ಬಿಜೆಪಿ ಪ್ರತಿಭಟನೆಯಲ್ಲಿ ‘ಮಲ್ಲೇಶ್ವರಂ’ ಭಜನೆ ಖಾಯಂ! ‘ಗ್ಯಾರಂಟಿ’ ಫಲಾನುಭವಿಗಳನ್ನು ನಾಯಿಗೆ ಹೋಲಿಸಿದರೇ ಹರಿಕೃಷ್ಣ ಬಂಟ್ವಾಳ್? 

ಬಿಜೆಪಿ ಪ್ರತಿಭಟನೆಯಲ್ಲಿ ‘ಮಲ್ಲೇಶ್ವರಂ’ ಭಜನೆ ಖಾಯಂ! ‘ಗ್ಯಾರಂಟಿ’ ಫಲಾನುಭವಿಗಳನ್ನು ನಾಯಿಗೆ ಹೋಲಿಸಿದರೇ ಹರಿಕೃಷ್ಣ ಬಂಟ್ವಾಳ್? 

Share
IMG-20240619-WA0024-1-1 ಬಿಜೆಪಿ ಪ್ರತಿಭಟನೆಯಲ್ಲಿ 'ಮಲ್ಲೇಶ್ವರಂ' ಭಜನೆ ಖಾಯಂ!                                   'ಗ್ಯಾರಂಟಿ' ಫಲಾನುಭವಿಗಳನ್ನು ನಾಯಿಗೆ ಹೋಲಿಸಿದರೇ ಹರಿಕೃಷ್ಣ ಬಂಟ್ವಾಳ್? 

ಕೆಲವು ಸಮಯಗಳಿಂದ ಬೆಳ್ತಂಗಡಿಯಲ್ಲಿ ನಡೆಯುವ  ಬಿಜೆಪಿಯ ಯಾವುದೇ ಪ್ರತಿಭಟನೆಗಳಲ್ಲಿ ಏಕೋ ಮುಖ್ಯ ಅಜೆಂಡಾಗಿಂತ ಹೆಚ್ಚಾಗಿ ಪದೇ ಪದೇ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕ ರಕ್ಷಿತ್ ಶಿವರಾಮ್ ಅವರ ಹೆಸರನ್ನೇ ಎತ್ತಿ ಪ್ರತ್ಯಕ್ಷವಾಗಿ -ಪರೋಕ್ಷವಾಗಿ ಟೀಕಿಸುವುದು ಮಾಮೂಲಾಗಿ ಬಿಟ್ಟಿದೆಯೇ ಎಂಬ ವಿಚಾರ ಇದೀಗ ಚರ್ಚೆಗೆ ಕಾರಣವಾಗಿದೆ..! ಇದಕ್ಕೊಂದು ಹಸಿ ಹಸಿ ಉದಾಹರಣೆ ಎಂದರೆ ಮಂಗಳವಾರ ಬಿಜೆಪಿ ಬೆಳ್ತಂಗಡಿ ಮಂಡಲದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸರಕಾರದ ಭ್ರಷ್ಟಚಾರ ಬಿಜೆಪಿ ಕಾರ್ಯಕರ್ತರ ಮೇಲಿನ ದೌರ್ಜನ್ಯ, ದ್ವೇಷ ರಾಜಕಾರಣದ ವಿರುದ್ಧ ಮಾತ ನಾಡಿದ ಮುಖಂಡರು ಎಂದಿನಂತೆ ಮತ್ತೆ ರಕ್ಷಿತ್ ಶಿವರಾಮ್ ಹೆಸರು ಹೇಳದೆ ‘ಮಲ್ಲೇಶ್ವರಂ’ ಟೀಕಿಸಲು ಮರೆಯಲೇ ಇಲ್ಲ!

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು “ಮಲ್ಲೇಶ್ವರಂನಿಂದ ಬಂದ ರೌಡಿಯಿಂದ ಬೆಳ್ತಂಗಡಿಯಲ್ಲಿ ದ್ವೇಷದ  ರಾಜಕಾರಣ ನಡೆಯುತ್ತಿದೆ, ಆದರೆ ಚಿಂತೆ ಬೇಡ ಈ ಮಲ್ಲೇಶ್ವರಂನ ಪುಡಾರಿಯನ್ನು ಕಾಂಗ್ರೆಸ್ ಮುಖಂಡರೇ ಮಲ್ಲೇಶ್ವರಂಗೆ ಓಡಿಸಲಿದ್ದಾರೆ” ಎಂಬ ರಾಜಕೀಯ ಭವಿಷ್ಯ ನುಡಿದಿರುವುದು ಚಪ್ಪಾಳೆಗೆ ಕಾರಣವಾಯಿತು. ಆದರೆ ಬಿಜೆಪಿ ಮುಖಂಡರು ಇಷ್ಟೊಂದು ವಿಶ್ವಾಸದಿಂದ ಹೇಳಿದ ಈ ಭವಿಷ್ಯದ ಹಿಂದೆ ಕಾಂಗ್ರೆಸ್ ಪಕ್ಷದೊಳಗಿನ ರಕ್ಷಿತ್ ಶಿವರಾಮ್ ವಿರೋಧಿ ಬಣದ ಕಾಣದ ‘ಕೈ’ವಾಡವಿರಬಹುದೇ ?ಎಂಬ ಬಲವಾದ ಸಂಶಯ ಮೂಡಿಸಿದೆ. ಇನ್ನೊಂದೆಡೆ ಹರಿಕೃಷ್ಣ ಬಂಟ್ವಾಳ್  ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ರಾಜ್ಯ ಸರಕಾರ, ಸಿದ್ದರಾಮಯ್ಯ, ಪೆಟ್ರೋಲ್ ಬೆಲೆ ವಿರುದ್ಧ ಹಾಗೂ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಯನ್ನು ಟೀಕಿಸಿದರು.   ಹರಿಕೃಷ್ಣ ಬಂಟ್ವಾಳ್ , ಗ್ಯಾರಂಟಿ ಯೋಜನೆಯನ್ನು ಬಾಲಿಶ ಹೋಲಿಕೆಗಳ ವ್ಯಂಗ್ಯದ ಮೂಲಕ ಟೀಕಿಸುತ್ತಾ ಕಳ್ಳ ಮತ್ತು ನಾಯಿಯ ಒಂದು ಕಳಪೆ ಕತೆ ಹೇಳಿ ನೆರೆದ ಪ್ರತಿಭಟನಾಕಾರರನ್ನು ರಂಜಿಸಲು ವಿಫಲ ಯತ್ನ ನಡೆಸಿರುವುದು ಸ್ವಾರಸ್ಯಕರವಾಗಿತ್ತು!

ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಯನ್ನು ಲೇವಡಿ ಮಾಡಲು ಹರಿಕೃಷ್ಣ ಬಂಟ್ವಾಳ್ ಹೇಳಿದ  ಕತೆಯ ಸಂಕ್ಷಿಪ್ತ ರೂಪ: ಒಂದು ಮನೆಗೆ ಕಳವು ಮಾಡಲು ಬಂದ ಕಳ್ಳನಿಗೆ ನಾಯಿ ಮೊಗಳುವುದಂತೆ, ನಾಯಿ ಬೊಗಳಿದರೆ ಕಳವು ಮಾಡುವುದು ಕಷ್ಟವೆಂದು ತಿಳಿದು ನಾಯಿ ಬೊಗಳಬಾರದೆಂದು ನಾಯಿಯ ಬಾಯಿ ಮುಚ್ಚಿಸಲು ಕಳ್ಳ ಬೆಸ್ಕೆಟ್ ಎಸೆಯುತ್ತಾನಂತೆ! ಅವರು ಹೇಳಿದ ಕಳ್ಳ ಮತ್ತು ನಾಯಿಯ ಕಥೆಯಲ್ಲಿ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿರುವ ರಾಜ್ಯ ಸರಕಾರ ಮತ್ತು ಕಾಂಗ್ರೆಸ್ ಪಕ್ಷವನ್ನು ಕಳ್ಳನೆಂದೂ ಗ್ಯಾರಂಟಿ ಯೋಜನೆಯ ಸೌಲಭ್ಯಗಳನ್ನು ಪಡೆಯುತ್ತಿರುವ ಫಲಾನುಭವಿಗಳನ್ನು ನಾಯಿ ಎಂದೂ ಉಪಮೆ ಇದೆ.

ಆದರೆ ಹರಿಕೃಷ್ಣ ಬಂಟ್ವಾಳ್ ಹೇಳಿದ ಕತೆಯ ಪ್ರಕಾರ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದವರು ಕಳ್ಳನಾದರೆ; ಇಲ್ಲಿ ನಾಯಿ ಯಾರು? ಬಿಜೆಪಿ-ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳಿಗೆ ಮತದಾನ ಮಾಡಿಯೂ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಯ ಸೌಲಭ್ಯಗಳನ್ನು ಪಡೆಯುತ್ತಿರುವ ಬಡ ಫಲಾನುಭವಿಗಳೇ? ಗ್ಯಾರಂಟಿ ಯೋಜನೆಯ ಸೌಲಭ್ಯಗಳನ್ನು ಪಡೆಯದವರೇ?  ಹರಿಕೃಷ್ಣ ಬಂಟ್ವಾಳ್ ತಮ್ಮ ಕಪೆಯಲ್ಲಿ ಬಿಸ್ಕೆಟ್ ತಿಂದು ಬೊಗಳಿದ ನಾಯಿಗೆ ಹೋಲಿಸಿರುವುದು ಯಾರನ್ನು.?  ಗ್ಯಾರಂಟಿ ಯೋಜನೆಯ ಫಲಾನುಭವಿಗಳನ್ನಲ್ಲವೇ? ಗ್ಯಾರಂಟಿ ಯೋಜನೆಯ ಫಲಾನುಭವಿಗಳಲ್ಲಿ ಬಿಜೆಪಿ-ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷಗಳಿಗೆ ಮತ ಹಾಕಿರುವ ಬಡವರಿಲ್ಲವೇ..? ಎಂಬಿತ್ಯಾದಿ ಪ್ರಶ್ನೆಗಳು ಇದೀಗ ಪ್ರಜ್ಞಾವಂತರಿಂದ ಕೇಳಿ ಬರಲು ಕಾರಣವಾಗಿದೆ.

Previous post

“ಮಸೀದಿ‌, ಮದರಸಗಳಲ್ಲಿ ಶಸ್ತ್ರಾಸ್ತ್ರ”  ಶಾಸಕ ಹರೀಶ್ ಪೂಂಜ ಹೇಳಿಕೆ ವಿರುದ್ಧ  ಬೆಳ್ತಂಗಡಿ ತಾ. ಜಮಾಅತ್  ಒಕ್ಕೂಟದಿಂದ  ಪೊಲೀಸರ ಮೂಲಕ ಸ್ಪೀಕರ್ ಗೆ ದೂರು

Next post

ಲಾಠಿ ಬೀಸುವ ಕೈ,  ಕವಿತೆಗೂ ಸೈ: ಗಸ್ತು ಹೊರಟಾಗ ಸಿಕ್ಕ ‘ಮೈಲಿಗಲ್ಲು’ ಮೇಲೊಂದು  ಆಪ್ತ ಮಹಜರು..!

Post Comment

ಟ್ರೆಂಡಿಂಗ್‌

error: Content is protected !!