ಹಳೆಕೋಟೆಯಲ್ಲಿ ತಲೆ ಎತ್ತಿದೆ; ಧಾರ್ಮಿಕ ವ್ಯಕ್ತಿಯ ಅಕ್ರಮ ಬಂಗ್ಲೆ : ಪಟ್ಟಣ ಪಂಚಾಯತ್ ‘ಮೌನಂ ಸಮ್ಮತಿ ಲಕ್ಷಣಂ..!?

ಹಳೆಕೋಟೆಯಲ್ಲಿ ತಲೆ ಎತ್ತಿದೆ; ಧಾರ್ಮಿಕ ವ್ಯಕ್ತಿಯ ಅಕ್ರಮ ಬಂಗ್ಲೆ : ಪಟ್ಟಣ ಪಂಚಾಯತ್ ‘ಮೌನಂ ಸಮ್ಮತಿ ಲಕ್ಷಣಂ..!?

Share

ಬೆಳ್ತಂಗಡಿ : ಪ್ರತಿಷ್ಠಿತ ಧಾರ್ಮಿಕ ಧ್ಯಾನ ಕೇಂದ್ರವನ್ನು ನಡೆಸುತ್ತಿರುವ ಖಾಸಗಿ ವ್ಯಕ್ತಿಯೊಬ್ಬರು ಬೇರೊಬ್ಬರಿಗೆ ಸೆರಿದ ಖಾಸಗಿ ಜಾಗವನ್ನು ಕಬಳಿಸುವ ಹುನ್ನಾರವೆಂಬಂತೆ ಅತಿಕ್ರಮಿಸಿ ಸ್ಥಳೀಯಾಡಳಿತದ ಯಾವುದೇ ಪರವಾನಗಿ ಪಡೆಯದೆ 2 ಮಹಡಿಗಳ ಅಕ್ರಮ ಬಂಗ್ಲೆಯೊಂದನ್ನು ನಿರ್ಮಿಸುತ್ತಿರುವುದು ಇದೀಗ ಬೆಳಕಿಗೆ ಬಂದಿದೆ.
ಆದರೆ ಈ ಅತಿಕ್ರಮಣ ಮತ್ತು ಅಕ್ರಮ ಬಂಗ್ಲೆ ನಿರ್ಮಾಣದ ಬಗ್ಗೆ ಪಟ್ಟಣ ಪಂಚಾಯತ್ ಜಾಣ ಕುರುಡುತನದಿಂದ ವರ್ತಿಸುತ್ತಿರುವುದು ‘ಮೌನಂ ಸಮ್ಮತಿ ಲಕ್ಷಣಂ’ ಎಂಬಂತಾಗಿದೆ.
ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹಳೆಕೋಟೆ ಖಾಸಗಿ ಕಾಲೇಜಿನ ಹಿಂಭಾಗದಲ್ಲಿ ಪ್ರಭಾಕರ್ ಸಿ.ಹೆಚ್. ಎಂಬವರು ಪಟ್ಟಣ ಪಂಚಾಯತ್ ಆಡಳಿತದಿಂದ ನಿಯಮ ಪ್ರಕಾರ ಯಾವುದೇ ಅನುಮತಿ ಪಡೆಯದೆ ಅಕ್ರಮ ಕಟ್ಟಡವೊಂದನ್ನು ನಿರ್ಮಿಸುತ್ತಿರುವ ಕುತೂಹಲಕರ ಸಂಗತಿ ಇದೀಗ ಬಯಲಾಗಿದೆ.
ಬೆಳ್ತಂಗಡಿಯ ಹಳೆಕೋಟೆಯ ಸಾಯಿ ಮಂದಿರದ ಬಳಿ ತಲೆ ಎತ್ತಿರುವ ಅಕ್ರಮ ಕಟ್ಟಡ ನಿರ್ಮಾಣವು ಪಕ್ಕದ ಬೇರೊಬ್ಬರ ಜಾಗದ ಸುತ್ತ ನಿಯಮ ಪ್ರಕಾರ ಖಾಲಿ ಬಿಡ ಬೇಕಾದಷ್ಟು ಜಾಗವನ್ನು ಬಿಡದೆ
ಅತಿಕ್ರಮಿಸಿ ಅಕ್ರಮವಾಗಿ ವಾಣಿಜ್ಯ ಕಟ್ಟಡವನ್ನು ನಿರ್ಮಿಸುತ್ತಿರುವುದಕ್ಕೆ ಖಾಲಿ ಕಟ್ಟಡವೇ ಪ್ರತ್ಯಕ್ಷ ಸಾಕ್ಷಿಯಾಗಿದೆ.
ಈ ಬೃಹತ್ ಅಕ್ರಮ ಕಟ್ಟಡವು ಪಕ್ಕದ ಖಾಸಗಿ ಜಾಗವನ್ನು ಅತಿಕ್ರಮಿಸಿದ್ದಲ್ಲದೆ ಈ ಜಾಗದ ಮೂಲಕ ಪೈಪ್ ಲೈನ್ ಅಳವಡಿಸಿ ಕಿರುಕುಳ ನೀಡುತ್ತಿರುವ ಬಗ್ಗೆ ನೊಂದವರು ಪಟ್ಟಣ ಪಂಚಾಯತ್ ಆಡಳಿತಕ್ಕೆ ದೂರು ನೀಡಿ ನ್ಯಾಯ ಕೇಳಿದ್ದಾರೆ.
ಅನಧಿಕೃತ ಬಂಗ್ಲೆ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಇದೀಗ ದೂರು ನೀಡಲಾಗಿದೆ.
ಆದರೆ ಸುಮಾರು ಒಂದು ವರ್ಷದಿಂದ ಅಕ್ರಮ ಕಟ್ಟಡದ ಕಾಮಗಾರಿ ನಿರಾತಂಕವಾಗಿ ನಡೆಯುತ್ತಿದ್ದರೂ ಬೆಳ್ತಂಗಡಿ ಪಟ್ಟಣ ಪಂಚಾಯತ್ ಆಡಳಿತವು ನಮಗೆ ಸಂಬಂಧವೇ ಇಲ್ಲವೆಂಬಂತೆ ದೂರು ಕೊಡುವ ಮೊದಲಾಗಲಿ ನಂತರವಾಗಲಿ ಯಾವ ಕ್ರಮವನ್ನೂ ಕೈಗೊಳ್ಳದೆ ಕಾಲಹರಣ ಮಾಡುತ್ತಿರುವುದು ಸ್ಥಳೀಯರಲ್ಲಿ ಸಂಶಯ ಮೂಡಿಸಿದೆ.
ವ್ಯವಹಾರದ ಹೆಸರಿನಲ್ಲಿ ಜಿ.ಪಿ.ಎ ಪಡೆದುಕೊಂಡು ಮೊದಲೇ
ಯಾರದೋ ಖಾಸಗಿ ಜಾಗವನ್ನು ಷಡ್ಯಂತ್ರದಿಂದ ಅಧರ್ಮದಿಂದ ಕಬಳಿಸಿಕೊಂಡು ಪ್ರತಿಷ್ಠಿತ ಧಾರ್ಮಿಕ ಧ್ಯಾನ ಕೇಂದ್ರವೊಂದನ್ನು ಮುನ್ನಡೆಸುತ್ತಿರುವ ಇದೇ ಖಾಸಗಿ ವ್ಯಕ್ತಿ ಇದೀಗ ಮತ್ತೆ ಧಾರ್ಮಿಕ ಹೆಸರನ್ನು ಮುಂದಿಟ್ಟು ಅನ್ಯರ ಭೂಮಿಗೆ ಅಮೀಬಾದಂತೆ ಸಿಕ್ಕದಲ್ಲೆಲ್ಲಾ ಪಾದ ಚಾಚಿ ಭೂಪಿಶಾಚಿಯಾಗಿ ಕಿರುಕುಳ ನೀಡುತ್ತಿರುವುದು ಈ ಬಗ್ಗೆ ಕೊಟ್ಟ ದೂರುಗಳಿಗೆ ಸ್ಪಂದಿಸದಿರುವುದು ಸಂಶಯಕ್ಕೆಡೆ ಮಾಡಿದೆ. ಧಾರ್ಮಿಕತೆಯ ಮುಖವಾಡ ಹೊತ್ತ ಖದೀಮನ ಹಿಂದೆ ಬೆಂಗಾವಲುಗಾರರಾಗಿ ಇನ್ನಷ್ಟು ಗೋಮುಖ ವ್ಯಾಘ್ರರ ಚಲನವಲನಗಳು ಕಂಡು ಬರುತ್ತಿದ್ದು ನೊಂದ ಆಕ್ರೋಶಿತರು ಸಿಡಿದೆದ್ದರೆ ಮುಂದೈತೆ ಮಾರಿ ಹಬ್ಬ ಎಂಬ ಮಾತುಗಳು ಶ್ರೀ ಸತ್ಯಸಾಯಿ ಮಂದಿರದ ಗೋಡೆಗಳ ಸುತ್ತ ಕೇಳಿ ಬರುತ್ತಿದೆ.
ಈ ಅಕ್ರಮ ಕಟ್ಟಡಕ್ಕೆ ಪಟ್ಟಣ ಪಂಚಾಯತ್ ಆಡಳಿತದ ರಕ್ಷಣೆಯೋ ಬೆಂಬಲವೋ ಕುಮ್ಮಕ್ಕೋ ಎಂಬ ಪ್ರಶ್ನೆಗಳು ಉದ್ಭವಿಸಿದೆ.

Post Comment

ಟ್ರೆಂಡಿಂಗ್‌