ಕಣಿಯೂರು ಬಳಿ ತೋಡಿಗೆ ಗುಡ್ಡ ಕುಸಿತ : ತೋಟ ಜಲಾವೃತ

ಕಣಿಯೂರು ಬಳಿ ತೋಡಿಗೆ ಗುಡ್ಡ ಕುಸಿತ : ತೋಟ ಜಲಾವೃತ

Share
2-kaniyooru-1024x579 ಕಣಿಯೂರು ಬಳಿ ತೋಡಿಗೆ ಗುಡ್ಡ ಕುಸಿತ : ತೋಟ ಜಲಾವೃತ
kaniyoru-1-1-1024x595 ಕಣಿಯೂರು ಬಳಿ ತೋಡಿಗೆ ಗುಡ್ಡ ಕುಸಿತ : ತೋಟ ಜಲಾವೃತ

ಬೆಳ್ತಂಗಡಿ : ಕಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಣಿಯೂರು ತಾರಿದಡಿ ಎಂಬಲ್ಲಿ ಗುಡ್ಡ ಕುಸಿದು ತೋಡೊಂದು ಮುಚ್ಚಿ ಹೋದ  ಘಟನೆ ಮಂಗಳವಾರ  ನಡೆದಿದೆ. ಬೆಳ್ತಂಗಡಿ ತಾಲೂಕು ಕಣಿಯೂರು ಗ್ರಾಮದ ತಾರಿದಡಿ ಎಂಬಲ್ಲಿ ತೋಡಿನ ಬದಿಯ ಬೃಹತ್ ಗುಡ್ಡ ತೋಡಿಗೆ ಕುಸಿದಿದೆ.ತೋಡಿಗೆ ಗುಡ್ಡ ಕುಸಿದ ಪರಿಣಾಮ ಮಣ್ಣಿನ ರಾಶಿಯಿಂದ ತೋಡು ಮುಚ್ಚಿ ಹೋಗಿದೆ.ಮಣ್ಣಿನ ರಾಶಿಯಿಂದ  ತೋಡು ಹರಿವು ಬದಲಿಸಿಕೊಂಡ ಪರಿಣಾಮ ತೋಟದಲ್ಲಿ ಹರಿಯುತ್ತಿದೆ. ಗುಡ್ಡ  ಕುಸಿತ ಮುಂದುವರಿದಿದ್ದು ಸ್ಥಳೀಯರು ಆತಂಕದಲ್ಲಿದ್ದಾರೆ. ಘಟನೆಯಲ್ಲಿ ಕುಸಿದ ಗುಡ್ಡದ ಮಣ್ಣಿನ ರಾಶಿ ಅಡಿಕೆ ತೋಟಕ್ಕೆ ವ್ಯಾಪಿಸಿದ್ದು ತೋಡಿನ ನೀರು ತೋಟಕ್ಕೆ ನುಗ್ಗಿದೆ. ಈ ಬಗ್ಗೆ ಸ್ಥಳೀಯರು ಗ್ರಾಮಪಂಚಾಯತ್ ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ  ಗುಡ್ಡ ಕುಸಿದ ಸ್ಥಳಕ್ಕೆ  ಸದಸ್ಯ ಯಶೋಧರ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಇದೀಗ ತೋಡಿಗೆ ಬಿದ್ದ ಮಣ್ಣಿನ ರಾಶಿಯನ್ನೂ ಊರವರೇ ಸೇರಿಕೊಂಡು ಸ್ವಪ್ರೇರಣೆಯಿಂದ ತೆರವುಗೊಳಿಸಿದ್ದಾರೆ. ಯಾವುದೇ ಸಣ್ಣಪುಟ್ಟ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ತೆರವಿಗೆ ಸಂಬಂಧಪಟ್ಟ ಅಧಿಕಾರಿಗಳೇ ಬರಬೇಕು, ಸರಕಾರದ ಹಣಕ್ಕೆ ಕಾಯಬೇಕು  ಎಂಬ ಸಾಮಾನ್ಯ ಮನಸ್ಥಿತಿ ಜನರೇ  ಇರುವಾಗ ಇಲ್ಲಿ ತೋಡಿಗೆ ಕುಸಿದ  ಮಣ್ಣಿನ ರಾಶಿಯನ್ನು  ಊರವರೇ ಸೇರಿ  ತೆರವುಗೊಳಿಸುತ್ತಿರುವ ಬಗ್ಗೆ ಸ್ಥಳೀಯವಾಗಿ ಮೆಚ್ಚುಗೆ ವ್ಯಕ್ತವಾಗಿದೆ.

Post Comment

ಟ್ರೆಂಡಿಂಗ್‌