ಸೌಜನ್ಯ ಪ್ರಕರಣದ ಅಂದಿನ ತನಿಖಾಧಿಕಾರಿ ಯೋಗೀಶ್ ನನ್ನು ನೇತು ಹಾಕಿದ್ರೆ ಸತ್ಯ ಹೊರಬರುತ್ತದೆ: ಮಹೇಶ್ ಶೆಟ್ಟಿ ತಿಮರೋಡಿ

ಸೌಜನ್ಯ ಪ್ರಕರಣದ ಅಂದಿನ ತನಿಖಾಧಿಕಾರಿ ಯೋಗೀಶ್ ನನ್ನು ನೇತು ಹಾಕಿದ್ರೆ ಸತ್ಯ ಹೊರಬರುತ್ತದೆ: ಮಹೇಶ್ ಶೆಟ್ಟಿ ತಿಮರೋಡಿ

Share
IMG-20261011-WA0001-1022x1024 ಸೌಜನ್ಯ ಪ್ರಕರಣದ ಅಂದಿನ ತನಿಖಾಧಿಕಾರಿ ಯೋಗೀಶ್ ನನ್ನು       ನೇತು ಹಾಕಿದ್ರೆ ಸತ್ಯ ಹೊರಬರುತ್ತದೆ:      ಮಹೇಶ್ ಶೆಟ್ಟಿ ತಿಮರೋಡಿ

ಬೆಳ್ತಂಗಡಿ : ನೇತ್ರಾವತಿ ಸ್ನಾನಘಟ್ಟದ ಪರಿಸರದಿಂದ ಎರಡು ವೀಡಿಯೋಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಅಂದಿನ ಎಸ್.ಪಿ. ಅಭಿಷೇಕ್ ಗೋಯೆಲ್‌ ವಿದ್ಯಾರ್ಥಿಗಳ ಕಾರ್ಯಕ್ರಮವೊಂದರಲ್ಲಿ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಆದರೆ ಆ ಎರಡು ಸಿಸಿ ಟಿವಿ ಫೂಟೇಜ್ ಇಂದಿನವರೆಗೂ ತನಿಖೆಯಾಗಿಲ್ಲ ..” ಎಂದು ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
ಅವರು ಧರ್ಮಸ್ಥಳ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಭರ್ತಿ 14 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ 14ನೇ ವರ್ಷದ ಸಂಸ್ಮರಣೆಯ ಪ್ರಯುಕ್ತ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ, ಪ್ರಜಾಪ್ರಭುತ್ವ ವೇದಿಕೆಯ ನೇತೃತ್ವದಲ್ಲಿ ಬೆಳ್ತಂಗಡಿಯಲ್ಲಿ‌ ಶನಿವಾರ ನಡೆದ ‘ನ್ಯಾಯದ ನಡಿಗೆ’ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ
ಅಂದು ವಶಪಡಿಸಿಕೊಳ್ಳಲಾದ ಆ ವೀಡಿಯೋ ಎಲ್ಲಿವೆ?
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿದೆಯಾ ಎಸ್.ಪಿ. ಕಚೇರಿಯಲ್ಲಿದೆಯಾ? ಕೋರ್ಟಲ್ಲಿದೆಯಾ? ಎಂದು ಪ್ರಶ್ನಿಸಿದರು. ಆ ವೀಡಿಯೋ ಇಲ್ಲಿಯ ತನಕ ತನಿಖೆಗೆ ಬಂದಿಲ್ಲ, ಸೌಜನ್ಯ ಪ್ರಕರಣದ ಎಸ್ ಐ ಟಿ ಅಂದಿನ ಆ ವೀಡಿಯೋಗಳನ್ನು ಮೊದಲು ವಶಕ್ಕೆ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಮುಖ್ಯಮಂತ್ರಿ ಡಿಕೆಶಿಯವರೇ ಧರ್ಮಸ್ಥಳದಲ್ಲಿ ಸೌಜನ್ಯ ಒಂದು ಮಗುವಲ್ಲ, ಸಾವಿರಾರು ಹೆಣ್ಣು ಮಕ್ಕಳ ಮಾರಣ ಹೋಮ ನಡೆದಿದೆ ಇದು ನಿಮಗೂ ಎಚ್ಚರವಿರಲಿ ಎಂದು ಮಹೇಶ್ ಶೆಟ್ಟಿ ತಿಮರೋಡಿ ಸಲಹೆ ನೀಡಿದರು.

ಧರ್ಮಸ್ಥಳ ಗ್ರಾಮದಲ್ಲಿ‌ ನಡೆದ ಅತ್ಯಾಚಾರ ಕೊಲೆ ಮಾಡಿದ ದುಷ್ಟರ ಜೊತೆ ಸೇರಿಕೊಂಡು ಎಲ್ಲಾ ಪ್ರಕರಣಗಳನ್ನು ನಾಶ ಮಾಡಲಾಗಿದೆ. ಸೌಜನ್ಯ ಅಪಹರಣವಾದ ದಿನದಿಂದ ಇಂದಿನವರೆಗೆ ಎಲ್ಲಾ ದಾಖಲೆಗಳನ್ನು ನಾಶ ಮಾಡಿದ ಪೊಲೀಸ್ ಇಲಾಖೆಗೆ ಸಿಬಿಐ, ಸಿಒಡಿ ಅಧಿಕಾರಿಗಳಿಗೆ ನಮ್ಮ ಧಿಕ್ಕಾರ ಎಂದರು.
ನಾವು ಇಲ್ಲಿ ಭಿಕ್ಕೆ ಬೇಡುವುದಕ್ಕೆ ಬಂದಿಲ್ಲ, ಸತ್ಯ,ಧರ್ಮ, ನ್ಯಾಯಕ್ಕಾಗಿ ಪ್ರಶ್ನೆ ಎತ್ತಲು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದೇವೆ. ಪೊಲೀಸ್ ಇಲಾಖೆ, ಸಿಬಿಐ, ಸಿಒಡಿ ಅಧಿಕಾರಿಗಳು, ರಾಜಕೀಯ ಪಕ್ಷದ ನಾಯಕರುಗಳು ಮಾಡಿದ ತಪ್ಪುಗಳನ್ನು ಪ್ರಶ್ನಿಸಲು ಬಂದಿದ್ದೇವೆ
ಎಂದು ಸ್ಪಷ್ಟಪಡಿಸಿದರು.

ಅತ್ಯಾಚಾರ, ಕೊಲೆ ಪ್ರಕರಣಗಳ‌ ಸಾಕ್ಷ್ಯಗಳನ್ನು ನಾಶ ಮಾಡಿದ ಪೊಲೀಸರಿಗೆ, ಸಿಬಿಐ, ಸಿಒಡಿ ಮತ್ತು ರಾಜಕೀಯ ಪಕ್ಷಗಳ ನಾಯಕರಿಗೆ ನಮ್ಮ‌ ಧಿಕ್ಕಾರ ಎಂದು ಮಹೇಶ್ ಶೆಟ್ಟಿ ತಿಮರೋಡಿ ಗುಡುಗಿದರು.

IMG-20260615-WA0021-8 ಸೌಜನ್ಯ ಪ್ರಕರಣದ ಅಂದಿನ ತನಿಖಾಧಿಕಾರಿ ಯೋಗೀಶ್ ನನ್ನು       ನೇತು ಹಾಕಿದ್ರೆ ಸತ್ಯ ಹೊರಬರುತ್ತದೆ:      ಮಹೇಶ್ ಶೆಟ್ಟಿ ತಿಮರೋಡಿ

“ಎಸ್ ಐ ಟಿ ಮರುತನಿಖೆಯಿಂದ ನ್ಯಾಯ ಕೊಡಿಸಲೇ ಬೇಕು”

ಈ ಸಂದರ್ಭ ಮಾತನಾಡಿದ ಸೌಜನ್ಯ ತಾಯಿ ಕುಸುಮಾವತಿ ಚಂದಪ್ಪ ಗೌಡ “ಸೌಜನ್ಯ ಪ್ರಕರಣವನ್ನು
ಮರುತನಿಖೆ ಮಾಡಲು ಆದೇಶ ನೀಡಿದ ಮಾನ್ಯ ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ಅಭಿನಂದನೆಗಳು,
ನನಗೆ ನ್ಯಾಯ ಸಿಗಲೇ ಬೇಕು, ಪೊಲೀಸರು ಸಾಕ್ಷ್ಯ ನಾಶ ಮಾಡಿದ ಕಾರಣ ಹದಿನಾಲ್ಕು ವರ್ಷಗಳಿಂದ ನ್ಯಾಯ ಸಿಗಲಿಲ್ಲ, ನ್ಯಾಯ ಸಿಗದೆ ನಾನು ಹೋರಾಟ ನಿಲ್ಲಿಸುವುದಿಲ್ಲ ಎಂದು ಶಪಥ ಮಾಡುತ್ತಿದ್ದೇನೆ.
ಇವತ್ತು ಮತ್ತೊಮ್ಮೆ ನಾನು‌ ಎಸ್ ಐ ಟಿ ಅಧಿಕಾರಿಗಳಲ್ಲಿ ಸೆರಗೊಡ್ಡಿ ಕೇಳಿಕೊಳ್ಳುತ್ತಿದ್ದೇನೆ ನನಗೆ ಮರುತನಿಖೆ ನಡೆಸಿ ನ್ಯಾಯ ಕೊಡಿಸಲೇಬೇಕು ಎಂದು ಗದ್ಗದಿತರಾಗಿ ಒತ್ತಾಯಿಸಿದರು.

ಸೌಜನ್ಯ ಹೆತ್ತವರೊಂದಿಗೆ ಬೆಂಬಲವಾಗಿ ನಿಂತು ವಿವಿಧ ಹಂತದ ನ್ಯಾಯಾಲಯಗಳಲ್ಲಿ ಹೋರಾಟದುದ್ದಕ್ಕೂ ಸೌಜನ್ಯ ಕುಟುಂಬದ ಪರವಾಗಿ ನಿಂತು ಉಚಿತವಾಗಿ ವಾದಮಂಡಿಸಿದ ನ್ಯಾಯವಾದಿಗಳಿಗೆ, ಹೋರಾಟವನ್ನು ಜೀವಂತವಾಗಿರಿಸಿದ ಮಾಧ್ಯಮಗಳಿಗೆ, ಇದೀಗ ತನಿಖೆ ಕೈಗೆತ್ತಿಕೊಂಡಿರುವ ಎಸ್ ಐ ಟಿಯ ದಕ್ಷ ಪೊಲೀಸ್ ಅಧಿಕಾರಿಗಳಿಗೆ, ಹೋರಾಟಗಾರರಿಗೆ ಅಭಿನಂದನಾ ಸಭೆ ಇದಾಗಿತ್ತು.

ವೇದಿಕೆಯಲ್ಲಿ ಗಿರೀಶ್ ಮಟ್ಟಣವರ್ , ತಮ್ಮಣ್ಣ ಶೆಟ್ಟಿ,
ಪ್ರಸನ್ನ ರವಿ, ಜಯಂತ್ ಟಿ, ದಿನೇಶ್ ಗಾಣಿಗ, ಅಹೋರಾತ್ರ, ಹೈಕೋರ್ಟ್ ನ್ಯಾಯವಾದಿಗಳಾದ ಮೋಹಿತ್ ಕುಮರ್ , ವಿಜಯ ವಾಸು ಪೂಜಾರಿ,
ನವೀನ್ ಕುಮಾರ್, ಕೃಷ್ಣಪ್ಪ ಗೌಡ ದೇವಸ್ಯ, ಅನಿಲ್ ಅಂತರ ಮುಂತಾದವರು ಉಪಸ್ಥಿತರಿದ್ದರು.
ನ್ಯಾಯ ನಡಿಗೆ ಮೌನ ಮೆರವಣಿಗೆಯು ಮಹೇಶ್ ಶೆಟ್ಟಿ ತಿಮರೋಡಿ ಅವರ ನೇತೃತ್ವದಲ್ಲಿ ಸೌಜನ್ಯಳ ಬೃಹತ್ ಫೊಟೊದೊಂದಿಗೆ ಕುಂಜರ್ಪದಿಂದ ಹೊರಟು ಉಜಿರೆ ಮೂಲಕ ಬೆಳ್ತಂಗಡಿ ಕೋರ್ಟ್ ರಸ್ತೆಯಲ್ಲಿ ಅಂಬೇಡ್ಕರ್ ಭವನಕ್ಕೆ‌ ಮೀಸಲಿಟ್ಟ ಮೈದಾನದಲ್ಲಿ ಸಮಾವೇಶಗೊಂಡಿತು. ನ್ಯಾಯದ ನಡೆ’ ಮತ್ತು ಗೌರವದ ಅಭಿನಂದನಾ ಸಭೆಯಲ್ಲಿ ಸಾವಿರಾರು ಸೌಜನ್ಯಪರ ಹೋರಾಟಗಾರರು ಭಾಗವಹಿಸಿದರು.

ಸೌಜನ್ಯ ಪ್ರಕರಣದ ಅಂದಿನ ತನಿಖಾಧಿಕಾರಿ ಯೋಗೀಶ್ ನನ್ನು ನೇತು ಹಾಕಿ ಬಾಯಿ ಬಿಡಿಸಿದರೆ ಸತ್ಯ ಹೊರಬರುತ್ತದೆ ಎಂದು ತಿಮರೋಡಿ ಮತ್ತೊಮ್ಮೆ ಹೇಳಿದ್ದಾರೆ.

ಬುರುಡೆ ಪ್ರಕರಣದ ಎಸ್‌ಐಟಿ ತನಿಖೆಯ ಸಂದರ್ಭದಲ್ಲಿ ಚಿನ್ನಯ್ಯನನ್ನು ಹೆದರಿಸಿ ಬೆದರಿಸಿ, ತಮ್ಮ ಹೋರಾಟಕ್ಕೆ ಷಡ್ಯಂತ್ರದ ಹಣೆಪಟ್ಟಿ ಕಟ್ಟಿದರು ಎಂದು ಆರೋಪಿಸಿದ
ಮಹೇಶ್ ಶೆಟ್ಟಿ ತಿಮರೋಡಿ ತಮ್ಮನ್ನು ಗಡಿಪಾರು ಮಾಡಲು ಷಡ್ಯಂತ್ರ ರೂಪಿಸಿದವರಿಗೆ ಅಣ್ಣಪ್ಪ, ಮಂಜುನಾಥ ತಕ್ಕ ಶಿಕ್ಷೆ ಕೊಡುತ್ತಾರೆ, ಸತ್ಯ, ಧರ್ಮ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟವನ್ನು ತಡೆಯಲು ಇಂಥ ಷಡ್ಯಂತ್ರಗಳಿಂದ ಸಾಧ್ಯವಿಲ್ಲ ಸೌಜನ್ಯ ಹೋರಾಟಗಾರರು ಎಲ್ಲದಕ್ಕೂ ತಯಾರಾಗಿದ್ದಾರೆ ಎಂದು ಎಚ್ಚರಿಕೆ ನೀಡಿದರು.

IMG-20260921-WA0003-7-1024x1024 ಸೌಜನ್ಯ ಪ್ರಕರಣದ ಅಂದಿನ ತನಿಖಾಧಿಕಾರಿ ಯೋಗೀಶ್ ನನ್ನು       ನೇತು ಹಾಕಿದ್ರೆ ಸತ್ಯ ಹೊರಬರುತ್ತದೆ:      ಮಹೇಶ್ ಶೆಟ್ಟಿ ತಿಮರೋಡಿ

ಮಹಾತ್ಮಾ ಗಾಂಧೀಜಿಯವರು ಮಹಿಳೆಯರು
ಮಧ್ಯರಾತ್ರಿಯಲ್ಲಿಯೂ ಹೆಣ್ಣು ಮಕ್ಕಳು ನಿರ್ಭೀತಿಯಿಂದ ನಡೆದಾಡುವಂತಿರಬೇಕು ಎಂದು ಕನಸು ಕಂಡರು, ಆದರೆ ಧರ್ಮಸ್ಥಳ ಗ್ರಾಮದಲ್ಲಿ ಮಟ ಮಟ ಮಧ್ಯಾಹ್ನವೇ ಅಪಹರಣ, ಅತ್ಯಾಚಾರ, ಕೊಲೆಗಳಂಥ ಕೃತ್ಯಗಳು ನಡೆಯುತ್ತಿವೆ ಎಂದು ಮಹೇಶ್ ಶೆಟ್ಟಿ ಕಳವಳ ವ್ಯಕ್ತಪಡಿಸಿದರು.

Post Comment

ಟ್ರೆಂಡಿಂಗ್‌

error: Content is protected !!