ಇತ್ತ ಬ್ಯಾಂಕ್ ಮುಳುಗುತ್ತಿದೆ..!! ಅತ್ತ ಬ್ಯಾಂಕ್ ಅಧ್ಯಕ್ಷರ ಕೋಟಿ ಬಂಗ್ಲೆ ತಲೆ ಎತ್ತಿದೆ..!!

ಇತ್ತ ಬ್ಯಾಂಕ್ ಮುಳುಗುತ್ತಿದೆ..!! ಅತ್ತ ಬ್ಯಾಂಕ್ ಅಧ್ಯಕ್ಷರ ಕೋಟಿ ಬಂಗ್ಲೆ ತಲೆ ಎತ್ತಿದೆ..!!

Share
IMG-20241015-WA0000-1-1024x768 ಇತ್ತ ಬ್ಯಾಂಕ್ ಮುಳುಗುತ್ತಿದೆ..!! ಅತ್ತ ಬ್ಯಾಂಕ್ ಅಧ್ಯಕ್ಷರ      ಕೋಟಿ ಬಂಗ್ಲೆ  ತಲೆ ಎತ್ತಿದೆ..!!

ಬೆಳ್ತಂಗಡಿ : ನಗರದ ಧ್ಯಾನ ಮಂದಿರವೊಂದರ ಮುಖ್ಯಸ್ಥರೊಬ್ಬರು ಅಧ್ಯಕ್ಷರಾಗಿರುವ ಆಡಳಿತ ಮಂಡಳಿ ಹೊಂದಿರುವ ಶ್ರೀರಾಮ್ ಕೋ. ಆಪರೇಟಿವ್ ಸೊಸೈಟಿಯೊಂದು ಕೋಟ್ಯಾಂತರ ರೂಪಾಯಿ
ಅವ್ಯವಹಾರದಿಂದ ಮುಳುಗುತ್ತಿದ್ದು ಅವ್ಯವಹಾರ ನಡೆಸಿದವರೇ ಬ್ಯಾಂಕಿನ ಮ್ಯಾನೇಜರ್ ನನ್ನು ಅಮಾನತು ಮಾಡಿ ರಜೆಯಲ್ಲಿ ಕಳಿಸಿ ಅವ್ಯವಹಾರವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವ ಸ್ಫೋಟಕ ಸಂಗತಿಯೊಂದು ಇದೀಗ ಬೆಳಕಿಗೆ ಬಂದಿದೆ. ಬೆಳ್ತಂಗಡಿ ಸಂತೆಕಟ್ಟೆಯ ಜ್ಯೂನಿಯರ್ ಕಾಲೇಜು ರಸ್ತೆಯಲ್ಲಿರುವ ವಿ.ಆರ್. ನಾಯಕ್ ಆವರಣದಲ್ಲಿ ಶ್ರೀರಾಮ್ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ (ಲಿ) ಇದೆ. ಶ್ರೀರಾಮ್ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ (ಲಿ) ಇದರ 2021-22 ರಿಂದ 2025 -26ವರೆಗಿನ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿ ಪ್ರಭಾಕರ್ ಸಿ.ಹೆಚ್., ಉಪಾಧ್ಯಕ್ಷರಾಗಿ ಸದಾನಂದ ಎಂ ಉಜಿರೆ., ಕಾರ್ಯದರ್ಶಿಯಾಗಿ ಚಂದ್ರಕಾಂತ್ ಹಾಗೂ 10 ಮಂದಿ ನಿರ್ದೇಶಕರುಗಳಾಗಿ ವಿಶ್ವನಾಥ ಆರ್ ನಾಯಕ್, ಪ್ರಮೋದ್ ಆರ್ ನಾಯಕ್, ಮೋಹನ್ ದಾಸ್ ಕೆ., ಕಿಶೋರ್ ಕುಮಾರ್ ಕೆ. ಲಾಯಿಲಾ, ವಿಶ್ವನಾಥ, ಪಿ.ಜಗನ್ನಾಥ, ರತ್ನಾಕರ ವೇಣೂರು, ರಾಘವೇಂದ್ರ ಹೆಚ್., ಸುಮಾ ದಿನೇಶ್ ಉಜಿರೆ., ನಯನ ಶಿವಪ್ರಸಾದ್ ಎಂಬವರು ಕಾರ್ಯನಿರ್ವಹಿಸುತ್ತಿದ್ದಾರೆ.
ಅಚ್ಚರಿಯ ಸಂಗತಿ ಎಂದರೆ ಬ್ಯಾಂಕ್ ನಿಂದ ಸಾಲ ಪಡೆದವರ ಸಾಲವನ್ನು ಸಕಾಲದಲ್ಲಿ ಸಮರ್ಪಕವಾಗಿ ವಸೂಲಾತಿ ಮಾಡುವ ಬಗ್ಗೆ ಮುತುವರ್ಜಿವಹಿಸಿ ಶ್ರೀರಾಮ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ (ಲಿ) ಬ್ಯಾಂಕ್ ಹೆಸರನ್ನು ಜನಪ್ರಿಯಗೊಳಿಸಿ ಠೇವಣಿದಾರರನ್ನು ಗ್ರಾಹಕರನ್ನು ಆಕರ್ಷಿಸಬೇಕಾಗಿದ್ದ ಅಧ್ಯಕ್ಷ ಪ್ರಭಾಕರ ಸಿ.ಹೆಚ್. ಅವರೇ 1.5ರಿಂದ 2.ಕೋಟಿ ರೂಪಾಯಿವರೆಗೆ ತಾನೇ ಬೇಕಾಬಿಟ್ಟಿ ಸಾಲ ಪಡೆದು ಮರುಪಾವತಿಸದೆ ಓವರ್ ಡ್ಯೂ ಇಟ್ಟು ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿ ಬ್ಯಾಂಕ್ ಹೆಸರಿಗೂ ಪ್ರಾಮಾಣಿಕ ನಿರ್ದೇಶಕರಿಗೂ ತಲೆಮರೆಸಿ ಓಡಾಡುವಂತೆ ಮಾಡಿ ಬ್ಯಾಂಕ್ ಹೆಸರಿಗೂ ಕಳಂಕ ತಂದಿರುವುದು ಠೇವಣಿದಾರರ , ಪಿಗ್ಮಿ ಸಂಗ್ರಾಹಕರ , ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.
ಒಂದು ಮಾಹಿತಿಯ ಪ್ರಕಾರ ಠೇವಣಿದಾರರ ಸುಮಾರು 10ರಿಂದ 15 ಕೋಟಿ ರೂಪಾಯಿ ಠೇವಣಿ ಮೊಬಲಗು ಅವ್ಯವಹಾರವಾಗಿದ್ದು ಇನ್ನೊಂದೆಡೆ ಠೇವಣಿದಾರರಿಗೆ ಬ್ಯಾಂಕ್ ನಿಂದ ನೀಡಲಾಗಿರುವ ಠೇವಣಿ ಬಾಂಡ್ ಕೂಡ ಫೇಕ್ ಆಗಿರುತ್ತದೆ ಎಂಬ ಗಂಭೀರ ಆರೋಪವೂ ಇದೀಗ ಕೇಳಿ ಬರುತ್ತಿದೆ.
ಅಧ್ಯಕ್ಷನ ಅಧಕ್ಷ ಆಡಳಿತದಿಂದ ಅವ್ಯವಹಾರದಿಂದ ಬ್ಯಾಂಕ್ ಮುಳುಗುತ್ತಿರುವ ಮುನ್ಸೂಚನೆ ಅರಿತ ಕೆಲವು ಠೇವಣಿದಾರರು ಠೇವಣಿ ಮೊಬಲಗು ವಾಪಾಸು ಪಡೆಯಲು ಪ್ರಯತ್ನಿಸಿ
ವಿಫಲರಾಗಿದ್ದು ಒಂದು ವೇಳೆ ಠೇವಣಿ ಮೊಬಲಗಿನ ಬಾಂಡ್ ಫೇಕ್ ಆಗಿದ್ದರೆ ತಮ್ಮ ಹ‌ಣ‌ಕ್ಕೆ ಗತಿ ಏನೆಂಬ ಆತಂಕದಲ್ಲಿದ್ದಾರೆ.
ಅನೇಕ ಪಿಗ್ಮಿ ಗ್ರಾಹಕರ ಲಕ್ಷಾಂತರ ರೂಪಾಯಿ ಹಣವನ್ನೂ ಕೊಡದೆ ಸತಾಯಿಸುತ್ತಿದ್ದು ಬಡವರು ದುಡಿದು ಕಟ್ಟಿದ ಹಣ ಕೈಗೆ ವಾಪಾಸು ಸಿಕ್ಕಿಲ್ಲ ಎಂಬ ಮಾತುಗಳು ನೊಂದವರಿಂದಲೇ ಕೇಳಿ ಬರುತ್ತಿದೆ.
ಈ ಮಧ್ಯೆ ಅಧ್ಯಕ್ಷ, ಉಪಾಧ್ಯಕ್ಷ ನಿರ್ದೇಶಕರು , ಮ್ಯಾನೇಜರ್ ಸೇರಿದಂತೆ ಇಡೀ ಆಡಳಿತ ಮಂಡಳಿಯ ವಿರುದ್ಧ ಬ್ಯಾಂಕ್ ನ ಪ್ರಧಾನ ಕಚೇರಿಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೂ ಠೇವಣಿ ಮೊಬಲಗು ವಂಚಿತರಾಗಿ ನೊಂದ ಸುಮಾರು 10 ಮಂದಿ ಠೇವಣಿದಾರರು ದೂರು ನೀಡಿದ್ದು ಬೃಹತ್ ಅವ್ಯವಹಾರದ ತನಿಖೆಗೆ ಒತ್ತಾಯಿಸಿ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ.
ಈ ದೂರಿನ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ
ಆಡಳಿತ ಮಂಡಳಿಗೆ ನೋಟಿಸ್ ನೀಡಲಾಗಿದ್ದು ಬ್ಯಾಂಕಿನ ಕೋಟಿ ಕೋಟಿ ಅವ್ಯವಹಾರದ ಆರೋಪ ಹೊತ್ತ ಆಡಳಿತ ಮಂಡಳಿ ವಿರುದ್ಧ ದೂರಿನ ಬಗ್ಗೆ ತನಿಖೆ , ವಿಚಾರಣೆ ನಡೆದು ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಳ್ಳುವ ಆತಂಕದಲ್ಲಿರುವ ಠೇವಣಿದಾರರಿಗೆ ಠೇವಣಿ ಮೊಬಲಗು, ಪಿಗ್ಮಿ ಗ್ರಾಹಕರ ಕೈಗೆ ಹಣ ಮತ್ತು ನ್ಯಾಯ ಸಿಗಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ.


Post Comment

ಟ್ರೆಂಡಿಂಗ್‌