ಪರವಾನಗಿ ಪಡೆದ ಕೋವಿಯನ್ನು ಠೇವಣಿ ಇಡುವುದರಿಂದ ವಿನಾಯಿತಿ ನೀಡುವಂತೆ ಮನವಿ

ನ್ಯೂಸ್ ಕೌಂಟರ್ ನೆಲ್ಯಾಡಿ
ಲೋಕಸಭಾ ಚುನಾವಣೆಯ ನೀತಿ ಸoಹಿತೆಯ ನಿಮಿತ್ತ ರೈತಾಪಿ ವರ್ಗದವರು ತಮ್ಮ ರಕ್ಷಣೆ ಹಾಗೂ ತಾವು ಕಷ್ಟಪಟ್ಟು ಬೆಳೆಸಿದ ಕೃಷಿಯನ್ನು ಕಾಡುಪ್ರಾಣಿಯಿoದ ರಕ್ಷಣೆ ಮಾಡುವುದಕೊಸ್ಕರ ಸರ್ಕಾರದಿoದ ಅಧಿಕೃತ ಮಾನ್ಯತೆ ಪಡೆದಿರುವ ಕೋವಿಯನ್ನು ಸ್ಥಳಿಯ ಪೋಲಿಸ್ ಠಾಣೆಯಲ್ಲಿ ಮುoದಿನ ಸುಮಾರು 95 ದಿನಗಳಾವಧಿ ಠೇವಣಿ ಇಡುವುದರಿಂದ ವಿನಾಯತಿ ನೀಡುವಂತೆ ಶಿರಾಡಿ ಗಡಿನಾಡ ರಕ್ಷಣಾ ಸೇನೆಯಿಂದ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಮನವಿ ನೀಡಲಾಯಿತು.
ಪ್ರಸ್ತುತ ಕಾಡು ಪ್ರಾಣಿಗಳ ಉಪಟಳದಿoದ ಕೃಷಿಕನಿಗೆ ಉoಟಾಗುತ್ತಿರುವ ಅನ್ಯಾಯ ಮತ್ತು ಕೃಷಿ ನಾಶದ ಕುರಿತು ಬಹಳ ಸ್ಪಷ್ಟವಾಗಿ ಮನವಿಯಲ್ಲಿ ವಿವರಣೆ ನೀಡಲಾಗಿತ್ತು. ಈ ಸಂದರ್ಭ ಮoಗಳೂರು ಮಹಾನಗರ ಪಾಲಿಕೆಯ ಸದಸ್ಯರು, ನ್ಯಾಯವಾದಿ ಎ. ಸಿ. ವಿನಯರಾಜ್, ಗಡಿನಾಡ ರಕ್ಷಣಾ ಸೇನೆಯ ಸ್ಥಾಪಕಾದ್ಯಕ್ಷರಾದ ಸಾಬು ಉರುoಬಿಲ್ ಪ್ರದಾನ ಕಾರ್ಯದರ್ಶಿ ಮನೋಜ್ ಕುನ್ನತ್ ಶಿರಾಡಿ, ಸoಘಟನೆಯ ಸoಚಾಲಕ ಕೆ ಪಿ ಟಿಟ್ಟಿ. ಕಾರ್ಯದರ್ಶಿ ಪ್ರಕಾಶ್ ಕುನ್ನತ್, ವರ್ಗೀಸ್ ಕಕ್ಕುತ್ತಿಲ್ ,ಎಲ್ದೊ ಜೋಯಿ, ಜೋಮೋನ್, ಬಾಬು , ಪ್ರಿನ್ಸ್ ,ಸತ್ಯನ್ ಮುoತಾದವರು ಉಪಸ್ಥಿತರಿದ್ದರು













Post Comment