ಕೊಕ್ಕಡ : ತೋಟದಲ್ಲಿ ಕಟ್ಟಿ ಹಾಕಿದ್ದ ದನ ಹಾಡು ಹಗಲೇ ಕಳವು

ಕೊಕ್ಕಡ : ತೋಟದಲ್ಲಿ ಕಟ್ಟಿ ಹಾಕಿದ್ದ ದನ ಹಾಡು ಹಗಲೇ ಕಳವು

Share
IMG_20240328_153943-1-1 ಕೊಕ್ಕಡ : ತೋಟದಲ್ಲಿ ಕಟ್ಟಿ ಹಾಕಿದ್ದ ದನ ಹಾಡು ಹಗಲೇ ಕಳವು

ಬೆಳ್ತಂಗಡಿ : ತೋಟದಲ್ಲಿ ಬೆಳಿಗ್ಗೆ ಮೇಯಲೆಂದು ಕಟ್ಟಿ ಹಾಕಲಾಗಿದ್ದ ದನವೊಂದು ಮಧ್ಯಾಹ್ನದೊಳಗೆ ಕಳವಾದ ಘಟನೆ ಕೊಕ್ಕಡ ಗ್ರಾಮದ ಶಬರಾಡಿ ಎಂಬಲ್ಲಿ ವರದಿಯಾಗಿದೆ.ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಶಬರಾಡಿ ನಿವಾಸಿ ಶಿವಪ್ರಸಾದ್‌ (43) ಎಂಬವರು ಬೆಳಿಗ್ಗೆ ತನ್ನ ತೋಟದಲ್ಲಿ ದನವನ್ನು ಮಾ25ರಂದು ಮೇಯಲೆಂದು ಕಟ್ಟಿ ಹಾಕಿದ್ದು ಬಳಿಕ ಮದ್ಯಾಹ್ನ ತೊಟಕ್ಕೆ ಬಂದು ನೋಡುವಷ್ಟರಲ್ಲಿ ದನವು ಕಟ್ಟಿ ಹಾಕಿದ್ದಲ್ಲಿ ಕಂಡು ಬಂದಿರುವುದಿಲ್ಲ. ಸುತ್ತಮುತ್ತ ಹುಡುಕಾಡಿದರೂ ಇದುವರೆಗೂ ದನವು ಎಲ್ಲೂ  ಪತ್ತೆಯಾಗಿರುವುದಿಲ್ಲ.

ತೋಟದಿಂದ ಕಳವಾದ ದನದ ಅಂದಾಜು ಮೌಲ್ಯ ರೂ 20,000/- ಆಗಬಹುದೆಂದು ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಶಿವಪ್ರಸಾದ್‌ ಎಂಬವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ: 21/2024 ಕಲಂ: 379 IPC ಪ್ರಕರಣ ದಾಖಲಾಗಿದೆ.

Post Comment

ಟ್ರೆಂಡಿಂಗ್‌