ಸಿಡಿಲು ಬಡಿದು ಧಗ ಧಗ ಉರಿದ ತೆಂಗಿನ ಮರ
ಬೆಳ್ತಂಗಡಿ : ಬುಧವಾರ ಸಂಜೆ ತಾಲೂಕಿನ ಕೆಲವೆಡೆ ಮಳೆಯಾಗಿದ್ದು, ಗುರುವಾಯನಕೆರೆಯಲ್ಲಿ ಆಲಿಕಲ್ಲು ಸಹಿತ ಸಾಧಾರಣ ಮಳೆಯಾಗಿದೆ. ಜೊತೆಗೆ ಹಲವೆಡೆ ಗಾಳಿ ಹಾಗೂ ಸಿಡಿಲಿನ ಅಬ್ಬರದಿಂದ,ತೋಟ , ಮನೆಗಳು, ಹಾನಿಗೊಂಡಿವೆ. ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಮೈಂದಕೋಡಿ ಎಂಬಲ್ಲಿನ ಲೋಕಯ್ಯ ಗೌಡ ಎಂಬವರ ಮನೆ ಸಮೀಪದ ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದ ಪರಿಣಾಮ ಬೆಂಕಿ ಹೊತ್ತಿ ಉರಿದಿದೆ. ಬಿಸಿಲಿನ ತಾಪಕ್ಕೆ ಎಲ್ಲಾ ನದಿಗಳು ಬತ್ತಿ ಹೋಗಿದ್ದು ನಿನ್ನೆ ರಾತ್ರಿ ಹಾಗೂ ಇಂದು ಬೆಳಗ್ಗೆ ಸುರಿದ ಭಾರೀ ಮಳೆಗೆ ಮೃತ್ಯುಂಜಯ ನದಿ ತುಂಬಿ ಹರಿಯುತಿದೆ. ಕೃಷಿ ತೋಟಗಳಿಗೆ ನೀರಿಲ್ಲದೇ ಕೃಷಿಕರು ಆತಂಕಗೊಂಡಿದ್ದಾರೆ. ಇನ್ನೊಂದೆಡೆ ಮಳೆಗಾಗಿ ಕಾಯುತ್ತಿದ್ದ ಕೃಷಿಕರಲ್ಲಿ ಮಳೆಯು ಸಂತಸ ಮೂಡಿಸಿದೆ.
Post Comment