ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾ ಸಂಸ್ಥೆಯಲ್ಲಿ ಪದವಿ ಪ್ರದಾನ ಸಮಾರಂಭ

ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾ ಸಂಸ್ಥೆಯಲ್ಲಿ ಪದವಿ ಪ್ರದಾನ ಸಮಾರಂಭ

Share
IMG-20240327-WA0111-1-1024x576 ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾ ಸಂಸ್ಥೆಯಲ್ಲಿ ಪದವಿ ಪ್ರದಾನ ಸಮಾರಂಭ

ನೆಲ್ಯಾಡಿ : ಇಲ್ಲಿನ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಕಿಂಡರ್ ಗಾರ್ಟನ್ ಪುಟಾಣಿಗಳ ಪದವಿ ಪ್ರಧಾನ ಸಮಾರಂಭ ಇಂದು ನಡೆಯಿತು.ಕುಂತೂರು ಮಾರ್. ಐವಾನಿಯಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ರೇ/ಸಿಸ್ಟರ್. ಅಲನ್.ಡಿ. ಎಂ. ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಕ್ಕಳಿಗೆ ಶುಭ ಹಾರೈಸಿದರು.

ಬೆಥನಿ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ರೇ lಫಾದರ್.ಡಾ. ವರ್ಗೀಸ್ ಕೈಪನಡ್ಕ ಮಾತನಾಡಿ ಪ್ರಸ್ತುತ ನೆಲ್ಯಾಡಿಯಲ್ಲಿ ಬೆಥನಿ ವಿದ್ಯಾ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉತ್ತಮ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಯನ್ನು ಪ್ರೋತ್ಸಾಹಿಸುವ ಉತ್ತಮ  ಶಿಕ್ಷಣವನ್ನು  ನೀಡುತ್ತಿದೆ. ಈಗಾಗಲೇ ಕಿಂಡರ್ ಗಾರ್ಟನ್ ಶಿಕ್ಷಣವನ್ನು ಮುಗಿಸಿದ ಮಕ್ಕಳಿಗೆ ಮುಂದೆ ಸಂಸ್ಥೆ ಉತ್ತಮ ಶಿಕ್ಷಣವನ್ನು ನೀಡಲು ಕಾತರದಿಂದ ಕಾಯುತ್ತಿದೆ.ಈ ನಿಟ್ಟಿನಲ್ಲಿ ಪೋಷಕರು ಬೆಥನಿ ವಿದ್ಯಾ ಸಂಸ್ಥೆಗೆ ಮಕ್ಕಳನ್ನು ಸೇರಿಸಿ ಪ್ರೋತ್ಸಾಹಿಸಿ ಎಂದರು. ಅಲ್ಲದೆ ಚಿಕ್ಕ ಮಕ್ಕಳನ್ನು ಉತ್ತಮ ವಾತಾವರಣದಲ್ಲಿ ಆದರ್ಶವಾಗಿ ಬೆಳೆಸಲು ತಂದೆ ತಾಯಿ ಅವರನ್ನು ಸದಾ ಪ್ರೋತ್ಸಾಹಿಸುತ್ತ ಇತರರನ್ನು ಪ್ರೀತಿಯಿಂದ ಕಾಣುವ ಆತ್ಮವಿಶ್ವಾಸವನ್ನು ತುಂಬುವುದರೊಂದಿಗೆ ತಪ್ಪುಗಳಾದಾಗ ಕ್ಷಮೆ ಕೋರುವ ಮನೋಭಾವವನ್ನು ಬೆಳೆಸಬೇಕು ಎಂದು ಕಿವಿ ಮಾತು ನುಡಿದರು.
        
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ವಿದ್ಯಾರ್ಥಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ  ಮಾಜಿ ಗ್ರಾ.ಪಂ.ಸದಸ್ಯ ಜಯಾನಂದ ಬಂಟ್ರಿಯಾಲ್ ಮಾತನಾಡುತ್ತಾ, ನೆಲ್ಲ್ಯಾಡಿಯಂತಹ  ಗ್ರಾಮೀಣ ಭಾಗದಲ್ಲಿ ಸುಸಜ್ಜಿತ ಸೌಲಭ್ಯಗಳನ್ನು ಒಳಗೊಂಡ ಬೆಥನಿ ವಿದ್ಯಾಸಂಸ್ಥೆ ಮಕ್ಕಳಿಗೆಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಉತ್ತಮ ಸಾಧಕರಗಿ ಬೆಳೆಸುವ ಅದ್ಬುತ ಜ್ಞಾನದೇಗುಲ.ಈ ಸಾಧನೆಯ ಹಿಂದೆ ಉತ್ತಮ ಆಡಳಿತ ಮಂಡಳಿ ಮತ್ತು ಶಿಕ್ಷಕರ  ಪರಿಶ್ರಮವಿದೆ ಎಂದರು. 63 ಪುಟಾಣಿಗಳು ಯುಕೆಜಿ ಪದವಿ ಪಡೆದು ಒಂದನೇ ತರಗತಿ ದಾಖಲಾಗಲು ಅರ್ಹತೆ ಪಡೆದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಬೆಥನಿ ವಿದ್ಯಾ ಸಂಸ್ಥೆಯ ಸಂಚಾಲಕರಾದ ರೇl ಫಾl ಜೈಸನ್  ಮಕ್ಕಳಿಗೆ ಶುಭ ಹಾರೈಸಿದರು. ಉಪ ಪ್ರಾಂಶುಪಾಲ ಜೋಸ್.ಎಂ. ಜೆ,   ಪಾl ಜೇಮ್ಸ್,  ಕೆಜಿ ವಿಭಾಗದ ಮುಖ್ಯಸ್ತೆ,ಗ್ರೇಸಿ ಉಪಸ್ಥಿತರಿದ್ದರು. ಅನನ್ಯ ನಿರೂಪಿಸಿ ಪುಟಾಣಿ ಸ್ವೀನಲ್ ಸ್ವಾಗತಿಸಿದರು. ಅಭಿಷೇಕ್ ಧನ್ಯವಾದ ಸಮರ್ಪಿಸಿದರು.

IMG-20240327-WA0116 ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾ ಸಂಸ್ಥೆಯಲ್ಲಿ ಪದವಿ ಪ್ರದಾನ ಸಮಾರಂಭ

Post Comment

ಟ್ರೆಂಡಿಂಗ್‌