ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ: ಅಭ್ಯರ್ಥಿಗಳು ಪಡೆದ ಮತಗಳ ವಿವರ :
ಮಂಗಳೂರು : ಪ್ರತಿಷ್ಠಿತ ಹಾಗೂ ತೀವ್ರ ಕುತೂಹಲ ಮೂಡಿಸಿದ್ದ ಕ್ಷೇತ್ರಗಳ ಪೈಕಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಯಾರೇ ಗೆದ್ದರೂ 40, 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವಷ್ಟರ ಮಟ್ಟಿಗೆ ಪೈಪೋಟಿ ಇರಲಿದೆ ಎಂಬ ರಾಜಕೀಯ ಲೆಕ್ಕಾಚಾರಗಳ ನಡುವೆಯೂ ಭಾರೀ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ 7,28,689 ಮತಗಳನ್ನು ಪಡೆದು ಗೆದ್ದು ಸಂಭ್ರಮಿಸಿದರು. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ 5,84,167 ಮತಗಳನ್ನು ಪಡೆದು ಸೋಲುಂಡರು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸೌಜನ್ಯಪರ ಹೋರಾಟಗಾರರು ಕರೆ ನೀಡಲಾಗಿದ್ದ ‘ನೋಟಾ’ ಮತದಾನ ಸೋಲು-ಗೆಲುವುಗಳ ಮೇಲೆ ನಿರ್ಣಾಯಕ ಪರಿಣಾಮ ಭೀರಬಹುದೆಂದು ನಂಬಲಾಗಿತ್ತು. ‘ನೋಟಾ’ ತಮ್ಮ ಗೆಲುವಿಗೆ ಬಲ ನೀಡಬಹುದೆಂದು ಕಾಂಗ್ರೆಸ್ ಹಾಗೂ ತಮ್ಮ ಗೆಲುವಿಗೆ ತೊಡಕಾಗಬಹುದೆಂಬ ಆತಂಕ ಬಿಜೆಪಿಗೂ ಒಳಗೊಳಗೆ ಇದ್ದಿದ್ದು ಸುಳ್ಳಲ್ಲ: ಆದರೆ ಇದು ನಿಜವಾಗಲಿಲ್ಲ. ಈ ಲೆಕ್ಕಾಚಾರಗಳಿಗೆ ಕಾರಣ , ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ, ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್, ತುಳು ಜನಪದ ಚಿಂತಕ ತಮ್ಮಣ್ಣ ಶೆಟ್ಟಿ, ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ, ಸೌಜನ್ಯ ತಾಯಿ ಕುಸುಮಾವತಿ ಮುಂತಾದವರು ಸೌಜನ್ಯಪರ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ನೇತೃತ್ವವಹಿಸಿಕೊಂಡು ಮರುತನಿಖೆಗಾಗಿ ಹೋರಾಡುತ್ತಾ ಸೌಜನ್ಯ ಪ್ರಕರಣದ ನ್ಯಾಯಕ್ಕಾಗಿ ‘ನೋಟಾ’ ಮತದಾನಕ್ಕೆ ಕರೆ ನೀಡಿರುವುದು ಹಾಗೂ ಸೌಜನ್ಯಪರ ಹೋರಾಟಕ್ಕೆ ಬೆಳ್ತಂಗಡಿ , ಸುಳ್ಯ ಮತ್ತು ಪುತ್ತೂರು ತಾಲೂಕುಗಳಲ್ಲಿ ವ್ಯಕ್ತವಾದ ಬೆಂಬಲ ಹಾಗೂ ‘ನೋಟಾ’ಕ್ಕೆ ಬೀಳುವ ಮತಗಳು ಬಿಜೆಪಿಗೆ ಬೀಳಬೇಕಾದ ಮತಗಳು, ಸೌಜನ್ಯಪರ ಹೋರಾಟಗಳಿಗೆ ಹರಿದು ಬರುತ್ತಿದ್ದ ಜನಸಾಗರ. ಆದರೆ ಸೌಜನ್ಯಪರ ಹೋರಾಟಗಾರರ ಪೂರ್ಣ ಪ್ರಮಾಣದ ಮತಗಳು ನಿರೀಕ್ಷೆಯಂತೆ ‘ನೋಟಾ’ಮತಗಳಾಗಿ ಪರಿವರ್ತನೆಯಾಗಿಲ್ಲ ಎಂಬ ಸಂಗತಿ ಇದೀಗ ಬಯಲಾಗಿದೆ. ಒಂದೆಡೆ ಸೌಜನ್ಯಪರ ಹೋರಾಟಕ್ಕೆ ಬೆಂಬಲಿಸುವವರ ಪೈಕಿ ಬಹುಪಾಲು ಜನರು ಇತ್ತ ಬಿಜೆಪಿ ಮತ್ತು ಕಾಂಗ್ರೆಸ್ ಮತದಾರರೂ ಕೂಡ ಆಗಿರಬಹುದೆಂಬ ಅಭಿಪ್ರಾಯವನ್ನು ಈ ಚುನಾವಣಾ ಫಲಿತಾಂಶವು ಮೂಡಿಸಿದೆ.
• ರಂಜಿನಿ ಎಂ. (ಕೆ.ಆರ್.ಎಸ್.) – 731
- ಇತರ ಅಭ್ಯರ್ಥಿಗಳು ಪಡೆದ ಮತಗಳೆಷ್ಟು?
- ದುರ್ಗಾ ಪ್ರಸಾದ್ (ಕರುನಾಡ ಸೇವಕರ ಪಕ್ಷ) – 2483
- ಸುಪ್ರೀತ್ ಕುಮಾರ್ ಪೂಜಾರಿ (ಪಕ್ಷೇತರ)- 1808
• ಮ್ಯಾಕ್ಸಿಂ ಪಿಂಟೊ (ಪಕ್ಷೇತರ)- 1587
• ಪ್ರಜಾಕೀಯ ಮನೋಹರ್ (ಯುಪಿಪಿ)- 921
• ದೀಪಕ್ ರಾಜೇಶ್ ಕುವೆಲ್ಲೊ (ಪಕ್ಷೇತರ)- 909
Post Comment