತು ದ.ಕ. ಜಿಲ್ಲೆಯ ದಲಿತ ನಾಯಕರ ಕಾರ್ಯಕರ್ತರ ಹೋರಾಟಗಾರರ ಬೇಡಿಕೆಯಂತೆ ನಾನೇ ಮಂಗಳೂರಿನ ಬಂದು ಭೂರಹಿತ ಪರಿಶಿಷ್ಟ ಸಮುದಾಯದವರಿಗೆ ಹಕ್ಕುಪತ್ರ ವಿತರಿಸುವುದಾಗಿ ಭರವಸೆ ನೀಡಿದರು.

IMG-20260615-WA0021-2 ದ.ಕ.ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪದಾಧಿಕಾರಿಗಳ ನಿಯೋಗದೊಂದಿಗೆ ಕಂದಾಯ ಸಚಿವರ ಮಹತ್ವದ ಸಭೆ

ಕಂದಾಯ ಸಚಿವರ ಭೇಟಿ ನಿಯೋಗದಲ್ಲಿ ದ.ಕ. ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಪದಾಧಿಕಾರಿಗಳಾದ ರಘು ಎಕ್ಕಾರ್ , ಬಿ.ಕೆ.ವಸಂತ್ ಬೆಳ್ತಂಗಡಿ, ಕೃಷ್ಣಾನಂದ ಡಿ ಮಂಗಳೂರು , ಪ್ರೇಮನಾಥ್ ಬಲ್ಲಾಳ್ ಬಾಗ್, ಅಶೋಕ್ ಕೊಂಚಾಡಿ , ವೆಂಕಣ್ಣ ಕೊಯ್ಯೂರು , ಆನಂದ ಬೆಳ್ಳಾರೆ , ಹರಿಯಪ್ಪ ಮುತ್ತೂರು ,
ಜಗದೀಶ್ ಪಾಂಡೇಶ್ವರ್ , ರಮೇಶ್ ಆರ್ ಬೆಳ್ತಂಗಡಿ ,
ಎಸ್. ಪ್ರಭಾಕರ್ ಶಾಂತಿಕೋಡಿ , ಶ್ರೀಧರ ಎಸ್ ಕಳೆಂಜ,
ನಾರಾಯಣ ಪುದುವೆಟ್ಟು , ಸದಾಶಿವ ಪಡುಬಿದ್ರೆ ,
ಸರೋಜಿನಿ ಬಂಟ್ವಾಳ , ಯಶೋಧಾ ಡಿ ಮಂಗಳೂರು, ಮುಂತಾದವರು ಉಪಸ್ಥಿತರಿದ್ದರು.

IMG-20260921-WA0003-1-1024x1024 ದ.ಕ.ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪದಾಧಿಕಾರಿಗಳ ನಿಯೋಗದೊಂದಿಗೆ ಕಂದಾಯ ಸಚಿವರ ಮಹತ್ವದ ಸಭೆ

Post Comment

ಟ್ರೆಂಡಿಂಗ್‌

error: Content is protected !!