ಉಜಿರೆ : ಯುವಕನ ಮೇಲೆ ಜಾತಿ ನಿಂದಿಸಿ ಹಲ್ಲೆ ಪ್ರಕರಣ : ಆರೋಪಿ ಬಂಧನ
ಬೆಳ್ತಂಗಡಿ : ಕ್ಷುಲ್ಲಕ ವಿಚಾರಕ್ಕೆ ಉಂಟಾದ ಜಗಳದಲ್ಲಿ ಯುವಕನ ಮೇಲೆ ಜಾತಿ ನಿಂದನೆಗೈದು ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಕರುಣಾಕರ ಗೌಡ (26) ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಇದೀಗ ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಮಾಚಾರು ನಿವಾಸಿ ಅಶ್ವಥ್(21) ಎಂಬಾತನಿಗೆ ಜೂ.2ರಂದು ಸಂಜೆ ಮಾಚಾರು ಎಂಬಲ್ಲಿರುವಾಗ ಸ್ಥಳಕ್ಕೆ ಬಂದ ಪರಿಚಿತ ಆರೋಪಿಗಳಾದ ಕರುಣಾಕರ ಗೌಡ, ನಿತಿನ್ ಮತ್ತು ಇನ್ನೊಬ್ಬ ವ್ಯಕ್ತಿ ಬಂದಿದ್ದು ಈ ಪೈಕಿ ಕರುಣಾಕರ ಗೌಡ(26) ಎಂಬಾತ ಅಶ್ವಥ್ ಗೆ ಜಾತಿ ನಿಂದನೆ ಮಾಡಿ ಜೊತೆಗಿದ್ದ ಇನ್ನೋರ್ವ ಆರೋಪಿ ನಿತಿನ್ ಎಂಬಾತನೊಂದಿಗೆ ಸೇರಿ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ದೂರು ದಾಖಲಾಗಿತ್ತು.
ದೂರಿಗೆ ಸಂಬಂಧಿಸಿ ತನಿಖೆ ನಡೆಸಿದ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ 20 64/2024, ៩០: 341,323,324 3 34 5 0 0 ៩០ 3(1)(S) SC/ST ACT 2015 03 ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದರು. ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸೆಕ್ಟರ್ ಸುಬ್ಬಾಪೂರ್ ಮಠ ನೇತೃತ್ವದಲ್ಲಿ ಪ್ರಕರಣದ ಆರೋಪಿ ಕರುಣಾಕರ ಗೌಡ(26)ನನ್ನು ಬುಧವಾರ ರಾತ್ರಿ ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಮಂಗಳೂರು ಸೆಷನ್ಸ್ ಕೋರ್ಟ್ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ್ದು ನ್ಯಾಯಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದರು.
ಜೂ.6 ರಂದು ಮಂಗಳೂರು ಕೋರ್ಟ್ ಗೆ ಹಾಜರು ಪಡಿಸಲು ಸೂಚಿಸಿದ್ದು ಆರೋಪಿಯನ್ನು ಗುರುವಾರ ಕೋರ್ಟ್ ಗೆ ಹಾಜರುಪಡಿಸಿದ್ದು ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
Post Comment