2016ರ ‘ಓವರ್ ಟೇಕ್’ ಅಪಘಾತ ಪ್ರಕರಣ : ಮಹಿಳೆ ಸಾವಿಗೆ ಕಾರಣನಾದ ಕಾರು ಚಾಲಕನಿಗೆ ಶಿಕ್ಷೆ ಪ್ರಕಟಿಸಿದ ಕೋರ್ಟ್

ಬೆಳ್ತಂಗಡಿ : 2016ರಲ್ಲಿ ಗುರುವಾಯನಕೆರೆ – ಉಪ್ಪಿನಂಗಡಿ ರಸ್ತೆಯಲ್ಲಿ ಓವರ್ ಟೇಕ್ ಮಾಡುವ ವೇಳೆ ಸಂಭವಿಸಿದ ಕಾರು ಮತ್ತು ರಿಕ್ಷಾ ಅಪಘಾತ ಪ್ರಕರಣದಲ್ಲಿ ಮಹಿಳೆಯ ಸಾವಿಗೆ ಕಾರಣನಾದ ಆರೋಪಿ ಕಾರು ಚಾಲಕನಿಗೆ ಬೆಳ್ತಂಗಡಿ ನ್ಯಾಯಾಲಯವು ಆಗಸ್ಟ್ 8ನೇ ಬುಧವಾರದಂದು ಶಿಕ್ಷೆ ವಿಧಿಸಿ ತೀರ್ಪು ನೀಡಿ ಆದೇಶ ಹೊರಡಿಸಿದೆ. 2016ರ ಸೆಪ್ಟಂಬರ್ 11 ರಂದು ಸಂಜೆ 5.00 ಗಂಟೆಗೆ ಕಾರು (ನಂ.ಕೆಎ21 ಎನ್. 7021) ಉಪ್ಪಿನಂಗಡಿ ಕಡೆಯಿಂದ ಗುರುವಾಯನಕೆರೆ ಕಡೆಗೆ ಚಲಾಯಿಸಿ ಓವರ್ ಟೇಕ್ ಮಾಡುವ ಸಮಯ ಉಪ್ಪಿನಂಗಡಿ ಕಡೆಗೆ ಹೋಗುತ್ತಿದ್ದ ಅಟೋರಿಕ್ಷಾ (ನಂ. ಕೆಎ.21.5922)ಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಬಿ.ಕೆ.ವೀಣಾ ಎಂಬವರು ತೀವ್ರ ಗಾಯಗೊಂಡಿದ್ದರು. ಮಂಗಳೂರು ಎ.ಜೆ ಅಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಿ.ಕೆ.ವೀಣಾ ಮೃತಪಟ್ಟಿದ್ದು ಅಪಾದಿತ ಕಾರು ಚಾಲಕ ಚಿದಾನಂದ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಸರಕಾರಿ ಅಭಿಯೋಜಕರಾದ ಕಿರಣ್ ಮತ್ತು ಹಾಲಿ ಅಶಿಕಾ ಸರಕಾರದ ಪರ ವಾದ ಮಂಡಿಸಿದ್ದರು. ಪ್ರಕರಣದಲ್ಲಿ ತನಿಖಾಧಿಕಾರಿಯಾಗಿ ಸಿಪಿಐ ನಾಗೇಶ್ ಕದ್ರಿ ಹಾಗೂ ತನಿಖಾ ಸಹಾಯಕನಾಗಿ ವೆಂಕಟೇಶ್ ಕಾರ್ಯನಿರ್ವಹಿಸಿದ್ದರು.
Post Comment