ಉಜಿರೆ:ಕಾರು ಡಿಕ್ಕಿಯಾಗಿ ಮುರಿದು ಬಿದ್ದ ಲೈಟ್ ಕಂಬ ಫುಟ್ ಪಾತ್ ನಲ್ಲೇ ಬಾಕಿ; ನಾಗರಿಕರಿಗೆ ತೊಂದರೆ

ಉಜಿರೆ:ಕಾರು ಡಿಕ್ಕಿಯಾಗಿ ಮುರಿದು ಬಿದ್ದ ಲೈಟ್ ಕಂಬ ಫುಟ್ ಪಾತ್ ನಲ್ಲೇ ಬಾಕಿ; ನಾಗರಿಕರಿಗೆ ತೊಂದರೆ

Share
IMG-20240701-WA0004-1-1024x770 ಉಜಿರೆ:ಕಾರು ಡಿಕ್ಕಿಯಾಗಿ ಮುರಿದು ಬಿದ್ದ ಲೈಟ್ ಕಂಬ ಫುಟ್ ಪಾತ್ ನಲ್ಲೇ ಬಾಕಿ; ನಾಗರಿಕರಿಗೆ ತೊಂದರೆ

ಬೆಳ್ತಂಗಡಿ : ಶನಿವಾರ ಬೆಳಗ್ಗಿನ ಜಾವ ಉಜಿರೆ ಮುಖ್ಯರಸ್ತೆಯ ಬೆಳಾಲು ಕ್ರಾಸ್ ಸಮೀಪ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಕಾರು ಡಿಕ್ಕಿಯಾಗಿ ಮುರಿದು ಬಿದ್ದ ಬೀದಿ ದೀಪದ ಕಂಬವನ್ನು ಮುಖ್ಯ ರಸ್ತೆಯ ಫುಟ್ಪಾತ್ ನಲ್ಲಿ ಅಡ್ಡಲಾಗಿ ಹಾಕಲಾಗಿದ್ದು ಪಾದಚಾರಿಗಳಿಗೂ ವಾಹನ ಪಾರ್ಕಿಂಗ್ ಗೂ ತೊಂದರೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಬೆಳ್ತಂಗಡಿ ತಾಲೂಕಿನ  ಉಜಿರೆಯಲ್ಲಿ ಶನಿವಾರ ಬೆಳಗ್ಗಿನ ಜಾವ ಸುಮಾರು 4 ಗಂಟೆ ಹೊತ್ತಿಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರು ಚಾಲಕ ಬೆಳ್ತಂಗಡಿ ನಿವಾಸಿ ಪ್ರಜ್ವಲ್ ನಾಯಕ್ ಮೃತಪಟ್ಟಿದ್ದರು. ಪ್ರಜ್ವಲ್ ನಾಯಕ್ ಚಲಾಯಿಸುತ್ತಿದ್ದ ಕಾರು ಡಿವೈಡರ್ ಗೆ ಡಿಕ್ಕಿಯಾಗಿ   ಬೀದಿ ದೀಪದ ಕಂಬಕ್ಕೆ ಗುದ್ದಿದ ಪರಿಣಾಮ ಡಿಕ್ಕಿ ಹೊಡೆದ ರಭಸಕ್ಕೆ ಲೈಟ್ ಕಂಬ ಮುರಿದು ಬಿದ್ದಿತ್ತು. ಬಳಿಕ ಬೀದಿ ದೀಪದ ಕಂಬವನ್ನು ಅಪಘಾತದ ಸ್ಥಳದಿಂದ ಸ್ಥಳಾಂತರಿಸಿ ಮುಖ್ಯ ರಸ್ತೆಯ ಇನ್ನೊಂದು ಬದಿಯ ಫುಟ್ಪಾತ್ ಮಧ್ಯೆ ಹಾಕಲಾಗಿದ್ದು ಇದು ಪಾದಾಚಾರಿಗಳಿಗೆ ಮತ್ತು ವಾಹನ ಪಾರ್ಕಿಂಗ್ ಗೆ ತೊಂದರೆ ಉಂಟಾಗಿದೆ ; ಎಂಬ ಆರೋಪ ಇದೀಗ  ನಾಗರಿಕರಿಂದ ಕೇಳಿ ಬರುತ್ತಿದೆ.

ಕೂಡಲೇ ಸಂಬಂಧಪಟ್ಟ ಇಲಾಖೆ ಕೂಡಲೇ ಕಂಬವನ್ನು ಫುಟ್ ಪಾತ್ ನಿಂದ ಸ್ಥಳಾಂತರಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಬೇಕೆಂದು ನಾಗರಿಕರು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

IMG-20240701-WA0004-2-1024x770 ಉಜಿರೆ:ಕಾರು ಡಿಕ್ಕಿಯಾಗಿ ಮುರಿದು ಬಿದ್ದ ಲೈಟ್ ಕಂಬ ಫುಟ್ ಪಾತ್ ನಲ್ಲೇ ಬಾಕಿ; ನಾಗರಿಕರಿಗೆ ತೊಂದರೆ
Previous post

ಉಜಿರೆ : ಯುವವಾಹಿನಿ ಸಂಚಲನಾ ಸಮಿತಿ, ಶ್ರೀ ಗುರುನಾರಾಯಣ ಸೇವಾ ಸಂಘ ನೇತೃತ್ವದಲ್ಲಿ ಗುರುಪೂಜಾ ಕಾರ್ಯಕ್ರಮ  

Next post

ಉದ್ಘಾಟನೆಗೂ ಮುನ್ನ ಸೋರುತ್ತಿದೆ; ಲಾಯಿಲಾದ  ನೂತನ ಗ್ರಂಥಾಲಯ  ತಾ.ಪಂ.- ಕೆ.ಆರ್.ಡಿ.ಎಲ್ ನ 15 ಲಕ್ಷ ರೂ ಅನುದಾನ : ಕಾಮಗಾರಿಯ ಗುಣಮಟ್ಟವೇ ಅನುಮಾನ 

Post Comment

ಟ್ರೆಂಡಿಂಗ್‌