ಕೊಯ್ಯೂರು ಬಾಸಮೆ ಪರಿಸರದಲ್ಲಿ ತಾಯಿ, ಮರಿ ಚಿರತೆ ಸಂಚಾರ

ಕೊಯ್ಯೂರು ಬಾಸಮೆ ಪರಿಸರದಲ್ಲಿ ತಾಯಿ, ಮರಿ ಚಿರತೆ ಸಂಚಾರ

Share


ಬೆಳ್ತಂಗಡಿ : ಕೊಯ್ಯೂರು ಮತ್ತು ಬೆಳಾಲು ಗ್ರಾಮಗಳ ಗಡಿ ಭಾಗದ ಅರಣ್ಯ ಪ್ರದೇಶದ ಬಾಸಮೆ ಪರಿಸರದಲ್ಲಿ ಎರಡು ದಿನಗಳಿಂದ ತಾಯಿ ಮತ್ತು ಮರಿ ಚಿರತೆಗಳು ಓಡಾಡುತ್ತಿರುವುದು ಸ್ಥಳೀಯರಿಗೆ ಕಾಣಿಸಿಕೊಂಡಿದೆ.
ಕೊಯ್ಯೂರು ಗ್ರಾಮದ ಬಾಸಮೆ ಪರಿಸರದಲ್ಲಿ ಸ್ಥಳೀಯರಿಗೆ ಕಾಣಿಸಿಕೊಂಡ ಚಿರತೆ ಬಳಿಕ ಬಾಸಮೆ ಎಂಬಲ್ಲಿನ ನಿವಾಸಿ ಶ್ರೀನಿವಾಸ ನಾಯ್ಕ ಎಂಬವರ ಮನೆಯಿಂದ ಕೋಳಿಗಳನ್ನು ಹಿಡಿದು ತಿಂದಿದೆ. ಬಳಿಕ ಸುತ್ತಮುತ್ತ ಕಾಡಿನ ಮರೆಯಲ್ಲಿ ಸಂಚರಿಸುತ್ತಿರುವುದು ಸ್ಥಳೀಯರಿಗೆ ಕಾಣಿಸಿಕೊಂಡಿದೆ. ಇದೀಗ ಬಾಸಮೆ ಪರಿಸರದಲ್ಲಿ ಒಂದು ತಾಯಿ ಚಿರತೆ ಮತ್ತು ಮರಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದೆ.
ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.


Post Comment

ಟ್ರೆಂಡಿಂಗ್‌

error: Content is protected !!