ಕುಂಟಾಲಪಲ್ಕೆ; ಗಾಂಧಿಜಯಂತಿ ಆಚರಣೆ; ಬೀಳ್ಕೊಡುಗೆ ಕಾರ್ಯಕ್ರಮ

ಕುಂಟಾಲಪಲ್ಕೆ; ಗಾಂಧಿಜಯಂತಿ ಆಚರಣೆ; ಬೀಳ್ಕೊಡುಗೆ ಕಾರ್ಯಕ್ರಮ

Share
IMG-20261002-WA0027-1024x405 ಕುಂಟಾಲಪಲ್ಕೆ; ಗಾಂಧಿಜಯಂತಿ ಆಚರಣೆ; ಬೀಳ್ಕೊಡುಗೆ ಕಾರ್ಯಕ್ರಮ

ಬಂದಾರು : ಇಲ್ಲಿನ ಕುಂಟಾಲಪಲ್ಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು.
ಇದೇ ಸಂದರ್ಭ ಶಾಲೆಯಲ್ಲಿ 24 ವರ್ಷಗಳ ಸುದೀರ್ಘ ಕಾಲ ಅಡುಗೆ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನಕ್ಕೆ ಕಾಲಿಟ್ಟ ಯಮುನಾ ಕುಕ್ಕಿಲ ಅವರಿಗೆ ಶಾಲೆಯ ವತಿಯಿಂದ ಆತ್ಮೀಯ ಬೀಳ್ಕೊಡುಗೆ ಸಮಾರಂಭ ಆಯೋಜಿಸಿ ಸನ್ಮಾನಿಸಿ ಶುಭ ಹಾರೈಸಲಾಯಿತು.
ಕಾರ್ಯಕ್ರಮದಲ್ಲಿ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷರಾದ ಮೋನಪ್ಪ ಗೌಡ ನೆಲ್ಲಿಗೇರು , ಎಸ್ ಡಿ ಎಂ ಸಿ ಅಧ್ಯಕ್ಷರಾದ ಬಾಲಕೃಷ್ಣಗೌಡ ನೆಲ್ಲಿಗೇರು, ಉಪಾಧ್ಯಕ್ಷರಾದ ಲಲಿತಾ ಬದ್ಯಾರು, ಮಾಜಿ ಅಧ್ಯಕ್ಷರಾದ ರಾಮಣ್ಣಗೌಡ ನೆಲ್ಲಿಗೇರು,
ಹಿರಿಯರಾದ ಲಿಂಗಪ್ಪಗೌಡ ಕುಂಟಾಲಪಲ್ಕೆ , ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ಗೌಡ ಕೋಡ್ಯೇಲು, ಎಸ್ ಡಿಎಂ ಸಿ ಮಾಜಿ ಸದಸ್ಯರಾದ ಶ್ರೀನಿವಾಸಗೌಡ ಕುಂಟಾಲಪಲ್ಕೆ, ಮುಖ್ಯ ಶಿಕ್ಷಕಿ ಗಾಯತ್ರಿ ಜಯಪ್ರಕಾಶ್ ಮತ್ತು ಸಹಶಿಕ್ಷಕಿಯರು ಉಪಸ್ಥಿತರಿದ್ದರು.
ಈ ಸಂದರ್ಭ ಎಸ್ ಡಿ ಎಂ ಸಿ ಸದಸ್ಯರು, ಶಿಕ್ಷಕ ವೃಂದ,
ಪೋಷಕರು, ಹಿರಿಯ ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡರು.

IMG-20260615-WA0021-3 ಕುಂಟಾಲಪಲ್ಕೆ; ಗಾಂಧಿಜಯಂತಿ ಆಚರಣೆ; ಬೀಳ್ಕೊಡುಗೆ ಕಾರ್ಯಕ್ರಮ
IMG-20260921-WA0003-2-1024x1024 ಕುಂಟಾಲಪಲ್ಕೆ; ಗಾಂಧಿಜಯಂತಿ ಆಚರಣೆ; ಬೀಳ್ಕೊಡುಗೆ ಕಾರ್ಯಕ್ರಮ

Post Comment

ಟ್ರೆಂಡಿಂಗ್‌

error: Content is protected !!