ಕುಂಟಾಲಪಲಿಕೆ ಸೇತುವೆ ಬಳಿ ರಸ್ತೆ ಮಧ್ಯೆ ಗುಡ್ಡ ಕುಸಿತ : ಮುಂದುವರಿದ ತೆರವು ಕಾರ್ಯ ; ವಾಹನ ಸವಾರರನ್ನು ಕಾಡುತ್ತಿದೆ; ಮತ್ತೆ ಗುಡ್ಡ ಕುಸಿತದ ಭೀತಿ

ಕುಂಟಾಲಪಲಿಕೆ ಸೇತುವೆ ಬಳಿ ರಸ್ತೆ ಮಧ್ಯೆ ಗುಡ್ಡ ಕುಸಿತ : ಮುಂದುವರಿದ ತೆರವು ಕಾರ್ಯ ; ವಾಹನ ಸವಾರರನ್ನು ಕಾಡುತ್ತಿದೆ; ಮತ್ತೆ ಗುಡ್ಡ ಕುಸಿತದ ಭೀತಿ

Share
a10012f8-9c88-47d4-9e67-9c84ae4cc1be-1-1024x768 ಕುಂಟಾಲಪಲಿಕೆ ಸೇತುವೆ ಬಳಿ ರಸ್ತೆ ಮಧ್ಯೆ ಗುಡ್ಡ ಕುಸಿತ :                       ಮುಂದುವರಿದ ತೆರವು ಕಾರ್ಯ ;                                                                                  ವಾಹನ ಸವಾರರನ್ನು ಕಾಡುತ್ತಿದೆ; ಮತ್ತೆ ಗುಡ್ಡ ಕುಸಿತದ ಭೀತಿ

ಮೊನ್ನೆ ಬೋಲೋಡಿ; ಇಂದು ಕುಂಟಾಲಪಲಿಕೆ ಬಳಿ ಗುಡ್ಡ ಕುಸಿತ
ಬಂದಾರು ಗ್ರಾ.ಪಂ. ವ್ಯಾಪ್ತಿಯ ಎರಡು ಸೇತುವೆಗಳ ಬಳಿ ಸರಣಿ ಗುಡ್ಡ ಕುಸಿತ
ವಾಹನ ಸವಾರರನ್ನು ಕಾಡುತ್ತಿದೆ; ಮತ್ತೆ ಗುಡ್ಡ ಕುಸಿತದ ಭೀತಿ

ಬೆಳ್ತಂಗಡಿ : ವಾರದಿಂದ ವಿಪರೀತ ಮಳೆಯಾಗುತ್ತಿರುವ ಪರಿಣಾಮ ತಾಲೂಕಿನ ವಿವಿಧೆಡೆ ಪ್ರಕೃತಿ ವಿಕೋಪ, ಮಳೆಹಾನಿ ಮತ್ತಿತರ ಸರಣಿ ಅವಘಡಗಳು
ವರದಿಯಾಗುತ್ತಿದ್ದು ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಬಂದಾರು ಗ್ರಾಮದಲ್ಲಿ ಮೂರನೇ ಭಾರಿ ಗುಡ್ಡ ಕುಸಿದ ಘಟನೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾ.ಪಂ.ವ್ಯಾಪ್ತಿಯ ಸೋಮಾವತಿ ನದಿಯ ಕುಂಟಾಲಪಲ್ಕೆ ಸೇತುವೆ ಬಳಿ ಮತ್ತೆ ಗುಡ್ಡ ಕುಸಿದಿದೆ.
ಬಂದಾರು ಕಡೆಯಿಂದ ಉಜಿರೆ ಕಡೆ ಬರುವ ರಸ್ತೆಯಲ್ಲಿ ಮಾಲೆಸರ-ಕುಂಟಾಲಪಲಿಕೆ ಸೇತುವೆಗೆ ಇಳಿಯುವ ರಸ್ತೆ ಮಧ್ಯೆ ಗುಡ್ಡ ಕುಸಿದಿದೆ.
ಕುಂಟಾಲಪಲಿಕೆ ಸೇತುವೆ ಬಳಿ ಅಪಾಯಕಾರಿ ಇಳಿಜಾರು ರಸ್ತೆಯ ಎರಡೂ ಕಡೆಗಳಲ್ಲಿ ಸುಮಾರು ೫೦ರಿಂದ ೭೫ ಅಡಿ ಎತ್ತರದ ಅಪಾಯಕಾರಿ ಗುಡ್ಡಗಳಿದ್ದು
ವಾಹನ ಸವಾರರು ಅಗತ್ಯ ನಿಮಿತ್ತ ಶುಕ್ರವಾರ ಬೆಳಿಗ್ಗೆ ಬೇಗ ಸಂಚರಿಸುವ ವೇಳೆ ಗುಡ್ಡ ಕುಸಿದಿರುವುದು ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಬಂದಾರು – ಉಜಿರೆ- ಧರ್ಮಸ್ಥಳ ರಸ್ತೆಗೆ ಎತ್ತರದಿಂದ ಗುಡ್ಡ ಕುಸಿದು ಮಣ್ಣಿನ ದೊಡ್ಡ ರಾಶಿ ರಸ್ತೆಯಲ್ಲಿತ್ತು.
ಕುಸಿದ ಮಣ್ಣಿನ ರಾಶಿಯಿಂದ ಇಡೀ ರಸ್ತೆ ಸಂಪೂರ್ಣ ಬಂದ್ ಆಗಿದೆ. ಬಂದಾರು-ಉಜಿರೆ-ಧರ್ಮಸ್ಥಳ ಮಧ್ಯೆ ಸಂಚಾರ ಸ್ಥಗಿತಗೊಂಡಿತ್ತು.
ಮಾಹಿತಿ ತಿಳಿದ ಬಂದಾರು ಗ್ರಾ.ಪಂಚಾಯತ್ ಅಧ್ಯಕ್ಷ ದಿನೇಶ್ ಕಂಡಿಗ ಸ್ಥಳಕ್ಕೆ ಭೇಟಿ ನೀಡಿ ಮಣ್ಣು ತೆರವು ಕಾರ್ಯಕ್ಕೆ ಅಗತ್ಯ ಕ್ರಮ ಕೈಗೊಂಡಿದ್ದಾರೆ. ಜೆಸಿಬಿಯಿಂದ ಮಣ್ಣು ತೆರವು ಕರ‍್ಯ ಮುಂದುವರಿದಿದೆ.

3-1024x759 ಕುಂಟಾಲಪಲಿಕೆ ಸೇತುವೆ ಬಳಿ ರಸ್ತೆ ಮಧ್ಯೆ ಗುಡ್ಡ ಕುಸಿತ :                       ಮುಂದುವರಿದ ತೆರವು ಕಾರ್ಯ ;                                                                                  ವಾಹನ ಸವಾರರನ್ನು ಕಾಡುತ್ತಿದೆ; ಮತ್ತೆ ಗುಡ್ಡ ಕುಸಿತದ ಭೀತಿ

ಇದೇ ಗ್ರಾಮದ ಬೊಳೋಡಿ ಸೇತುವೆ ಬಳಿ ಎರಡು ಭಾರಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.
ಇದೀಗ ಕುಂಟಾಲಪಲಿಕೆ ಮಾಲೆಸರ ಎಂಬಲ್ಲಿ ಗುಡ್ಡ ಕುಸಿದು ಮಣ್ಣಿನ ರಾಶಿಯಿಂ ದ ರಸ್ತೆ ಬಂದ್ ಆಗಿ ನೀರು ನಿಂತಿದ್ದು ಗ್ರಾ.ಪಂ. ವ್ಯಾಪ್ತಿಯಲ್ಲಿ ಇದು ಮೂರನೇ
ಘಟನೆಯಾಗಿದೆ. ಕುಂಟಾಲಪಲಿಕೆ ಸೇತುವೆ ಬಳಿ ಗುಡ್ಡ ಕುಸಿತ ತೆರವು ಕಾರ್ಯ ಸಂಜೆಯವರೆಗೆ ಮುಂದುವರಿಯುವ ಸಾಧ್ಯತೆ ಇದೆ.
ಬಂದಾರು ಗ್ರಾ.ಪಂ.ಅಧ್ಯಕ್ಷ ದಿನೇಶ್ ಕಂಡಿಗ ಮತ್ತು ಕೆಲ ಸದಸ್ಯರು ಸ್ಥಳದಲ್ಲಿದ್ದು ತೆರವು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಲೋಕೋಪಯೋಗಿ ಇಲಾಖಾಧಿಕಾರಿಗಳು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

            

4-1024x759 ಕುಂಟಾಲಪಲಿಕೆ ಸೇತುವೆ ಬಳಿ ರಸ್ತೆ ಮಧ್ಯೆ ಗುಡ್ಡ ಕುಸಿತ :                       ಮುಂದುವರಿದ ತೆರವು ಕಾರ್ಯ ;                                                                                  ವಾಹನ ಸವಾರರನ್ನು ಕಾಡುತ್ತಿದೆ; ಮತ್ತೆ ಗುಡ್ಡ ಕುಸಿತದ ಭೀತಿ

Post Comment

ಟ್ರೆಂಡಿಂಗ್‌

error: Content is protected !!