ಗುರುವಾಯನಕೆರೆ; ನೋಟಿಸ್ ಮೇಲೆ ನೋಟಿಸ್ ಕೊಟ್ಟರೂ ಸ್ಥಗಿತಗೊಳ್ಳದ ಅನಧಿಕೃತ ಕಟ್ಟಡ ಕಾಮಗಾರಿ!

ಗುರುವಾಯನಕೆರೆ; ನೋಟಿಸ್ ಮೇಲೆ ನೋಟಿಸ್ ಕೊಟ್ಟರೂ ಸ್ಥಗಿತಗೊಳ್ಳದ ಅನಧಿಕೃತ ಕಟ್ಟಡ ಕಾಮಗಾರಿ!

Share
IMG-20261013-WA0003-1024x1024 ಗುರುವಾಯನಕೆರೆ; ನೋಟಿಸ್ ಮೇಲೆ ನೋಟಿಸ್ ಕೊಟ್ಟರೂ ಸ್ಥಗಿತಗೊಳ್ಳದ ಅನಧಿಕೃತ ಕಟ್ಟಡ ಕಾಮಗಾರಿ!

ಬೆಳ್ತಂಗಡಿ : ಭೂಪರಿವರ್ತಿತವಲ್ಲದ ಮತ್ತು ಖಾಸಗಿ ಜಮೀನಿನಲ್ಲಿ ವ್ಯಕ್ತಿಯೋರ್ವರು ಸ್ಥಳೀಯ ಗ್ರಾಮಪಂಚಾಯತ್ ನಿಂದ ಹೊಸ ಕಟ್ಟಡ ರಚನೆಗಾಗಲಿ ಅಥವಾ ಕಟ್ಟಡ ದುರಸ್ತಿಗಾಗಲಿ ಯಾವುದೇ ಅನುಮತಿಯನ್ನು ಪಡೆಯದೆ ಅನಧಿಕೃತವಾಗಿ ಕಟ್ಟಡ ನಿರ್ಮಿಸುತ್ತಿರುವ ಪ್ರಕರಣವೊಂದು ಕುವೆಟ್ಟು ಗ್ರಾಮದಲ್ಲಿ ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಅನಧಿಕೃತ ಕಟ್ಟಡ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಕುವೆಟ್ಟು ಗ್ರಾ.ಪಂ. ಆಡಳಿತವು ಕೆಲವು ಸಮಯಗಳ ಹಿಂದೆ ಒಂದನೇ ಮತ್ತು ಎರಡನೇ ಮತ್ತು ಮೂರನೇ ನೋಟೀಸ್ ಗಳನ್ನು‌ ನೀಡಿದ್ದು ಇದೀಗ ನಾಲ್ಕನೇ ನೋಟೀಸ್ ಅನಧಿಕೃತ ಕಟ್ಟಡದ ಗೋಡೆಗೆ ಅಂಟಿಸಿ ಕಾಮಗಾರಿ ಮುಂದುವರಿಸದಂತೆ ಸೂಚನೆ ನೀಡಿದ್ದು ಕೆಲಸ ಮುಂದುವರಿಸಿದಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಸ.ನಂ.21/4, 25/12 ಹಾಗೂ 17/12ರಲ್ಲಿ ವಿವಾದದಲ್ಲಿರುವ ಖಾಸಗಿ ಜಮೀನಿನಲ್ಲಿ ಗುರುವಾಯನಕೆರೆ ನಿವಾಸಿ ಗಾಡ್ ಫ್ರೀ ಡಿಕುನ್ಹ ಎಂಬವರು ಗ್ರಾಮಪಂಚಾಯತ್ ನಿಂದ ಯಾವುದೇ ಅನುಮತಿಯನ್ನು ಪಡೆಯದೆ ಅನಧಿಕೃತ ಕಟ್ಟಡವನ್ನು ನಿರ್ಮಿಸುತ್ತಿರುವ ಬಗ್ಗೆ ವ್ಯಕ್ತಿಯೊಬ್ಬರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕುವೆಟ್ಟು ಗ್ರಾ.ಪಂ. ಆಡಳಿತವು ಯಾವುದೇ ಅನಧಿಕೃತ ಕಟ್ಟಡದ ರಚನೆಯಾಗಲಿ, ದುರಸ್ತಿಯಾಗಲಿ ಮಾಡಬಾರದೆಂದು ನಾಲ್ಕನೇ ಎಚ್ಚರಿಕೆ ನೋಟೀಸ್ ಅನಧಿಕೃತ ಕಟ್ಟಡದ ಗೋಡೆಗೆ ಅಂಟಿಸಿ ಕಟ್ಟಡದ
ಸುತ್ತ ರೆಡ್ ಟೇಪ್ ಅಂಟಿಸಿದೆ.

IMG-20260615-WA0021-9 ಗುರುವಾಯನಕೆರೆ; ನೋಟಿಸ್ ಮೇಲೆ ನೋಟಿಸ್ ಕೊಟ್ಟರೂ ಸ್ಥಗಿತಗೊಳ್ಳದ ಅನಧಿಕೃತ ಕಟ್ಟಡ ಕಾಮಗಾರಿ!


ಆದರೆ ಅನಧಿಕೃತ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸುವಂತೆ ನೋಟೀಸ್ ಮೇಲೆ ನೋಟೀಸ್ ನೀಡಲಾಗಿದ್ದರೂ ಕಟ್ಟಡದ ಸುತ್ತ ರೆಡ್ ಟೇಪ್ ಹಾಕಿದ್ದರೂ
ಕಾನೂನುಗಳನ್ನು ಕಡೆಗಣಿಸಿ ತಾಲೂಕು‌ ಮಟ್ಟದ ಭ್ರಷ್ಟ ಅಧಿಕಾರಿಗಳ ಬೆಂಗಾವಲಲ್ಲಿ ನಿರ್ಮಾಣ ಕಾಮಗಾರಿ ದಿನೇ ದಿನೇ ಮುಂದುವರಿಯುತ್ತಿದ್ದು ತಾ.ಪಂ.ಅಧಿಕಾರಿಗಳ ಮೃದು ಧೋರಣೆಯ ಬಗ್ಗೆ ಸಂಶಯ ಮೂಡಿದೆ.
ಸ್ಥಳೀಯ ಗ್ರಾ.ಪಂ. ವ್ಯಾಪ್ತಿಯಲ್ಲಿ ಅನಧಿಕೃತ ಹಾಗೂ ನಿಯಮ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ವಸತಿ, ವಾಣಿಜ್ಯ, ಮತ್ತಿತರ ಕಟ್ಟಡ ಕಾಮಗಾರಿಗಳನ್ನು ನಿರ್ಬಂಧಿಸುವುದು ಹಾಗೂ ನಿರ್ಮಿಸಿರುವ ಕಟ್ಟಡಗಳನ್ನು ನೆಲಸಮಗೊಳಿಸುವ (ಕರ್ನಾಟಕ ಪಂಚಾಯತ್ ರಾಜ್) ಒತ್ತುವರಿಗಳನ್ನು ತೆರವುಗೊಳಿಸುವ ನಿಯಮಗಳಲ್ಲಿ (2011ರ ಪ್ರಕಾರ) ಅವಕಾಶವಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇಂಥ ಕಾನೂನು ಕ್ರಮಕೈಗೊಳ್ಳಲು ಮುಂದಾಗದೆ ಕಾಲಹರಣ ಮಾಡುತ್ತಿರುವುದು ಅಥವಾ ನಿರ್ಲಕ್ಷ್ಯವಹಿಸುತ್ತಿರುವುದು ಅಕ್ರಮ ಕಟ್ಟಡ ಕಾಮಗಾರಿ ನಿರಾತಂಕವಾಗಿ ಮುಂದುವರಿಯಲು ಅವಕಾಶ ಕೊಟ್ಟಂತಾಗಿದೆ.

IMG-20260921-WA0003-8-1024x1024 ಗುರುವಾಯನಕೆರೆ; ನೋಟಿಸ್ ಮೇಲೆ ನೋಟಿಸ್ ಕೊಟ್ಟರೂ ಸ್ಥಗಿತಗೊಳ್ಳದ ಅನಧಿಕೃತ ಕಟ್ಟಡ ಕಾಮಗಾರಿ!

ಗುರುವಾಯನಕೆರೆ ಬಸ್ ನಿಲ್ದಾಣದ ಆಸುಪಾಸು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಒಂದು ಸರಕಾರಿ ಸರ್ವೆ ನಡೆಸಿದರೆ ಸಾಲು ಸಾಲು ಅನಧಿಕೃತ ಕಟ್ಟಡಗಳು ಪತ್ತೆಯಾಗಬಹುದು, ಆದರೆ ಗ್ರಾ.ಪಂ. ಆಡಳಿತಕ್ಕಾಗಲಿ ತಾ.ಪಂ. ಗೂಕಾರ್ಯನಿರ್ವಹಣಾಧಿಕಾರಿಗಾಗಲಿ ಗಮ
ಎಂಬುದು ಮಾತ್ರ ನಿಗೂಢ‍‌‍!

Post Comment

ಟ್ರೆಂಡಿಂಗ್‌

error: Content is protected !!